Monday, January 27, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕೌಟುಂಬಿಕ ಕಲಹದಿಂದಾಗಿ ಐದು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಬಲಿ-ಕಹಳೆ ನ್ಯೂಸ್‍

ಜಾರ್ಖಂಡ್ ನ ಗುಮ್ಲಾದಲ್ಲಿ ಬುಡಕಟ್ಟು ಜನಾಂಗದ ಐವರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಹತ್ಯೆ ಕೌಟುಂಬಿಕ ಕಲಹದಿಂದ ನಡೆದಿದ್ದು, ಮೃತರನ್ನು ನಿಕೋಡಿನ್ ಟೊಪ್ನೊ, ಭೀಮ್ಸೆನ್ ಟೊಪ್ನೊ, ಶಿಲ್ವಂತಿ ಟೊಪ್ನೊ ಮತ್ತು ಐದು ವರ್ಷದ ಮಗು ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿನ ವೈಯಕ್ತಿಕ ಕಲಹವೇ ಇದಕ್ಕೆ ಕಾರಣ ಎಂದು ಪ್ರಾಥಮಿಕ ವರದಿ ತಿಳಿಸಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ....
ಹೆಚ್ಚಿನ ಸುದ್ದಿ

ಗುಜರಾತ್‍ನಲ್ಲಿ ದಲಿತ ವರನ ಮದುವೆ ಮೆರವಣಿಗೆ ಮೇಲೆ ಸವರ್ಣಿಯರಿಂದ ಕಲ್ಲು ತೂರಾಟ-ಕಹಳೆ ನ್ಯೂಸ್

ಗುಜರಾತ್ : ಗುಜರಾತ್‍ನ ಅರಾವಲಿ ಜಿಲ್ಲೆಯಲ್ಲಿ ವಿವಾಹದಲ್ಲಿ ದಲಿತ ವರ ಸಾಂಪ್ರದಾಯಿಕ ಟೋಪಿ ಧರಿಸಿದಕ್ಕೆ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಈ ಮೆರವಣಿಗೆಯ ಮೇಲೆ ಸವರ್ಣೀಯರು ಕಲ್ಲು ತೂರಾಟ ನಡೆಸಿದ್ದು, ಮೆರವಣಿಗೆಯಲ್ಲಿ ವರನ ಕೆಲವು ಸಂಬಂಧಿಕರು ಸಾಂಪ್ರದಾಯಿಕ ಟೋಪಿಗಳನ್ನು ಧರಿಸಿದ್ದರು, ಈ ಕಾರಣದಿಂದಾಗಿ ಸವರ್ಣಿಯರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಕಾರ, ಈವರೆಗೆ 9 ಜನರನ್ನು ಬಂಧಿಸಲಾಗಿದೆ. ಮದುವೆ ಮೆರವಣಿಗೆ ಆರಂಭದ...
ಹೆಚ್ಚಿನ ಸುದ್ದಿ

ಪದವಿನಂಗಡಿಯಲ್ಲಿ ದೈವಗಳ ಸಾನಿಧ್ಯ ಪುನರ್ ಪ್ರತಿಷ್ಠೆ ಹಾಗೂ ದೈವಗಳ ಗಗ್ಗರ ಸೇವೆ -ಕಹಳೆ ನ್ಯೂಸ್

ಪದವಿನಂಗಡಿ ಗಂಧಕಾಡುನಲ್ಲಿ ಶ್ರೀ ಮಂತ್ರದೇವತೆ ಮತ್ತು ಶ್ರೀ ಕೊರಗಜ್ಜ ಸಾನಿಧ್ಯ ಪುನರ್ ಪ್ರತಿಷ್ಠೆ ಹಾಗೂ ದೈವಗಳ ಗಗ್ಗರ ಸೇವೆಯು ನಡೆಯಲಿದೆ. ಫೆಬ್ರವರಿ 20 ಕ್ಕೆ ಆರಂಭಗೊಂಡ ಈ ಕಾರ್ಯಕ್ರಮವು ಇದೇ ಶುಕ್ರವಾರ ಅಂದರೆ ನಾಳೆ ದೈವದ ನೇಮೊತ್ಸವದೊಂದಿಗೆ ಸಮಾಪ್ತಿಗೊಳ್ಳಲಿದೆ....
ಹೆಚ್ಚಿನ ಸುದ್ದಿ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಟಿಎಂಸಿ ಪಕ್ಷ ಸೇರ್ಪಡೆ-ಕಹಳೆ ನ್ಯೂಸ್

ಕೋಲ್ಕತ್ತ : ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಹೊಸ ಯಾತ್ರೆಯೊಂದು ಇಂದಿನಿಂದ ಆರಂಭವಾಗಲಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಸಹಕಾರವನ್ನು ಬಯಸುತ್ತೇನೆ. ಇಂದಿನಿಂದ ಇದು ನನ್ನ ರಾಜಕೀಯ ಯಾತ್ರೆಯ ಪ್ರೊಫೈಲ್‌‌‌‌ ಆಗಲಿದೆ" ಎಂದಿದ್ದಾರೆ. ಈ ಹಿಂದೆ ಮನೋಜ್ ತಿವಾರಿ ಅವರು ಕೇಂದ್ರ ಸರ್ಕಾರದ ನೂತನ ಕೃಷಿ...
ಹೆಚ್ಚಿನ ಸುದ್ದಿ

ಶಬರಿಮಲೆ ಮಹಿಳಾ ಪ್ರವೇಶದ ವಿರುದ್ದ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದದ ಪ್ರತಿಭಟನೆಗಳ ಮೇಲೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ಕೇರಳ ಸಚಿವ ಸಂಪುಟ ನಿರ್ಧಾರ- ಕಹಳೆ ನ್ಯೂಸ್

