Wednesday, January 22, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಬೆಂಗಳೂರಿನಲ್ಲಿ ನಟ ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು – ಕಹಳೆ ನ್ಯೂಸ್

ಬೆಂಗಳೂರು: ಇಲ್ಲಿನ ಮಾಗಡಿ ರಸ್ತೆಯಲ್ಲಿರುವ ಕನ್ನಡ ಚಿತ್ರರಂಗದ ಮೇರು ನಟ ಡಾ| ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ನಡೆದಿದೆ. ನಗರದ ಮಾಗಡಿ ರಸ್ತೆಯಲ್ಲಿರುವ ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನು ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ. ಸ್ಥಳದಲ್ಲೇ ವಿಷ್ಣು ಅಭಿಮಾನಿಗಳು ಸೇರಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಹಿಂದೆಯೂ ಇದೇ ಸ್ಥಳದಲ್ಲಿ ಪ್ರತಿಮೆ ಧ್ವಂಸವಾಗಿತ್ತು. ಆಗ ಪ್ರತಿಮೆಯನ್ನೇ ಹೊತ್ತೊಯ್ದಿದ್ದರು. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ....
ಹೆಚ್ಚಿನ ಸುದ್ದಿ

ರಾಜಧಾನಿಯಲ್ಲಿ ಮಾಸ್ಕ್ ತಯಾರಿಕಾ ಘಟಕದಲ್ಲಿ ಬೆಂಕಿ ಅವಘಢ : ಓರ್ವ ಸಾವು, ಮೂವರಿಗೆ ಗಾಯ- ಕಹಳೆ ನ್ಯೂಸ್

ನವದೆಹಲಿ : ರಾಷ್ಟ್ರ ರಾಜಧಾನಿ ಮಾಯಾಪುರಿ ಪ್ರದೇಶದಲ್ಲಿ ಮಾಸ್ಕ್ ತಯಾರಿಕಾ ಘಟಕದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದು, ಗಾಯಗೊಂಡಿರುವ ಇತರ ಮೂವರನ್ನು ರಕ್ಷಿಸಲಾಗಿದೆ. ಇಂದು ಬೆಳಗ್ಗೆ 3.54ಕ್ಕೆ ಅಗ್ನಿ ಅವಘಢ ಸಂಭವಿಸಿರುವ ಬಗ್ಗೆ ಕರೆ ಸ್ವೀಕರಿಸಲಾಗಿದ್ದು, ಆರು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗಾರ್ಗ್ ತಿಳಿಸಿದ್ದಾರೆ. ಮೃತವ್ಯಕ್ತಿಯನ್ನು ಜುಗಲ್ ಕಿಶೋರ್ ಎಂದು ಗುರುತಿಸಲಾಗಿದೆ ಎಂದು ಗಾರ್ಗ್...
ಹೆಚ್ಚಿನ ಸುದ್ದಿ

ಉಳ್ಳಾಲ : ಬೈಕ್ ಗೆ ಗುದ್ದಿ ಕೆಳಕ್ಕೆ ಬಿದ್ದ ಸವಾರರಿಗೆ ಚೂರಿ ಇರಿತ! – ಕಹಳೆ ನ್ಯೂಸ್

ಉಳ್ಳಾಲ: ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಅಪರಿಚಿತ ತಂಡವೊಂದು, ಚೂರಿಯಲ್ಲಿ ಚುಚ್ಚಿ ಕೊಲೆಯತ್ನ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿಯಲ್ಲಿ ನಡೆದಿದೆ. ಸೇವಂತಿಗುಡ್ಡೆ ನಿವಾಸಿ ಆದಿತ್ಯ (23) ಮತ್ತು ಪಂಡಿತ್ ಹೌಸ್ ನಿವಾಸಿ ಪವನ್ (27) ಗಾಯಗೊಂಡವರು. ಚರ್ಚೊಂದರಲ್ಲಿ ಕ್ಯಾಟರಿಂಗ್ ನಲ್ಲಿ ಕೆಲಸಕ್ಕಿದ್ದ ಸಹೋದರನನ್ನು ಕರೆ ತರಲು ತೆರಳುವಾಗ ಘಟನೆ ನಡೆದಿದೆ. ಕೃಷ್ಣಕೋಡಿಯಲ್ಲಿ ಬಳಿ ಹಿಂಬದಿಯಿಂದ ಬಂದ...
ಹೆಚ್ಚಿನ ಸುದ್ದಿ

ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ: ಪಂಜಾಬ್ ನಲ್ಲಿ ಬಿಜೆಪಿ ಕಚೇರಿ ಮೇಲೆ ದಾಂಧಲೆ, ಮೊಬೈಲ್ ಟವರ್ ಗೆ ಹಾನಿ – ಕಹಳೆ ನ್ಯೂಸ್

ಚಂಡೀಗಢ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಬಗ್ಗೆ ಪ್ರತಿಭಟನೆ ತೀವ್ರವಾಗಿರುವುದರ ಮಧ್ಯೆ, ರೈತರು ಇತ್ತೀಚೆಗೆ ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿದೆ. ನಿನ್ನೆ ಶುಕ್ರವಾರ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪ್ರಕರಣ ವರದಿಯಾಗಿದೆ. ಪಂಜಾಬ್ ರಾಜ್ಯದ ಬಟಿಂಡಾದಲ್ಲಿ ರೈತರು ಬಿಜೆಪಿ ಕಚೇರಿ ಮೇಲೆ ಗುರಿಯಾಗಿಟ್ಟು ದಾಳಿ ಮಾಡಿದ್ದಾರೆ. ನಿನ್ನೆ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಯದಲ್ಲಿ...
ಹೆಚ್ಚಿನ ಸುದ್ದಿ

ಉಳ್ಳಾಲ: ಜಾತ್ರೆಯಿಂದ ಬರುತ್ತಿದವರಿಗೆ ಅಡ್ಡಿಯಾದ ಜವರಾಯ: ಬೈಕ್ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಸಾವು -ಕಹಳೆ ನ್ಯೂಸ್

ಉಳ್ಳಾಲ: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆಂಬುಗುಡ್ಡೆ ಬಳಿ ಶನಿವಾರ ನಸುಕಿನ ಜಾವ ನಡೆದಿದೆ. ಸಂತೋಷನಗರ ನಿವಾಸಿ ಸಂದೇಶ್ ಕೆರೆಬೈಲ್ (38) ಸಾವನ್ನಪ್ಪಿದವರು. ಸುಮಾರು 3 ಗಂಟೆಯ ವೇಳೆ ಈ ಅಪಘಾತ ನಡೆದಿದ್ದು, ಸಂದೇಶ್ ಅವರು ಕೊಲ್ಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮನೆಗೆ ವಾಪಸ್ಸಾಗುತ್ತಿದ್ದರು. ಅಪಘಾತದ ಪರಿಣಾಮ ಸಂದೇಶ್ ರಸ್ತೆಗುರುಳಿ ಬಿದ್ದಿದ್ದು, ತಲೆಗೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ...
ಹೆಚ್ಚಿನ ಸುದ್ದಿ

ಅಂತರ್ರಾಷ್ಟ್ರೀಯ ಜಿನಸಮ್ಮಿಲನ 2020 ರ ಅಂಗವಾಗಿ ಆಯೋಜಿಸಿದ್ದ ಕವನವಾಚನ ಸ್ಪರ್ಧೆಯಲ್ಲಿ ಕಡಬದ ಯುವಪ್ರತಿಭೆ ಸಮ್ಯಕ್ತ್ ಜೈನ್ ಗೆ ಪ್ರಥಮ ಸ್ಥಾನ- ಕಹಳೆ ನ್ಯೂಸ್

