ರಾಮಮಂದಿರ ನಿರ್ಮಾಣ: ಖ್ಯಾತ ವಾಸ್ತುಶಿಲ್ಪಿ,ಸಂತರಿಂದ ಸಲಹೆ ಕೋರಿದ ಟ್ರಸ್ಟ್ -ಕಹಳೆ ನ್ಯೂಸ್
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ವಾಸ್ತುಶಿಲ್ಪಿಗಳು ಮತ್ತು ಸಂತರ ಸಲಹೆಗಳನ್ನು ಆಹ್ವಾನಿಸಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಭಾನುವಾರ ತಿಳಿಸಿದ್ದಾರೆ. ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಲಿಮಿಟೆಡ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಲಿದೆ ಮತ್ತು ನಿರ್ಮಾಣ ಕಾರ್ಯಗಳಲ್ಲಿ ಲಾರ್ಸೆನ್ ಮತ್ತು ಟರ್ಬೋ (ಎಲ್ ಆಂಡ್ ಟಿ) ಸಹಾಯ ನೀಡಲಿದೆ ಎಂದು...