ಪಶ್ಚಿಮ ಬಂಗಾಳದ ಆಡಳಿತದಲ್ಲಿ ಕೇಂದ್ರದ ಹಸ್ತಕ್ಷೇಪವನ್ನು ಖಂಡಿಸುತ್ತೇನೆ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್-ಕಹಳೆ ನ್ಯೂಸ್
ನವದೆಹಲಿ: ದೆಹಲಿ ಸಿಎಂ ಅರವಿಂದ ಕೇಜಿವಾಲ್ ಅವರು "ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ವರ್ಗಾವಣೆ ಮಾಡಿದ ಕೇಂದ್ರದ ಹಸ್ತಕ್ಷೇಪವನ್ನು ನಾನು ಖಂಡಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ಚುನಾವಣೆ ನಡೆಯುವ ಮುನ್ನವೇ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೇಂದ್ರದ ಸೇವೆಗೆ ಕರೆಸಿಕೊಳ್ಳುವ ಮುಖೇನ ರಾಜ್ಯದ ಹಕ್ಕುಗಳನ್ನು ಆಕ್ರಮಿಸಿದಂತಾಗಿದ್ದು, ಇದು ಒಕ್ಕೂಟದ ಮೇಲಿನ ಆಕ್ರಮಣ ಮತ್ತು ಅಸ್ಥಿರಗೊಳಿಸುವ ಯತ್ನವಾಗಿದೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಇತ್ತೀಚಿಗೆ ಪಶ್ಚಿಮ ಬಂಗಾಳಕ್ಕೆ ಭೇಟಿ...