Monday, January 27, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ತುಮಕೂರು ಜಿಲ್ಲೆ ಶಿರಾ ಮೂಲದ ಜೆನೀಶ್ ಎಂಬ ಮಗುವಿನ ಚಿಕಿತ್ಸೆಗೆ ರೂ 40. ಸಾವಿರದಷ್ಟು ಹಣವನ್ನು ಸಂಗ್ರಹಿಸಿ ಅವರ ಪೋಷಕರಿಗೆ ತಲುಪಿಸಿದ ಸಂಡೂರಿನ ಯುವಕರು-ಕಹಳೆ ನ್ಯೂಸ್

ಸಂಡೂರು : ತುಮಕೂರು ಜಿಲ್ಲೆ ಶಿರಾ ಮೂಲದ ಜೆನೀಶ್ ಎಂಬ ಹಸುಗೂಸು ಸ್ಪೈನಲ್ ಮಸ್ಕುಲರ್ ಆಟ್ರೋಫಿ ಎಂಬ ಕಾಯಿಲೆಗೆ ತುತ್ತಾಗಿತ್ತು. ಈ ಬಗ್ಗೆ ಆ ಮಗುವಿನ ಪೋಷಕರು ಆಘಾತಗೊಂಡಿದ್ದರು. ಚಿಕಿತ್ಸೆಗೆ ಸರಿ ಸುಮಾರು ಹದಿನಾರು ಕೋಟಿ ವೆಚ್ಚ ತಗುಲುವುದು ಎಂದು ವೈದ್ಯರು ತಿಳಿಸಿದಾಗ ಪೋಷಕರ ಜಂಘಾಬಲವೇ ಕುಗ್ಗಿಹೋಗಿತ್ತು. ಈ ಸುದ್ದಿ ಮಾದ್ಯಮಗಳಲ್ಲಿ ಭಿತ್ತರಗೊಂಡ ನಂತರ ಇಡೀ ರಾಜ್ಯವೇ ಮರುಗಿತ್ತು. ಮಗುವಿನ ಚಿಕಿತ್ಸೆಗೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಲು ಮುಂದಾದರು....
ಹೆಚ್ಚಿನ ಸುದ್ದಿ

ಫೆಬ್ರವರಿ 25ರಂದು ಬೆಳ್ತಂಗಡಿಯ ಪೆಲತ್ತಿಮಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ “ಅಶ್ವತ್ಥಕಟ್ಟೆ” ಅಶ್ವತ್ಥೋಪನಯನ ಹಾಗೂ ವಿವಾಹ ಸಮಾರಂಭ – ಕಹಳೆ ನ್ಯೂಸ್

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಪೆಲತ್ತಿಮಾರು, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಪೆಲತ್ತಿಮಾರು, ಬಂದಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಂದಾರು ಒಕ್ಕೂಟ ಇದರ ಒಗ್ಗೂಡುವಿಕೆಯೊಂದಿಗೆ ಪರಮಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಶ್ರೀ ಸೀತಾರಾಮ ತಂತ್ರಿಯವರ ಪೌರೋಹಿತ್ವದಲ್ಲಿ ಮತ್ತು ಶ್ರೀಮತಿ ಮತ್ತು ಶ್ರೀ ಉಮೇಶ್ ಪಡ್ಡಿಲ್ಲಾಯರ ನೇತೃತ್ವದಲ್ಲಿ ದಿನಾಂಕ 25-02-2021ನೇ ಗುರುವಾರ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ, ಪೆಲತ್ತಿಮಾರು ಶ್ರೀ...
ಹೆಚ್ಚಿನ ಸುದ್ದಿ

7ನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಂಸದ ಮೋಹನ ದೇಲ್ಕರ್ ಹೊಟೇಲ್‍ನಲ್ಲಿ ಆತ್ಮಹತ್ಯೆ-ಕಹಳೆ ನ್ಯೂಸ್

ಮುಂಬೈ : ಮುಂಬೈ ನ ಮರೀನ್ ಡ್ರೈವ್ ನ ಹೊಟೇಲ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಸಂಸದರೋರ್ವರ ಮೃತದೇಹ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಎಂದು ಹೇಳಲಾಗಿದೆ. ಆತ್ಮಹತ್ಯೆ ಮಾಡಿಕೊಂಡವರು ದಾದ್ರಾ ಮತ್ತು ನಗರ ಹವೇಲಿಯ ಪಕ್ಷೇತರ ಸಂಸದ 58 ವರ್ಷದ ಮೋಹನ ದೇಲ್ಕರ್ ಎಂದು ತಿಳಿದುಬಂದಿದೆ. ಇವರು ಹೊಟೇಲ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಕೂಡ...
ಹೆಚ್ಚಿನ ಸುದ್ದಿ

ಉಪ್ಪಿನಂಗಡಿಯ ಅರಣ್ಯ ಇಲಾಖಾ ಸಿಬ್ಬಂದಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ-ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯ ಅರಣ್ಯ ಇಲಾಖಾ ಸಿಬ್ಬಂದಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪುತ್ತೂರು ಉಲಾರ್ಂಡಿ ನಿವಾಸಿ, 34 ವರ್ಷದ ಜನಾರ್ದನ್ ಎನ್. ಎಂದು ತಿಳಿದುಬಂದಿದೆ. ಇವರು ಕಳೆದ ಹತ್ತು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಅರಣ್ಯ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮದ್ಯ ವ್ಯಸನಿಯಾಗಿದ್ದ ಇವರು ಆದಿತ್ಯವಾರ ರಾತ್ರಿ ಉಪ್ಪಿನಂಗಡಿ ಕೆಂಪಿ...
ಹೆಚ್ಚಿನ ಸುದ್ದಿ

