ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಡಿಸೆಂಬರ್16 ರಿಂದ 21 ರವರೆಗೆ ಕಜಂಬು ಜಾತ್ರೆ- ಕಹಳೆ ನ್ಯೂಸ್
ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಡಿಸೆಂಬರ್ 16ರಂದು ಅನುವಂಶಿಕ ಮೊಕ್ತೇಸರರಾದ ವಿಟ್ಲ ಅರಮನೆಯ ಬಂಗಾರು ಅರಸರ ಮುಂದಾಳುತ್ವದಲ್ಲಿ ಕಾಲಾವಧಿ ಕಜಂಬು ಜಾತ್ರೆ ನಡೆಯಲಿದೆ. ಕೋವಿಡ್-19 ಸರ್ಕಾರದ ನಿಯಮಾವಳಿಯಂತೆ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಕೃಷ್ಣಯ್ಯ ಬಲ್ಲಾಳ್ ಹೇಳಿದರು. ಈ ಜಾತ್ರೆಯು ಡಿಸೆಂಬರ್ 15ರ ಧನುಸಂಕ್ರಮಣದಂದು ಧ್ವಜಾರೋಹಣಗೊಂಡು, ಡಿಸೆಂಬರ್ 16 ರಂದು ಕಜಂಬು ಉತ್ಸವ ನಡೆಯಲಿದೆ. ಕೋವಿಡ್- 19 ಇರುವ ಕಾರಣ ಕಜಂಬಿನ ಮಕ್ಕಳನ್ನು ಸ್ನಾನ ಮಾಡಿಸುವ ಬದಲಾಗಿ...