Wednesday, January 22, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

ಅಯೋಧ್ಯೆ: ಗಣರಾಜ್ಯೋತ್ಸವ ದಿನ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ, ಈ ವಾರ ನೀಲನಕ್ಷೆ ಬಿಡುಗಡೆ – ಕಹಳೆ ನ್ಯೂಸ್

ಅಯೋಧ್ಯೆ: ಬಾಬ್ರಿ ಮಸೀದಿಗೆ ಬದಲಿಯಾಗಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ನೀಲನಕ್ಷೆ ಸಿದ್ಧವಾಗುತ್ತಿದ್ದು ಇದೇ ಶನಿವಾರ ಅನಾವರಣಗೊಳ್ಳಲಿದೆ. ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮುಂದಿನ ತಿಂಗಳು ಜನವರಿಯ ಗಣರಾಜ್ಯೋತ್ಸವ ದಿನ ನೆರವೇರಲಿದೆ ಎಂದು ಮಸೀದಿ ನಿರ್ಮಾಣದ ಟ್ರಸ್ಟ್ ತಿಳಿಸಿದೆ. ಬಾಬ್ರಿ ಮಸೀದಿಗೆ ಬದಲಾಗಿ ನಿರ್ಮಿಸಲಿರುವ ಮಸೀದಿಗೆ ಅಯೋಧ್ಯೆಯಲ್ಲಿ 5 ಎಕರೆ ಜಮೀನನ್ನು ಮೀಸಲಿಡಲಾಗಿದ್ದು, 7 ದಶಕಗಳ ಹಿಂದೆ ಜಾರಿಗೆ ಬಂದ ಭಾರತದ ಸಂವಿಧಾನದ ದಿನವೇ ಶಂಕುಸ್ಥಾಪನೆ ನೆರವೇರಲಿದೆ. ನಮ್ಮ ಸಂವಿಧಾನ ಬಹುತ್ವವನ್ನು ಆಧಾರವಾಗಿಟ್ಟುಕೊಂಡಿದೆ, ಹೀಗಾಗಿ...
ಹೆಚ್ಚಿನ ಸುದ್ದಿ

“ದೇಶಿ ದೇಣಿಗೆಯಿಂದಲೇ ಅಯೋಧ್ಯೆ ರಾಮಮಂದಿರ ನಿರ್ಮಾಣ” – ಕಹಳೆ ನ್ಯೂಸ್

ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇದೇ ಆಗಸ್ಟ್ ತಿಂಗಳಿನಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ. ಟ್ರಸ್ಟ್ ಅಡಿಯಲ್ಲಿ ಮಂದಿರ ನಿರ್ಮಾಣದ ಪ್ರಕ್ರಿಯೆ ಮುಂದುವರೆದಿದ್ದು, ಸಾಮೂಹಿಕ ಕಾರ್ಯಕ್ರಮದ ಮೂಲಕ ಜನರಿಂದ ಸಂಗ್ರಹಿಸುವ ದೇಶದ ಹಣದಿಂದಲೇ ಮಂದಿರ ನಿರ್ಮಿಸಲಾಗುವುದು" ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. "ಜನರಿಂದ ಸಂಗ್ರಹಗೊಂಡ ಹಣದಲ್ಲಿಯೇ ಮಂದಿರ ನಿರ್ಮಾಣ ಮಾಡಲಾಗುವುದು. ವಿದೇಶದ ದೇಣಿಗೆ ಪಡೆಯಲು ಟ್ರಸ್ಟ್ ಗೆ ಅನುಮೋದನೆಯಿಲ್ಲದ ಕಾರಣ ದೇಶದ ಹಣದಿಂದಲೇ...
ಹೆಚ್ಚಿನ ಸುದ್ದಿ

ಪಂಜಾಬ್ ಗಡಿಯಲ್ಲಿ ಇಬ್ಬರು ಉಗ್ರರ ಹತ್ಯೆ- ಕಹಳೆ ನ್ಯೂಸ್

ನವದೆಹಲಿ: ಗಡಿ ಭದ್ರತಾ ಪಡೆಯ ಯೋಧರು ಗುರುವಾರ ಮುಂಜಾನೆ ಪಂಜಾಬ್ ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇವರು ಮುಂಜಾನೆ ಸುಮಾರು ‌2:30ಕ್ಕೆ ಅಂಟಾರಿಯ ಮುಂಭಾಗದಲ್ಲಿ ಶಸ್ತ್ರಸಜ್ಜಿತವಾಗಿ ಒಳನುಸುಳುತ್ತಿದ್ದ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಂದಿರುವುದೆಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.ಈ ಘಟನೆ ನಡೆದ ಸ್ಥಳದಲ್ಲಿ ಸೈನಿಕರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ದಟ್ಟವಾದ ಮಂಜು ಅವರಿಸಿರುವುದರಿಂದ ತಕ್ಷಣಕ್ಕೆ ‌ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ....
ಹೆಚ್ಚಿನ ಸುದ್ದಿ

