Recent Posts

Monday, January 20, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಪ್ರಧಾನಿಯವರಿಂದ ಮೈಸೂರು ವಿವಿ ಘಟಿಕೋತ್ಸವ ಭಾಷಣ-ಕಹಳೆ ನ್ಯೂಸ್

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಐತಿಹಾಸಿಕ 100ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘಟಿಕೋತ್ಸವ ಭಾಷಣ ಮಾಡುತ್ತಿದ್ದು, ಅದರ ನೇರ ಪ್ರಸಾರ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಬಹುದು. ಪ್ರಧಾನಿ ನರೇಂದ್ರಮೋದಿಯವರ ಭಾಷಣದ ಸಾರ ಇಲ್ಲಿದೆ. ಎಲ್ಲರಿಗೂ ಮೈಸೂರು ದಸರಾ, ನಾಡಹಬ್ಬದ ಹೃದಯಪೂರ್ವಕ ಶುಭಾಶಯಗಳು. ಕೆಲವೊಂದು ಛಾಯಾಚಿತ್ರಗಳನ್ನು ಗಮನಿಸುತ್ತಿದ್ದೆ. ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧಗಳಿರಬಹುದು. ಆದರೆ, ಸಂಭ್ರಮದ ಉತ್ಸಾಹಕ್ಕೇನೂ ಕೊರತೆ ಇಲ್ಲ. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ತೊಂದರೆಯಾಗಿದೆ. ಸಂತ್ರಸ್ತರ ಬಗ್ಗೆ ನನ್ನ...
ಹೆಚ್ಚಿನ ಸುದ್ದಿ

ಧರ್ಮಸ್ಥಳದಿಂದ ಹಾಲು ಉತ್ಪಾದಕ ಮಹಿಳಾ ಸಂಘಕ್ಕೆ 1 ಲಕ್ಷ ರೂ ದೇಣಿಗೆ ಹಸ್ತಾಂತರ-ಕಹಳೆ ನ್ಯೂಸ್

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರುಗೊಂಡ 1 ಲಕ್ಷ ಅನುದಾನವನ್ನು ಬಂದಾರು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಡಿ.ಡಿ.ಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಗುರುವಾಯನಕೆರೆ ಯೋಜನಾ ಕಚೇರಿಯ ಯೋಜನಾಧಿಕಾರಿ ಯಶವಂತ್, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ವಲಯ ಅಧ್ಯಕ್ಷ...
ಹೆಚ್ಚಿನ ಸುದ್ದಿ

ಅ.21 ರಂದು ಉತ್ತರಕರ್ನಾಟಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ಬಿಎಸ್ ವೈಮಾನಿಕ ಸಮೀಕ್ಷೆ- ಕಹಳೆ ನ್ಯೂಸ್

ಬೆಂಗಳೂರು: ಕಲಬುರ್ಗಿ, ರಾಯಚೂರು, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ವಾಸ್ತವಿಕ ಪ್ರಮಾಣ ಅರಿಯಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇದೇ ಬುಧವಾರ (ಅ.21) ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಭಾನುವಾರ ಶಿವಮೊಗ್ಗಕ್ಕೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ನೆರೆ ಸಂತ್ರಸ್ತರ ಜತೆ ಇಡೀ ಸರ್ಕಾರ ಇದೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವವರನ್ನು ಸ್ಥಳಾಂತರಿಸುವ ಕೆಲಸವನ್ನು ಆಯಾ ಜಿಲ್ಲಾಡಳಿತ ಮಾಡುತ್ತಿವೆ. ಕಂದಾಯ ಸಚಿವ ಆರ್‌. ಅಶೋಕ ಈಗಾಗಲೇ...
ಹೆಚ್ಚಿನ ಸುದ್ದಿ

