ಉಡುಪಿ ಜ್ಞಾನಸುಧಾ ಮತ್ತು ಮಣಿಪಾಲ ಜ್ಞಾನಸುಧಾ ಜಂಟಿಕಾಲೇಜು ವಾರ್ಷಿಕೋತ್ಸವ : ಜ್ಞಾನಸಂಭ್ರಮ-ಕಹಳೆ ನ್ಯೂಸ್
ಉಡುಪಿ: ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿಯೂ ಗಣನೀಯವಾಗಿ ಸಾಧನೆಗೈಯಲು ಪ್ರೋತ್ಸಾಹ ನೀಡುತ್ತಾ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಮನೆಮಾತಾಗಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ನಿಜವಾಗಿಯೂ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅತ್ಯಮೂಲ್ಯ ಕೊಡುಗೆ ಕೊಡುತ್ತಿದೆ. ಇಂತಹ ಸಂಸ್ಕಾರಯುತ ಶಿಕ್ಷಣ ಪಡೆದ ವಿದ್ಯಾರ್ಥಿ ಸಮೂಹ ದೇಶದ ಬಲವರ್ದನೆಗೆ ದುಡಿಯಬೇಕು ಎಂದು ಎನ್.ಎಸ್.ಎಸ್. ಮಾಜಿ ರಾಜ್ಯ ಸಂಯೋಜನಾಧಿಕಾರಿಗಳು, ನಿವೃತ್ತ ಪ್ರಾಂಶುಪಾಲರಾಗಿರುವ ಡಾ.ಗಣನಾಥ ಎಕ್ಕಾರು ಹೇಳಿದರು. ಅವರು ಉಡುಪಿ ಜ್ಞಾನಸುಧಾ ಮತ್ತು ಮಣಿಪಾಲ ಜ್ಞಾನಸುಧಾ...