ವಾಟ್ಸಾಪ್ ಪೇ ಮೂಲಕ ಹಣ ರವಾನೆ ಮಾಡುವುದು ಹೇಗೆ.? ಇಲ್ಲಿದೆ ಮಾಹಿತಿ – ಕಹಳೆ ನ್ಯೂಸ್

ಮಲ್ಟಿ ಮೀಡಿಯಾ ಸಂದೇಶ ಸೇವಾದಾರ ವಾಟ್ಸಾಪ್‌ ಇನ್ನು ಮುಂದೆ ತನ್ನ ಗ್ರಾಹಕರಿಗೆ ಡಿಜಿಟಲ್ ಹಣ ವರ್ಗವಣೆ ಮಾಡಲೆಂದು ನೂತನ ಸೌಲಭ್ಯ ಹೊರತಂದಿದೆ. ವಾಟ್ಸಾಪ್‌ ಪೇ ಕಿರು ತಂತ್ರಾಂಶ ಚಾಲ್ತಿಗೆ ಬಂದಿದ್ದು ಇನ್ನು ಮುಂದೆ ಎಸ್‌ಬಿಐ, ಐಸಿಐಸಿಐ, ಆಕ್ಸಿಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕುಗಳ ಗ್ರಾಹಕರು ಬಳಸಬಹುದಾಗಿದೆ. ಎರಡು ಕೋಟಿ ಬಳಕೆದಾರರ ಗರಿಷ್ಠ ಮಿತಿಯೊಂದಿಗೆ ಆರಂಭಿಸಿ, ಬರುವ ದಿನಗಳಲ್ಲಿ ಹಂತಹಂತವಾಗಿ ತನ್ನ ಯುಪಿಐ ನೆಲೆಯನ್ನು ಇನ್ನಷ್ಟು ವರ್ಧಿಸಿಕೊಳ್ಳುವ ಅವಕಾಶ ವಾಟ್ಸಾಪ್ ಪೇಗೆ ಇದ್ದು,...
ಹೆಚ್ಚಿನ ಸುದ್ದಿ

ವಾಮದಪದವಿನ ಸರ್ಕಾರಿ ಪ್ರೌಢಶಾಲೆಯ ಗೋಡೆಯಲ್ಲಿ ವರ್ಲಿ ಚಿತ್ತಾರ- ಕಹಳೆ ನ್ಯೂಸ್

ವಾಮದಪದವು: ವಾಮದಪದವಿನ ಚಿತ್ತಾರ ತಂಡದಿಂದ ಪ್ರೌಢಶಾಲಾ ವಿಭಾಗಕ್ಕೆ ಶಾಲಾ ಗೋಡೆ ಮತ್ತು ಕಚೇರಿ ಕೊಠಡಿಗೆ ಹೊಸ ಕಾಯಕಲ್ಪ ನೀಡುವ ಕಾರ್ಯ ನಡೆಯುತ್ತಿದೆ . ಈ ಕಾರ್ಯಕ್ಕೆ ಸಂಸ್ಥೆಯ ಉಪಪ್ರಾಂಶುಪಾಲರು,ಚಿತ್ರಕಲಾ ಶಿಕ್ಷಕರು, ಶಿಕ್ಷಕ ವೃಂದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ. ಹಾಗೆ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ತಂಡವು ಒಂದು ತಿಂಗಳ ಕಠಿಣ ಪರಿಶ್ರಮದಿಂದ ಈ ಕಲಾ ಕೈಂಕರ್ಯ ದಿಂದ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳು ಭಾರತೀಯ ನೃತ್ಯ ಪ್ರಾಕಾರದ ಭಾವ -ಭಂಗಿಗಳು, ಹಳ್ಳಿಯ...
ಹೆಚ್ಚಿನ ಸುದ್ದಿ