ಕೊರೋನಾ ಕಾಲಘಟ್ಟದಲ್ಲಿ ನಡೆಯುತ್ತಿರುವ ಹಲವಾರು ಕಾರ್ಯಕ್ರಮಗಳು ಮತ್ತು ಧಾರ್ಮಿಕ ಮೌಲ್ಯವನ್ನು ಜನರಲ್ಲಿ ಉತ್ಕೃಷ್ಟಗೊಳಿಸುತ್ತಿದ್ದು ಇದಕ್ಕೊಂದು ಸೂಕ್ತ ಮಾದರಿಯಾಗಿ ಹೊರಹೊಮ್ಮಿದೆ. ಭಾರತೀಯ ಜೈನ್ ಮಿಲನ್ ವಲಯ 8 , ಇದರ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಜೈನ ಧರ್ಮ ಫೇಸ್‌ಬುಕ್‌ ಫೇಜ್ ಜಂಟಿಯಾಗಿ ಜಿನಸಮ್ಮಿಲನ ಕಾರ್ಯಕ್ರಮ ನಡೆಸಿತು. ಈ ಅಂತರ್ರಾಷ್ಟ್ರೀಯ ಜಿನಸಮ್ಮಿಲನ 2020 ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ "ಜೈನ ಧರ್ಮ " ವಿಷಯಾಧಾರಿತ ಸ್ವರಚಿತ ಕವನ ವಾಚನ...
ಹೆಚ್ಚಿನ ಸುದ್ದಿ

ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಡಳಿತ ಮಂಡಳಿಯಿಂದ ಮತ್ತು ಸಿಬ್ಬಂದಿಗಳ ಪರವಾಗಿ ಹಿರಿಯ ಶಿಕ್ಷಕಿ ಶಾಲಿನಿ ನೋಂಡ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ- ಕಹಳೆ ನ್ಯೂಸ್

ವಿಟ್ಲ: ಸಂಸ್ಥೆಯಲ್ಲಿ ಸೇವಾ ನಿಯೋಜನೆಗೊಂಡಾಗ ಹುದ್ದೆ ಮುಖ್ಯವಾಗದೆ ಜವಾಬ್ದಾರಿ ಹೆಚ್ಚಾಗಬೇಕು. ಅಲ್ಲಿ ಶ್ರದ್ದೆ, ಹೊಂದಾಣಿಕೆ ಇದ್ದು ಸಂಸ್ಥೆಗೆ ಪುಷ್ಟಿದಾಯಕವಾಗಿ ಕೆಲಸ ನಿರ್ವಹಿಸಬೇಕು ಎಂದು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶಾಲಿನಿ ನೋಂಡ ಹೇಳಿದರು. ಅವರು ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಡಳಿತ ಮಂಡಳಿಯಿಂದ ಮತ್ತು ಸಿಬ್ಬಂದಿಗಳ ಪರವಾಗಿ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಾಗೆಯೇ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಯಲ್.ಯನ್. ಕೂಡೂರು ಅವರು...
ಹೆಚ್ಚಿನ ಸುದ್ದಿ

ಕಂಠಿ, ಸಾಹೇಬ ಚಿತ್ರದ ನಿರ್ದೇಶಕ `ಭರತ್’ ಇನ್ನಿಲ್ಲ – ಕಹಳೆ ನ್ಯೂಸ್

ಬೆಂಗಳೂರು : ಸ್ಯಾಂಡಲ್ ವುಡ್ ನ ಯುವ ನಿರ್ದೇಶಕ ಭರತ್ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿ. 24 ರ ರಾತ್ರಿ 11 ಗಂಟೆಗೆ ನಿಧನರಾಗಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯ ಕಂಠಿ, ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಸಾಹೇಬ ಚಿತ್ರವನ್ನು ನಿರ್ದೇಶಿಸಿದ್ದ ಭರತ್ ಬಹುದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದೊಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ....
1 81 82 83 84 85 132
Page 83 of 132