ಇಶಾನಿ ಮಡಿಲಿಗೆ ಭಾರತದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯ ಪ್ರಶಸ್ತಿಯ ಗರಿ-ಕಹಳೆ ನ್ಯೂಸ್

ತುಮಕೂರು : ತುಮಕೂರಿನ ಬಾಲ ಪ್ರತಿಭೆ ಇಶಾನಿ ಜೈನ್ ತನ್ನ 4 ನೇ ವರ್ಷದ ವಯಸ್ಸಿನಲ್ಲಿಯೇ 4000 ಕ್ಕಿಂತ ಹೆಚ್ಚು ಪ್ರಶ್ನೆಗೆ ಉತ್ತರಿಸಿ, ತನ್ನ ಪ್ರಥಮ ಪ್ರಯತ್ನದಲ್ಲಿಯೇ ಇಂಡಿಯನ್ ಬುಕ್ ಆಪ್ ರೆಕಾರ್ಡ್ ಹಾಗೂ ಅಚೀವರ್ಸ್ ಆಪ್ ಕರ್ನಾಟಕ ಬುಕ್ ಆಪ್ ರೆಕಾಡ್ರ್ಸ್ ನಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿ ಇಡೀ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾಳೆ. ಈಕೆ ತುಮಕೂರಿನ ಗೋಕುಲ ಬಡಾವಣೆಯಲ್ಲಿ ವಾಸವಾಗಿರುವ ಶ್ರೀಯುತ ದೇವೇಂದ್ರ ಕುಮಾರ್ ಮತ್ತು ಶ್ರೀಮತಿ ಮಾನಸರವರ...
ಹೆಚ್ಚಿನ ಸುದ್ದಿ

ಪಾಣಾಜೆ ಗ್ರಾಮ ಪಂಚಾಯಿತ್ ಚುನಾವಣೆಯಲ್ಲಿ ಜಯಗಳಿಸಿದ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ – ಕಹಳೆ ನ್ಯೂಸ್

ಪಾಣಾಜೆ : ಪಂಚಾಯತ್ ಚುನಾವಣೆಯಲ್ಲಿ ವಿಜಯಿಯಾದ ಪಾಣಾಜೆ ಗ್ರಾಮ ಪಂಚಾಯಿತ್ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಭೆಯು, ಪಾಣಾಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು, ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಮಾನ್ಯ ಶಾಸಕರಾದ ಸಂಜೀವ ಮಠಂದೂರುರವರು ಪಾಣಾಜೆ ಗ್ರಾಮದ ಅಭಿವೃದ್ಧಿಯಲ್ಲಿ ವಿಶೇಷ ಅನುದಾನದ ಕೊಡುಗೆಯನ್ನು ಘೋಷಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು,ತಾಲೂಕು ಪಂಚಾಯತ್ ಸದಸ್ಯರಾದ ಮೀನಾಕ್ಷಿ ಮಂಜುನಾಥ, ಸದಾಶಿವ ರೈ ಸೂರಂಬೈಲು,ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ...
ಹೆಚ್ಚಿನ ಸುದ್ದಿ

ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಜಿಲೆಟಿನ್ ದುರಂತ ; ಸ್ಟೋಟದಲ್ಲಿ 6 ಮಂದಿ ಕಾರ್ಮಿಕರು ಮೃತ್ಯು-ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ತಾಲೂಕಿನ ಹಿರೇನಾಗವೇಲಿ ಗ್ರಾಮದ ಪೆರೇಸಂದ್ರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ, ಘಟನೆಯಲ್ಲಿ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹಗಳು ಗುರುತಿಸಲಾಗದಷ್ಟು ಛಿದ್ರವಾಗಿದ್ದು ಗಂಭೀರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರು ಓರ್ವ ಹೀರೇನಾಗವಲ್ಲಿ ಗ್ರಾಮ, ಆಂಧ್ರ ಪ್ರದೇಶದ ಮೂವರು, ನೇಪಾಳದ ಒಬ್ಬರು, ಬಾಗೇಪಲ್ಲಿಯ ಒಬ್ಬ ಕಾರ್ಮಿಕರು ಆಗಿದ್ದಾರೆ. ಸ್ಥಳಕ್ಕೆ...
ಹೆಚ್ಚಿನ ಸುದ್ದಿ

ಆನ್ಲೈನ್ ಹಿಂದೂ ರಾಷ್ಟ್ರ-ಜಾಗೃತಿ ಸಭೆ -ಕಹಳೆ ನ್ಯೂಸ್

ಆನ್ಲೈನ್ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಇದೇ ಭಾನುವಾರದಂದು ಸಂಜೆ 7 ಗಂಟೆಗೆ ನಡೆಯಲಿದೆ. ಭಾರತದಾದ್ಯಂತ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಹಿಂದೂ ರಾಷ್ಟ್ರ ಈಗಾಗಲೇ ಭಾರತದಾದ್ಯಂತ 1500 ಸಭೆಗಳು ನಡೆದಿದ್ದು, ಈ ಮೂಲಕ 15 ಲಕ್ಷಕ್ಕೂ ಅಧಿಕ ಜನರಲ್ಲಿ ಹಿಂದೂ ರಾಷ್ಟ್ರದ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ. ದೇಶದಲ್ಲಿ ನಡೆಯುತ್ತಿರುವ ದೇಶ ವಿರೋಧಿ, ಹಿಂದೂ ವಿರೋಧಿ ಷಡ್ಯಂತ್ರ, ಲವ್ ಜಿಹಾದ್, ಮತಾಂತರ, ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ, ಹಿಂದೂ ದೇವಸ್ಥಾನಗಳ ಸರಕಾರಿಕರಣ, ಹಿಂದೂ...
1 50 51 52 53 54 132
Page 52 of 132