ಮತಾಂತರಗೊಂಡು ಹೆಣವಾದ ಯುವತಿ! -ಕಹಳೆ ನ್ಯೂಸ್

ಲಖನೌ: ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವತಿಯೊಬ್ಬಳು ನ್ಯಾಯಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕೋರಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ. ಗಂಡನ ಮನೆಯವರು ಕೊಡುವ ಹಿಂಸೆಯನ್ನು ಸಹಿಸಲಾರದೇ ಉತ್ತರ ಪ್ರದೇಶದ ವಿಧಾನಸಭಾ ಕಟ್ಟಡದ ಎದುರೇ ಮೊನ್ನೆ ಬೆಂಕಿಹಚ್ಚಿಕೊಂಡಿದ್ದ ಈ ಯುವತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಂಜನಾ ತಿವಾರಿ ಅಲಿಯಾಸ್​ ಆಯೇಷಾ ಈ ದುರ್ದೈವಿ. ಗಂಡನ ಮನೆಯವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಮುಖ್ಯಮಂತ್ರಿಗಳನ್ನೇ...
ಹೆಚ್ಚಿನ ಸುದ್ದಿ

ಗ್ರಾಹಕರ ಗಮನಕ್ಕೆ : ಗ್ಯಾಸ್ ಸಿಲಿಂಡರ್ ಬೇಕಾದ್ರೇ ‘ನವೆಂಬರ್1‌ ರಿಂದ ಓಟಿಪಿ ಕಡ್ಡಾಯ’ -ಕಹಳೆ ನ್ಯೂಸ್

ನವದೆಹಲಿ : ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಮನೆ ವಿತರಣೆಗೆ ಮುಂದಿನ ತಿಂಗಳಿನಿಂದ ಒಟಿಪಿ ಅಥವಾ ಒನ್‌-ಟೈಮ್ ಪಾಸ್‌ವರ್ಡ್ ಕಡ್ಡಾಯವಾಗಿದೆ. ಅಡುಗೆ ಅನಿಲ ಸಿಲಿಂಡರ್‌ಗಳ ಮನೆ ಬಾಗಿಲನ್ನು ಸ್ವೀಕರಿಸಲು ಬಯಸುವ ವ್ಯಕ್ತಿಗಳಿಗೆ ಈಗ ಪ್ರಕ್ರಿಯೆಗೆ ಒಂದು-ಬಾರಿ ಪಾಸ್‌ವರ್ಡ್ (ಒಟಿಪಿ) ಅಗತ್ಯವಿದೆ ಎಂದು ತಿಳಿದು ಬಂದಿದೆ. ತೈಲ ಮಧ್ಯವರ್ತಿಗಳು ಸಿಲಿಂಡರ್‌ಗಳ ಕಳ್ಳತನವನ್ನು ತಡೆಗಟ್ಟಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸಲು ಡೆಲಿವರಿ ದೃಢೀಕರಣ ಕೋಡ್ (ಡಿಎಸಿ) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿವೆ...
ಹೆಚ್ಚಿನ ಸುದ್ದಿ

ಲವ್ ಜಿಹಾದ್ ವಿರುದ್ಧ ʼಕಾನೂನುʼ ರೂಪಿಸಬೇಕೆಂದು ಕೇಂದ್ರಕ್ಕೆ ‘ವಿಶ್ವ ಹಿಂದೂ ಪರಿಷತ್’ ಆಗ್ರಹ-ಕಹಳೆ ನ್ಯೂಸ್

 ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಕೇಂದ್ರ ಸರಕಾರವನ್ನ ಆಗ್ರಹಿಸಿದೆ. ಇತ್ತಿಚಿನ ದಿನಗಳಲ್ಲಿ ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಸರ್ಕಾರ ಇದರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದು ಹಿಂದು ಪರಿಷತ್‌ ಆಗ್ರಹಿಸಿದೆ. ಇನ್ನು ಸರ್ಕಾರದ ಹಣದಲ್ಲಿ ನಡೆಯುತ್ತಿರುವ ಎಲ್ಲ ಮದರಸಾಗಳನ್ನ ನಿಲ್ಲಿಸಬೇಕು ಎಂದು ವಿಎಚ್ ಪಿ ಹೇಳಿದೆ. ಇನ್ನು ಇತ್ತಿಚಿಗಷ್ಟೇ ಅಸ್ಸಾಂ ಸರ್ಕಾರ, ಸಾರ್ವಜನಿಕ ಹಣದಿಂದ ಧಾರ್ಮಿಕ ಗ್ರಂಥಗಳನ್ನ...
ಹೆಚ್ಚಿನ ಸುದ್ದಿ

ಕನಿಷ್ಠ ʼಮದುವೆ ವಯಸ್ಸಿನʼ ಕುರಿತು ʼಪ್ರಧಾನಿʼಗಳಿಂದ ಮುಖ್ಯ ಮಾಹಿತಿ..!-ಕಹಳೆ ನ್ಯೂಸ್

ನವದೆಹಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸನ್ನ ಹೆಚ್ಚಿಸಬೇಕು ಎನ್ನುವ ಕೂಗು ತುಂಬಾ ವರ್ಷಗಳಿಂದ ಕೇಳಿ ಬರ್ತಿದೆ. ಅದ್ರಂತೆ, ಪ್ರಧಾನಿ ಮೋದಿ ಇಂದು ಹೆಣ್ಮಕ್ಕಳ ಮದುವೆಯಾಗುವುದಕ್ಕೆ ಇರುವ ಕನಿಷ್ಠ ವಯಸ್ಸು ಎಷ್ಟಿರಬೇಕು ಎಂಬ ಬಗ್ಗೆ ಸರ್ಕಾರ ಶೀಘ್ರವೇ ನಿರ್ಣಯ ತೆಗೆದುಕೊಳ್ಳಲಿದೆ ಎಂದು ಹೇಳಿದರು. ಹೆಣ್ಮಕ್ಕಳು ಮದುವೆಯಾಗಲು ಕನಿಷ್ಟ ಎಷ್ಟು ವಯಸ್ಸಿರಬೇಕು ಎಂಬುದನ್ನ ಅಧ್ಯಯನ ಮಾಡಿ ಶಿಫಾರಸು ಮಾಡಲು ಸಮಿತಿಯೊಂದನ್ನ ರಚಿಸಲಾಗಿದೆ. ಅದು ನೀಡುವ ಶಿಫಾರಸಿನ ಮೇರೆಗೆ ಸರ್ಕಾರ ನಿರ್ಣಯ ತೆಗೆದುಕೊಳ್ಳಲಿದೆ ಎಂದರು....
ಹೆಚ್ಚಿನ ಸುದ್ದಿ

ಎಫ್‌ಎಒದ 75ನೇ ವಾರ್ಷಿಕೋತ್ಸವ: 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ ಮಾಡಿದ ಮೋದಿ-ಕಹಳೆ ನ್ಯೂಸ್

ನವದೆಹಲಿ: ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‌ಎಒ)ಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ 75ರ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದರು. ಇಂದು ವಿಶ್ವ ಆಹಾರ ದಿನ, ಈ ಹಿನ್ನೆಲೆಯಲ್ಲಿ ಆಹಾರ ಮತ್ತು ಕೃಷಿ ಸಂಸ್ಥೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ದೇಶಕ್ಕೆ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಜೈವಿಕ ವೈವಿಧ್ಯದ 8 ಪ್ರಬೇಧಗಳನ್ನು ಸಮರ್ಪಿಸಿದರು. ಭಾರತೀಯ ನಾಗರಿಕ ಸೇವಾ ಅಧಿಕಾರಿ ಡಾ ಬಿನಯ್ ರಂಜನ್ ಸೇನ್ 1956-57ರಲ್ಲಿ ಎಫ್‌ಎಒದ...
1 117 118 119 120 121 132
Page 119 of 132