ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಯುವನಿಧಿ ನೊಂದಣಿ ಶಿಬಿರ -ಕಹಳೆ ನ್ಯೂಸ್
ಸುಳ್ಯ : ನೆಹರು ಮೆಮೋರಿಯಲ್ ಕಾಲೇಜಿನ ಉದ್ಯೋಗ ಮತ್ತು ಮಾರ್ಗದರ್ಶನ ಕೋಶ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ತಾಲೂಕು ಯುವನಿಧಿ ಸಮಿತಿ ಆಶ್ರಯದಲ್ಲಿ ಯುವನಿಧಿ ನೋಂದಣಿ ಶಿಬಿರ ಜನವರಿ ಹತ್ತನೇ ಶುಕ್ರವಾರದಂದು ಕಾಲೇಜಿನ ದೃಶ್ಯ ಶ್ರವಣ ಸಭಾಂಗಣದಲ್ಲಿ ನಡೆಯಿತು. ತಾಲೂಕು ಯುವನಿಧಿ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಪಂಚಾಯತ್ ಮುಖ್ಯ...