Thursday, January 23, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಕೊರೊನಾ ಪ್ರಕರಣಗಳ ಬಗ್ಗೆ ವುಹಾನ್ ನಗರದಲ್ಲಿ ಲೈವ್ ವರದಿ ಮಾಡಿದ್ದ ಪತ್ರಕರ್ತೆಗೆ 4 ವರ್ಷ ಜೈಲು ಶಿಕ್ಷೆ-ಕಹಳೆ ನ್ಯೂಸ್

ಶಾಂಘೈ: ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ವುಹಾನ್ ನಗರದಲ್ಲಿ ಲೈವ್ ವರದಿ ಮಾಡಿದ್ದ ನಾಗರಿಕ ಪತ್ರಕರ್ತೆಯೊಬ್ಬರಿಗೆ ಶಾಂಘೈ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದು ತಿಳಿದು ಬಂದಿದೆ. ಅಲ್ಲದೆ ವುಹಾನ್ ನಗರದಲ್ಲಿ ಕೊರೊನಾ ಹರಡುವ ಬಗ್ಗೆ ಝಾಂಗ್ ಮಾಡುತ್ತಿದ್ದ ಲೈವ್ ವರದಿಗಳು, ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಂಚಿಕೆಯಾಗುತ್ತಿದ್ದವು. ಸಂಘರ್ಷವನ್ನು ಪ್ರೋತ್ಸಾಹಿಸಿ ಹಾಗೂ ತೊಂದರೆ ಉಂಟುಮಾಡಿದ ಆರೋಪದಲ್ಲಿ ಶಾಂಘೈ ನ್ಯಾಯಾಲಯವು ಝಾಂಗ್‍ಗೆ 4 ವರ್ಷಗಳ ಜೈಲು ಶಿಕ್ಷೆ...
ಹೆಚ್ಚಿನ ಸುದ್ದಿ

ವಿದೇಶಕ್ಕೆ ವೈಯಕ್ತಿಕ ಪ್ರವಾಸ ಬೆಳೆಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ-ಕಹಳೆ ನ್ಯೂಸ್

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ತಮ್ಮ ವೈಯಕ್ತಿಕ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ವಕ್ತಾರ ರಣದೀಪ್ ಸುರ್ಜೇವಾಲಾ, "ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅಲ್ಪಾವಧಿಯ ವೈಯಕ್ತಿಕ ಭೇಟಿಗಾಗಿ ವಿದೇಶಕ್ಕೆ ತೆರಳಿದ್ದಾರೆ ಹಾಗೂ ಕೆಲವು ದಿನಗಳವರೆಗೆ ಹೊರಗಡೆ ಇರುತ್ತಾರೆ". ಆದರೆ ಎಲ್ಲಿಗೆ ತೆರಳಿದ್ದಾರೆ ಎಂಬ ಪ್ರಶ್ನೆಗೆ ಸುರ್ಜೇವಾಲಾ ಯಾವುದೇ ಮಾಹಿತಿ ಹೊರಹಾಕಿಲ್ಲ.ಇನ್ನು ಮೂಲಗಳ ಪ್ರಕಾರ ರಾಹುಲ್ ಅವರ...
ಹೆಚ್ಚಿನ ಸುದ್ದಿ

ಬೆಳಗಾವಿ ಪಾಲಿಕೆಯ ಎದುರು ಕನ್ನಡ ಧ್ವಜ ಹಾರಿಸಲು ಮುಂದಾದ ಕನ್ನಡ ಪರ ಸಂಘಟನೆಗಳು ಪೊಲೀಸ್ ವಶ-ಕಹಳೆ ನ್ಯೂಸ್

ಬೆಳಗಾವಿ : ಬೆಳಗಾವಿ ಪಾಲಿಕೆಯ ಎದುರು ಕನ್ನಡ ಧ್ವಜ ಸ್ತಂಭ ಸ್ಥಾಪಿಸಿ, ಕನ್ನಡ ಧ್ವಜ ಹಾರಿಸಲು ಮುಂದಾದ ಕನ್ನಡ ಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಮತ್ತು ಕನ್ನಡ ಪರ ಸಂಘಟನೆಗಳ ಕರ್ಯಕರ್ತರ ನಡುವೆ ವಾಗ್ವಾದ ನಡೆದಿದ್ದು, ಸದ್ಯ ಪೊಲೀಸರು ಧ್ವಜ ಹಾರಿಸಲು ಬಂದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ....
ಹೆಚ್ಚಿನ ಸುದ್ದಿ

ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತೆ ಜನವರಿ 8ರವರೆಗೆ ನ್ಯಾಯಂಗ ಬಂಧನ ವಿಸ್ತರಣೆ-ಕಹಳೆ ನ್ಯೂಸ್

ಧಾರವಾಡ : ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿ, ನ್ಯಾಯಂಗ ಬಂಧನದಲ್ಲಿರುವಂತ ಮಾಜಿ ಸಚಿವ ವಿನಯ್ ಕುಲಕರ್ಣಿ, ನ್ಯಾಯಾಂಗ ಬಂಧನದ ಅವಧಿ, ಇಂದು ಮುಕ್ತಾಯಗೊಂಡಿತ್ತು. ಹೀಗಾಗಿ ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಂತ ಧಾರವಾಡ ವಿಶೇಷ ಸಿಬಿಐ ಕೋರ್ಟ್, ಜನವರಿ 8, 2021ರವರೆಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಿಸಿ, ಧಾರವಾಡದ ವಿಶೇಷ ಸಿಬಿಐ ಕೋರ್ಟ್ ಆದೇಶಿಸಿದೆ.ಹೀಗಾಗಿ ಮಾಜಿ ಸಚಿವ...
ಹೆಚ್ಚಿನ ಸುದ್ದಿ

