ಗೋವಿನ ಕೆಚ್ಚಲು ಕೆತ್ತಿದ ಪ್ರಕರಣಕ್ಕೆ ಪೇಜಾವರ ಶ್ರೀ ದಿಗ್ಭ್ರಮೆ ; ಆಮರಣಾಂತ ಉಪವಾಸದ ಎಚ್ಚರಿಕೆ-ಕಹಳೆ ನ್ಯೂಸ್
ಉಡುಪಿ : ಚಾಮರಾಜನಗರದಲ್ಲಿ ದೇಶವೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಡೆದಿರುವ ಗೋವಿನ ಕೆಚ್ಚಲು ಸೀಳಿದ ಭೀಭತ್ಸ ಕೃತ್ಯಕ್ಕೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಬಗ್ಗೆ ತಿಳಿದ ತಕ್ಷಣ ..ಹ್ಞಾಂ ...ಅಯ್ಯೋ ...ರಾಮಾ....ಗೋವಿನ ಮೇಲಿನ ಕ್ರೌರ್ಯಕ್ಕೆ ಯಾವ ಅಂತ್ಯವೂ ಶಿಕ್ಷೆಯೂ ಈ ನೆಲದಲ್ಲಿ ಇಲ್ಲದಾಯಿತೇ ಎಂದು ಮಮ್ಮಲ ಮರುಗಿದ್ದಾರೆ . ಬಹುಸಂಖ್ಯಾತರಾಗಿದ್ದೂ ಜಾತ್ಯತೀತ ನ್ಯಾಯದ ನೆಪದಲ್ಲಿ ನಮ್ಮ ಭಾವನೆ ಶ್ರದ್ಧೆಗಳಿಗೆ ಕೊಡಲಿ ಏಟು...