ಬ್ರಹ್ಮಶ್ರೀ ನಾರಾಯಣ ಗುರುಗಳ ಸರಳತೆಯ ಸೂತ್ರ ಪಾಲಿಸಿದರೆ ಬದುಕು ಸುಂದರ; ಸಂದೀಪ್ ಸಾಲ್ಯಾನ್-ಕಹಳೆ ನ್ಯೂಸ್
ಬಂಟ್ವಾಳ: ವಿದ್ಯೆಯಿಂದ ಸ್ವತಂತ್ರರಾಗಬೇಕಾದ ಇಂದಿನ ಯುವ ಸಮುದಾಯ ವಿದ್ಯಾವಂತರಾದರೂ ಸರಿ, ತಪ್ಪುಗಳನ್ನು ಸ್ವತಂತ್ರವಾಗಿ ಯೋಚಿಸಿ, ತೀರ್ಮಾನಿಸುವ ಶಕ್ತಿಯನ್ನು ಕಳೆದುಕೊಂಡಿದೆ, ಸಂಘಟನೆಯಿಂದ ಬಲಯುತರಾಗ ಬೇಕಾದವರು ಜಾತಿ, ಧರ್ಮದ ಹೆಸರಿನಲ್ಲಿ ಸಂಘಟನೆಯಾಗದೆ ವಿಘಟನೆಯಾಗುತ್ತಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಪರಿಕಲ್ಪನೆ ವಿಶಾಲವಾದ ಅರ್ಥವನ್ನು ಹೊಂದಿದೆ. ಇದು ವಿಶ್ವ ಮಾನವತೆಯ ಮಂತ್ರ, ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅಸಮಾನತೆ ಈ ಜಗದಲ್ಲಿರಲು ಸಾಧ್ಯವಿಲ್ಲ ಎಂದು ಪತ್ರಕರ್ತ,...