ಗ್ರಾಹಕರಿಗೆ ಶಾಕ್ : ಪ್ರತಿ ಅಡುಗೆ ಎಲ್ ಪಿಜಿ ಬೆಲೆ 50 ರೂಪಾಯಿ ಹೆಚ್ಚಳ – ಕಹಳೆ ನ್ಯೂಸ್

ನವದೆಹಲಿ: ಬುಧವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಅಡುಗೆ ಅನಿಲ ಎಲ್ ಪಿಜಿ ದರ ಪ್ರತಿ ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಳಕಂಡಿದೆ. ಸಬ್ಸಿಡಿ ರಹಿತ ಎಲ್ ಪಿಜಿ ದರ 14.2 ಕೆ.ಜಿ ಸಿಲಿಂಡರ್ ಗೆ 644 ರೂ.ಗಳಿಂದ 694 ರೂ.ಗೆ ಏರಿಕೆ ಮಾಡಲಾಗಿದೆ ಇಂಧನ ಮಾರುಕಟ್ಟೆ ಕಂಪನಿಗಳ ಬೆಲೆ ಪ್ರಕಟಣೆ ತಿಳಿಸಿದೆ. ಡಿಸೆಂಬರ್ 1ರಂದು ಸಿಲಿಂಡರ್ ಬೆಲೆ 50 ರೂ.ಗೆ ಏರಿಕೆ ಯಾಗಿತ್ತು. ಈಗ ಸಬ್ಸಿಡಿ ರಹಿತ...
ಹೆಚ್ಚಿನ ಸುದ್ದಿ

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ; ಮಂಗಳೂರು ಶಾಸಕ ಯು.ಟಿ.ಖಾದರ್- ಕಹಳೆ ನ್ಯೂಸ್

ವಿಟ್ಲ:ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಬದಲಾಗಿ ಕಾಂಗ್ರೆಸ್ ಜಾರಿಗೆ ತಂದ ಹಲವು ಜನಪರ ಯೋಜನೆಗಳನ್ನು ನಿಲ್ಲಿಸಲಾಗಿದೆ ಎಂದು ವಿಟ್ಲದಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಾಗೆಯೇ ಅವರು,ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾರರು ನೀಡುವ ಪ್ರತಿಯೊಂದು ಮತವೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದರು. ರೇಶನ್ ಕಾರ್ಡ್ ವಿತರಣೆಯಾಗಿಲ್ಲ. ಮನೆ ಹಸ್ತಾಂತರ ಮಾಡಿಲ್ಲ. ಪಿಂಚಣಿ ಕೂಡಾ ಬಡವರಿಗೆ ದೊರೆಯುತ್ತಿಲ್ಲ....
ಹೆಚ್ಚಿನ ಸುದ್ದಿ

ಬಜತ್ತೂರು ಗ್ರಾಮಸ್ಥರಿಂದ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ-ಕಹಳೆ ನ್ಯೂಸ್

ಬಜತ್ತೂರು: ಬಜತ್ತೂರು‌ ಗ್ರಾಮದಲ್ಲಿ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಕಳೆದ 15 ವರ್ಷಗಳಿಂದ ರೆಂಜಾಳ‌, ಸುಳ್ಯ, ಜಾನಪಾಲು ರಸ್ತೆಯನ್ನು ದುರಸ್ತಿಗೊಳಿಸದೆ, ಕೊಳಚೆ ನೀರಿನ ಸಮಸ್ಯೆಯನ್ನು ಕಡೆಗಣಿಸಿದ್ದಾರೆ. ಇದರಿಂದ ಬೇಸತ್ತ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಹಾಗೆಯೇ ರೆಂಜಾಳ, ಸುಳ್ಯ, ಬೆದ್ರೋಡಿ, ಜಾನಪಾಲು ಗ್ರಾಮಸ್ಥರು ಈ ಮೂಲಕ ನಮ್ಮ ಸಮಸ್ಯೆಗೆ ಪರಿಹಾರ ಮಾಡುವ ಬದಲು ನಿಮ್ಮಲ್ಲಿ‌ ಒಗ್ಗಟಿಲ್ಲ ಅನ್ನುವ ವೇದವಾಕ್ಯ ಮುಂದಿಟ್ಟು ನಮ್ಮ ಸಮಸ್ಯೆಯನ್ನು ಕಡೆಗಣಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ....
1 88 89 90 91 92 132
Page 90 of 132