ತಿರುವನಂತಪುರಂ : ಕೇರಳ ರಾಜ್ಯ ಸಚಿವ ಸಂಪುಟ ಶಬರಿಮಲೆ ಮಹಿಳಾ ಪ್ರವೇಶದ ವಿರುದ್ದ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದದ ಪ್ರತಿಭಟನೆಗಳ ಮೇಲೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಈಗ, ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿಂದೆ ಆರ್‍ಎಸ್‍ಎಸ್, ಬಿಜೆಪಿ ಸೇರಿದಂತೆ ಕೆಲ ಸಂಘಟನೆಗಳು ಶಬರಿಮಲೆಗೆ ಮಹಿಳಾ ಪ್ರವೇಶದ ವಿರುದ್ದ ನಡೆದ ಪ್ರತಿಭಟನೆಯ ವಿಚಾರವಾಗಿ ದಾಖಲಾಗಿರುವ ಪ್ರಕರಣಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದವು. ಈ ಪ್ರತಿಭಟನೆಗೆ ಸಂಬಂಧಿಸಿದ...
ಹೆಚ್ಚಿನ ಸುದ್ದಿ

ನಾವೇ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡುವಂತೆ ಹೈಕಮಾಂಡ್‍ಗೆ ನಾವು ಶಿಫಾರಸು ಮಾಡಿದ್ದೇವೆ; ಲಕ್ಷ್ಮೀ ಹೆಬ್ಬಾಳ್ಕರ್- ಕಹಳೆ ನ್ಯೂಸ್

ಬೆಳಗಾವಿ : ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾವೇ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದ್ದು, ಅವರನ್ನು ಮಂತ್ರಿ ಮಾಡುವಂತೆ ಹೈಕಮಾಂಡ್‍ಗೆ ನಾವು ಶಿಫಾರಸು ಮಾಡಿದ್ದೇವೆ ಎಂದು ಹೇಳಿದ್ದಾರೆ. ನಾನೇ ಲಕ್ಮ್ಮೀ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಿದ್ದು ಎಂದು ಹೇಳಿದ್ದ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಯಾವತ್ತೂ ಅಭಿವೃದ್ದಿ ಪರ ರಾಜಕಾರಣ ಮಾಡಬೇಕೇ ಹೊರತು ದ್ವೇಷದ ರಾಜಕಾರಣ ಮಾಡಬಾರದು. ಇದು ಶೋಭೆ ತರುವುದಿಲ್ಲ. ಅವರಿಗೆ ದೇವರು...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಅರೆಬಿಕ್ ಶಾಲಾ ಶಿಕ್ಷಕನೋರ್ವನಿಂದ ಮೈ ಮುಟ್ಟಿ ಕಿರುಕುಳ-ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಅರೆಬಿಕ್ ಶಾಲಾ ಶಿಕ್ಷಕನೋರ್ವ ಮೈ ಮುಟ್ಟಿ ಕಿರುಕುಳ ನೀಡಿದ ಘಟನೆ ಮಂಗಳವಾರ ಬೆಳಿಗ್ಗೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದೂ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಯದ ಅರೆಬಿಕ್ ಶಾಲಾ ಶಿಕ್ಷಕ  32 ವರ್ಷದ ಮುಹಮ್ಮದ್ ಸೈಫುಲ್ಲಾ  ಬಂಧಿತ ಆರೋಪಿ. ಈತ ಮೂಲತ: ಚಿಕ್ಕಮಗಳೂರಿನವನು. ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಚಲಿಸುತ್ತಿದ್ದ ಬಸ್ಸಿನಲ್ಲಿ ಕೃತ್ಯ ನಡೆದಿದ್ದೂ ವಿಷಯ ತಿಳಿದ ಬಸ್ಸಿನ ಕಾರ್ಯ ನಿರ್ವಾಹಕರು ಬಸ್ಸನ್ನು ಠಾಣೆಗೆ ಕರೆದುಕೊಂಡು...
ಹೆಚ್ಚಿನ ಸುದ್ದಿ

ಉತ್ತರಾಖಂಡದ ದುರಂತದಲ್ಲಿ ನಾಪತ್ತೆಯಾಗಿದ್ದ 136 ಮಂದಿ ಮೃತಪಟ್ಟಿದ್ದಾರೆಂದು ಘೋಷಣೆ; ಉತ್ತರಾಖಂಡ ಆರೋಗ್ಯ ಇಲಾಖೆ-ಕಹಳೆ ನ್ಯೂಸ್

ಚಮೋಲಿ : ಉತ್ತರಾಖಂಡ ಆರೋಗ್ಯ ಇಲಾಖೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟ ಬಳಿಕ ಉಂಟಾದ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 136 ಮಂದಿಯನ್ನು ಮೃತಪಟ್ಟಿದ್ದಾರೆಂದು ತಿಳಿಸಿದೆ. ದುರಂತದಲ್ಲಿ ಕಾಣೆಯಾದ 204 ಮಂದಿಯಲ್ಲಿ ಈಗಾಗಲೇ 69 ಮೃತದೇಹಗಳನ್ನು ರಕ್ಷಣಾ ಪಡೆಯ ಅಧಿಕಾರಿಗಳು ಪತ್ತೆಹಚ್ಚಿದ್ದು, 136 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರನ್ನು ಈಗ ಅಧಿಕಾರಿಗಳು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ. ರಾಜ್ಯ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ಈ ಕುರಿತು ಅಧಿಸೂಚನೆಯನ್ನು ಹೊರಡಿಸಿ ನಾಪತ್ತೆಯಾದವರು ಕುಟುಂಬಕ್ಕೆ ಮರಣ...
1 49 50 51 52 53 132
Page 51 of 132