ವ್ಯವಹಾರಿಕ ಜ್ಞಾನದ ತೀವ್ರತೆಯಿಂದ ಸಾಹಿತ್ಯ ಒಲವು ಕ್ಷೀಣಿಸುತ್ತಿದೆ : ಡಾ. ರಾಘವೇಂದ್ರ ರಾವ್-ಕಹಳೆ ನ್ಯೂಸ್
ಮಂಗಳೂರು: ಪ್ರಸ್ತುತ ಜಗತ್ತು ವ್ಯವಹಾರದ ಸುತ್ತ ಅಲೆಯುತ್ತಿದ್ದು ಸಾಹಿತ್ಯದ ಮೇಲಿನ ಒಲವು ಕಡಿಮೆಯಾಗಿದೆ. ವ್ಯವಹಾರಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಸಾಹಿತ್ಯದ ಮೇಲಿನ ಒಲವು ಕ್ಷೀಣಿಸುತ್ತಿದೆ. ಯುವಜನರಲ್ಲಿ ಸಾಹಿತ್ಯ ಕುರಿತಾದ ಒಲವು ಇರಲೇಬೇಕು ಎಂದು ಪಡುಬಿದ್ರಿ ಪ್ರೌಢಶಾಲಾ ಸಂಸ್ಕೃತ ಉಪನ್ಯಾಸಕ ವಿದ್ವಾನ್ ಡಾ. ರಾಘವೇಂದ್ರ ರಾವ್ ತಿಳಿಸಿದರು. ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾರತ್ ಫೌಂಡೇಶನ್ ಹಾಗೂ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಇವರ ಸಂಯುಕ್ತ...