Thursday, January 23, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಎಕ್ಸಲೆಂಟ್ ಮೂಡಬಿದಿರೆ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬ-ಕಹಳೆ ನ್ಯೂಸ್

ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನ ವಸತಿ ನಿಲಯದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮೂಡುಬಿದಿರೆಯ ದಕ್ಷ, ಪ್ರಾಮಾಣಿಕ ಪೋಲಿಸ್ ವೃತ್ತ ನಿರೀಕ್ಷಕರಾದ ಶ್ರಿ ದಿನೇಶ್ ಕುಮಾರ್ ರವರು ಸಂಕ್ರಾಂತಿ ಹಬ್ಬವನ್ನು ಉದ್ಘಾಟಿಸಿ ‘ಸಂಕ್ರಾಂತಿಯು ಪರಿವರ್ತನೆಯ ಕಾಲವಾಗಿದೆ. ನಾವೂ ಕೂಡ ನಮ್ಮೊಳಗಿನ ನಕಾರಾತ್ಮಕತೆಯನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡು ಬದಲಾದ ಕಾಲಘಟ್ಟದಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಚಿಂತಿಸಬೇಕಾಗಿದೆ. ಮನುಷ್ಯನಲ್ಲಿರುವ ಸುಪ್ತ ಪ್ರಜ್ಞೆಯನ್ನು ಜಾಗೃತವಾಗಿರಿಸಿಕೊಂಡು ಉತ್ತಮ ಮಾರ್ಗದರ್ಶನ ಪಡೆಯುತ್ತಾ ಜೀವನದಲ್ಲಿ...
ಹೆಚ್ಚಿನ ಸುದ್ದಿ

ಶ್ರೀರಾಮ ವಿದ್ಯಾಕೇಂದ್ರಕ್ಕೆ ಸಚಿವ ಅಂಗಾರ ಭೇಟಿ-ಕಹಳೆ ನ್ಯೂಸ್

ಕಲ್ಲಡ್ಕ: ಕರ್ನಾಟಕ ಸರಕಾರದ ನೂತನ ಸಚಿವರಾದ ಶ್ರೀ ಅಂಗಾರರವರು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕಇಲ್ಲಿಗೆ ಭೇಟಿ ನೀಡಿದರು. ವಿದ್ಯಾಕೇಂದ್ರದ ಹಿರಿಯರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರರಾದ ಡಾ| ಪ್ರಭಾಕರ ಭಟ್‍ ಕಲ್ಲಡ್ಕಇವರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ, ಮಾಜಿ ಶಾಸಕರಾದ ಪದ್ಮನಾಭಕೊಟ್ಟಾರಿ, ರುಕ್ಮಯ ಪೂಜಾರಿ, ವಿದ್ಯಾಕೇಂದ್ರದಎಲ್ಲಾ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು...
ಹೆಚ್ಚಿನ ಸುದ್ದಿ

‘ಕಾಮಿಡಿ ಕಿಲಾಡಿಗಳು’ ಚಾಂಪಿಯನ್ ಕಾರ್ಯಕ್ರಮಕ್ಕೆ ಎಂಟ್ರಿಯಾದ ಹೊಸ ಗೆಸ್ಟ್ ಯಾರು ಗೊತ್ತಾ – ಕಹಳೆ ನ್ಯೂಸ್

ಶನಿವಾರ ಹಾಗೂ ಭಾನುವಾರ ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಪ್ರೇಕ್ಷಕರನ್ನು ಸಾಕಷ್ಟು ಮನರಂಜನೆ ನೀಡುವ ಮೂಲಕ ಎಲ್ಲರ ಮನೆಮಾತಾಗಿದೆ. ಈ ವಾರ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಕಾರ್ಯಕ್ರಮಕ್ಕೆ ರಕ್ಷಿತಾ ಅವರ ಪತಿ ಪ್ರೇಮ್ ಗೆಸ್ಟ್ ಆಗಿ ಬರಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ  ಇಂದು ಶೇರ್ ಮಾಡಿರುವ ನಟಿ ರಕ್ಷಿತಾ ನಮ್ಮ ವಿಶೇಷ ಅತಿಥಿ ಎಂದು ಕಾಮಿಡಿ ಕಿಲಾಡಿಗಳು ಸೆಟ್ ಗೆ  ಬರೆದುಕೊಂಡಿದ್ದಾರೆ....
ಹೆಚ್ಚಿನ ಸುದ್ದಿ

ಗೋಮಾಂಸದ ಸಂಬಂಧ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕುತ್ತೇವೆ;ಪಶು ಪಾಲನಾ ಇಲಾಖೆ ಸಚಿವ ಪ್ರಭು ಚವ್ಹಾಣ್- ಕಹಳೆ ನ್ಯೂಸ್

ಕೊಪ್ಪಳ: ಪಶು ಪಾಲನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಗೋ ಮಾಂಸ ತಿನ್ನುವೆ ಎಂದು ಹೇಳುತ್ತಿದ್ದಾರೆ. ಇನ್ನು ಈ ರೀತಿ ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಅವರನ್ನೇ ಜೈಲಿಗೆ ಹಾಕ್ತೇವೆ ಎಂದು ಮಾಜಿ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಿದ್ದೇವೆ. ಗೋವುಗಳನ್ನು ನಾವು ಮಾತೆ ಎಂದು ಪೂಜೆ ಮಾಡುತ್ತೇವೆ. ಅವುಗಳನ್ನು ಹತ್ಯೆ ಮಾಡಿ ತಿನ್ನುವುದು ಮಹಾ ಅಪರಾಧ....
ಹೆಚ್ಚಿನ ಸುದ್ದಿ