ಮಾರ್ಚ್ 31ರವರೆಗೆ ಪರವನಾಗಿ ಸೇರಿದಂತೆ ವಾಹನ ನೊಂದಣಿ ಪ್ರಕ್ರಿಯೆ ವಿಸ್ತರಣೆ-ಕಹಳೆ ನ್ಯೂಸ್

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಿದೆ. ಇದಕ್ಕಿಂತ ಮೊದಲು ಎಲ್ಲಾ ದಾಖಲೆಗಳನ್ನು ಡಿಸೆಂಬರ್ 31ರೊಳಗೆ ನೀಡಲು ತಿಳಿಸಲಾಗಿತ್ತು. ಹಾಗೆಯೇ ವಾಹನ ನೋಂದಣಿ ನೀತಿ ಸುಧಾರಣೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಇನ್ನು ವಿಶೇಷ ಚೇತನರಿಗೆ ವಾಹನ ಮಾಲಿಕತ್ವ ಸಮಸ್ಯೆಗೆ ಪರಿಹಾರ ನೀಡಲು ಈ ಹಿಂದೆ ಇದ್ದ ಕಾಯ್ದೆಯಲ್ಲಿ ವಾಹನ ಮಾಲಿಕತ್ವ ಕುರಿತಂತೆ ಸ್ಪಷ್ಟವಾಗಿ ನಮೂದಿಸಲು ಅವಕಾಶ ಇರಲಿಲ್ಲ. ಇದರಿಂದಾಗಿ ವಿಶೇಷ ಹಣಕಾಸು...
ಹೆಚ್ಚಿನ ಸುದ್ದಿ

2010ರಲ್ಲಿ 1 ಯುಎಸ್ ಡಿ ಇದ್ದ ಬಿಟ್ ಕಾಯಿನ್ ಇಂದು 26,900 ಯುಎಸ್ ಡಿ – ಕಹಳೆ ನ್ಯೂಸ್

ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಶನಿವಾರದಂದು ಸಾರ್ವಕಾಲಿಕ ದಾಖಲೆಯಾದ $ 26,000 (ಭಾರತದ ರುಪಾಯಿ ಮೌಲ್ಯ 19,14,276) ಮುಟ್ಟಿತು. ಈಗ ಕ್ರಿಪ್ಟೋಕರೆನ್ಸಿ $ 27,000 ಸಮೀಪ ಇದೆ. ಭಾನುವಾರ ಬೆಳಗ್ಗೆ 7.13ರ ವೇಳೆಗೆ ಬಿಟ್ ಕಾಯಿನ್ 26,900 ಯುಎಸ್ ಡಿ ಸಮೀಪ ವಹಿವಾಟು ನಡೆಸಿತು. ಕಾಯಿನ್ ಮಾರ್ಕೆಟ್ ಕ್ಯಾಪ್ ಪ್ರಕಾರ, ಇಪ್ಪತ್ತಕ್ಕೂ ಹೆಚ್ಚು ದಲ್ಲಾಳಿಗಳಿಂದ ದತ್ತಾಂಶ ಒಟ್ಟು ಮಾಡಿದಂತೆ, ಕಳೆದ 24 ಗಂಟೆಯಲ್ಲಿ ಬಿಟ್ ಕಾಯಿನ್ 8%ಗೂ...
ಹೆಚ್ಚಿನ ಸುದ್ದಿ

ನಟ ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ : ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ – ಕಹಳೆ ನ್ಯೂಸ್

ಚೆನ್ನೈ : ಶುಕ್ರವಾರ ರಕ್ತದೊತ್ತಡದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನಿಕಾಂತ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಜನಿಕಾಂತ್ ಸಹೋದರ ಸತ್ಯನಾರಾಯಣ, ರಜನಿಕಾಂತ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಸದ್ಯ ಅವರು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ.ಇಂದು ರಜನಿಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದಾರೆ....
ಹೆಚ್ಚಿನ ಸುದ್ದಿ

ನಾಳೆ ಭಾರತದ ಮೊದಲ ʼಚಾಲಕ ರಹಿತʼ ರೈಲು ಸೇವೆಗೆ ಪ್ರಧಾನಿ ಮೋದಿ ಚಾಲನೆ – ಕಹಳೆ ನ್ಯೂಸ್

ನವದೆಹಲಿ: ಭಾರತದ ಮೊದಲ ಚಾಲಕ ರಹಿತ ರೈಲು ಸೇವೆಯನ್ನ ಡಿಸೆಂಬರ್ 28ರಂದು (ನಾಳೆ) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ದೆಹಲಿ ಮೆಟ್ರೋದ 37 ಕಿ.ಮೀ ಉದ್ದದ ಮೆಜೆಂಟಾ ಲೈನ್ (ಜನಕಪುರಿ ವೆಸ್ಟ್ ನಿಂದ ಬೊಟಾನಿಕಲ್ ಗಾರ್ಡನ್) ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕ ರಹಿತ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ, ಪಿಎಂ ಮೋದಿ ಅವರು ಏರ್ ಪೋರ್ಟ್ ಎಕ್ಸ್ ಪ್ರೆಸ್ ಲೈನ್...
1 80 81 82 83 84 132
Page 82 of 132