ಕಾಪು ವೆಂಕಟರಮಣ ದೇವಸ್ಥಾನಕ್ಕೆ ಇನ್ವರ್ಟರ್ ಕೊಡುಗೆ; ಗೋಕುಲದಾಸ್ ಮತ್ತು ಕುಟುಂಬ-ಕಹಳೆ ನ್ಯೂಸ್

ಶ್ರೀ ಗೋಕುಲದಾಸ್ ಕಾಮತ್ ಹಾಗೂ ಕುಟುಂಬ, ಕಲ್ಯ, ಕಾಪು ಇವರು ಕಾಪು ವೆಂಕಟರಮಣ ದೇವಸ್ಥಾನಕ್ಕೆ ನೂತನ ಇನ್ವರ್ಟರನ್ನು ಸೇವಾರ್ಥವಾಗಿ ಸಮರ್ಪಿಸಿದರು....
ಹೆಚ್ಚಿನ ಸುದ್ದಿ

ಬರ್ತ್‍ಡೇ ಸೆಲೆಬ್ರೇಷನ್‍ನಲ್ಲಿ ತಲ್ವಾರ್ ಹಿಡಿದು ಡಿಜೆ ಹಾಡಿಗೆ ಡಾನ್ಸ್; 7 ಯುವಕರ ಬಂಧನ-ಕಹಳೆ ನ್ಯೂಸ್

ಕಲಬುರ್ಗಿ: ಬರ್ತ್‍ಡೇ ಸೆಲೆಬ್ರೇಷನ್‍ನಲ್ಲಿ ತಲ್ವಾರ್ ಹಿಡಿದು ನೃತ್ಯ ಮಾಡಿ ಪುಂಡಾಟ ಮೆರೆದಿದ್ದ 7 ಜನರನ್ನು ಕಲಬುರ್ಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅಪ್ರೋಜ್, ತಬ್ರೇಜ್, ಇಮ್ರಾನ್, ರಶೀದ್, ತಲ್ಹಾ, ಸೋಹೆಲ್ ಮತ್ತು ಜಹೀರ್ ಎಂದು ಗುರುತಿಸಲಾಗಿದೆ. ಇವರು ಸಾರ್ವಜನಿಕ ಸ್ಥಳದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅನುಮತಿಯಿಲ್ಲದೇ ವೇದಿಕೆ ಹಾಕಿ ಬರ್ತ್‍ಡೇ ಆಚರಿಸಿಕೊಂಡಿದ್ದರು. ಅಲ್ಲದೇ ಡಿಜೆ ಹಾಡಿಗೆ ತಲ್ವಾರ್ ಹಿಡಿದು ಡಾನ್ಸ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 7 ಯುವಕರನ್ನು ಪೊಲೀಸರು...
ಹೆಚ್ಚಿನ ಸುದ್ದಿ

ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ-ಕಹಳೆ ನ್ಯೂಸ್

ಶಿವಮೊಗ್ಗ: ತೀರ್ಥಹಳ್ಳಿಯ ಉರಗತಜ್ಞ ಮಾರುತಿ ಮಾಸ್ಟರ್ ಅವರು ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಗ್ರಾಮದಲ್ಲಿ ಧರ್ಮಣ್ಣ ಎಂಬವರ ರೈತರ ಮನೆಯ ಪಕ್ಕದಲ್ಲಿ ಕಟ್ಟಿಗೆ ರಾಶಿಯಲ್ಲಿ ಅವಿತುಕೊಂಡಿದ್ದ 13 ಅಡಿ ಉದ್ದದ ಬಾರಿ ಗಾತ್ರದ ಕಾಳಿಂಗ ಸರ್ಪದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಗಿದೆ. ತೀರ್ಥಹಳ್ಳಿಯಲ್ಲಿ ಇತ್ತೀಚಿನ ದಿನಗಳಲ್ಲಿ ಪದೇಪದೇ ಕಾಳಿಂಗ ಸರ್ಪಗಳು ಕಂಡುಬರುತ್ತಿದ್ದು, ಅರಣ್ಯ ಇಲಾಖೆ ಹಾಗೂ ಸರ್ಕಾರ ಇದಕ್ಕೊಂದು ಶಾಶ್ವತ ಪರಿಹಾರ...
ಹೆಚ್ಚಿನ ಸುದ್ದಿ

ಗೋವಾಕ್ಕೆ ಪ್ರವಾಸ ಹೊರಟ 10 ಜನ ಮಷಾಣಕ್ಕೆ- ಕಹಳೆ ನ್ಯೂಸ್

ಧಾರವಾಡ: ಧಾರವಾಡ ಸಮೀಪದ ಇಟ್ಟಿಗಟ್ಟಿ ಬಳಿ ಬೆಳಗಿನ ಜಾವ ಟೆಂಪೋ ಮತ್ತು ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಈ ಘಟನೆಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ದಾವಣಗೆರೆಯಿಂದ 17 ಮಹಿಳೆಯರು ಗೋವಾಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಇದರಲ್ಲಿ ಜನರು ಸಾವಿಗೀಡಾಗಿದ್ದು, ಇನ್ನೂ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಘಟನೆಯ ಬಗ್ಗೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಗಾಯಾಳುಗಳನ್ನು ಆಸ್ವತ್ರೆಗೆ ದಾಖಲಿಸಿದ್ದಾರೆ....
1 74 75 76 77 78 132
Page 76 of 132