Monday, January 20, 2025

archiveಕಹಳೆ ನ್ಯೂಸ್

ಪುತ್ತೂರು

ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್‍ನ ಮೂಲಕ ಆರ್ಥಿಕ ಸಹಾಯದ ಚೆಕ್ ಹಸ್ತಾಂತರ-ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೃಷ್ಣ ನಗರ ನಿವಾಸಿ ಶಬ್ರಿನ್ ತಾಜ್ ರವರ ಮಗಳ ಮದುವೆಗೆ ರೈ ಎಸ್ಟೇಟ್ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‍ನ ಮೂಲಕ ಆರ್ಥಿಕ ಸಹಾಯದ ಚೆಕ್ಕನ್ನು ದರ್ಬೆಯ ಕಛೇರಿಯಲ್ಲಿ ಹಸ್ತಾಂತರಿಸಿದರು. ಉದ್ಯಮಿ, ರೈ ಎಸ್ಟೇಟ್‍ನ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಆರ್ಥಿಕ ಸಹಾಯದ ಚೆಕ್ಕನ್ನು ಹಸ್ತಾಂತರಿಸಿದ್ದಾರೆ....
ಪುತ್ತೂರು

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಪ್ಪಳಿಗೆಯ ಕ್ಯಾಂಪಸ್‍ನಲ್ಲ್ಲಿ ರಕ್ಷಾಬಂಧನ ಆಚರಣೆ-ಕಹಳೆ ನ್ಯೂಸ್

ಪುತ್ತೂರು: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಪ್ಪಳಿಗೆಯ ಕ್ಯಾಂಪಸ್‍ನಲ್ಲಿ ಆಯೋಜಿಸಲಾದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾರ್ಕಳದ ವಾಗ್ಮಿ ಆದರ್ಶ ಗೋಖಲೆ ರಕ್ಷಾಬಂಧನ ಎಂಬುದು ಕೇವಲ ಒಂದು ದಿನದ ಆಡಂಬರಕ್ಕಾಗಿ ಇರುವಂತಹದ್ದಲ್ಲ. ಅದೊಂದು ಪವಿತ್ರ ಬಂಧ. ಒಮ್ಮೆ ರಕ್ಷೆ ಕಟ್ಟಿದರೆ ಆಜನ್ಮ ಪರ್ಯಂತ ಪರಸ್ಪರ ಅಣ್ಣ-ತಂಗಿಯರಾಗಿರುತ್ತಾರೆಂಬ ಉತ್ಕøಷ್ಟ ಅರ್ಥ ರಕ್ಷೆ ಕಟ್ಟುವುದರ ಹಿಂದೆ ಅಡಗಿದೆ. ಮಾತ್ರವಲ್ಲದೆ ನಾವು ಬೇರೆ ಎಂಬ ಕಲ್ಪನೆಯಿಂದ ನಾವೆಲ್ಲಾ ಒಂದೇ ಎಂಬ...
ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಐಕ್ಯೂಎಸಿ ಘಟಕದ ವತಿಯಿಂದ ಮಾಹಿತಿ ಕಾರ್ಯಕ್ರಮ-ಕಹಳೆ ನ್ಯೂಸ್

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಐಕ್ಯೂಎಸಿ ಘಟಕದ ವತಿಯಿಂದ ಮಾನದಂಡದ ಪ್ರಕಾರ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಅಂಶಗಳ ಮೇಲೆ ದೃಷ್ಟಿಕೋನ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ನಡೆಯಿತು. ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಡಾ.ನೀತು ಸೂರಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿಯನ್ನು ನೀಡಿದರು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಡಾಕ್ಟರ್ ಪ್ರಸಾದ ಓ. ಸ್ವಾಗತಿಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾಕ್ಟರ್ ಗೋವಿಂದ ಎನ್.ಎಸ್ ಧನ್ಯವಾದ ಸಮರ್ಪಿಸಿದರು....
ಅಂಕಣ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಹಿಂದೂ ಮತ್ತು ನಾಝಿ ಸ್ವಸ್ತಿಕ’ ಈ ವಿಷಯದ ಸಂಶೋಧನೆಯು ನವ ದೆಹಲಿಯ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಂಡಣೆ !- ಕಹಳೆ ನ್ಯೂಸ್

ಪ್ರತೀಕಗಳಿಂದ ಪ್ರಕ್ಷೇಪಿಸುವ ಸೂಕ್ಷ್ಮ ಸ್ಪಂದನಗಳು ಸಮಾಜವು ಆ ಪ್ರತೀಕಗಳತ್ತ ನೋಡುವ ದೃಷ್ಟಿಯನ್ನು ನಿರ್ಧರಿಸುತ್ತದೆ ಪ್ರತಿಯೊಂದು ಪ್ರತೀಕದಿಂದ ಸೂಕ್ಷ್ಮ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿರುತ್ತವೆ. ಈ ಸೂಕ್ಷ್ಮ ಸ್ಪಂದನಗಳು ಸಕಾರಾತ್ಮಕ ಅಥವಾ ನಕಾರಾತ್ಮಕ ಇರಬಹುದು. ಹೆಚ್ಚಿನ ಧಾರ್ಮಿಕ ಮುಖಂಡರು ತಮ್ಮ ಧರ್ಮದ ಪ್ರತೀಕಗಳಿಂದ ಪಕ್ಷೇಪಿತವಾಗುವ ಸೂಕ್ಷ್ಮ ಸ್ಪಂದನಗಳತ್ತ ಗಮನ ನೀಡುವುದಿಲ್ಲ. ಇದರಿಂದಾಗಿ ಈ ಸ್ಪಂದನಗಳಿಂದ ಅವರ ಭಕ್ತರ ಮೇಲೆ ಕೆಟ್ಟ ಪರಿಣಾಮವಾಗಬಹುದು, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಇವರು ಪ್ರತಿಪಾದಿಸಿದರು....
ಕಡಬ

ಕಡಬ: ಹೋಟೆಲ್‍ನಲ್ಲಿ ಕೆಲಸಕ್ಕಿದ್ದ ವ್ಯಕ್ತಿಯಿಂದ ಹಲವರಿಗೆ ಪಂಗನಾಮ: ಸಾಲ ಕೊಟ್ಟವರಿಗೆ ವಂಚಿಸಿ ಎಸ್ಕೇಪ್-ಕಹಳೆ ನ್ಯೂಸ್

ಕಡಬ: ಎರಡು ತಿಂಗಳ ಹಿಂದೆ ಪ್ರಾರಂಭಗೊಂಡಿದ್ದ ಹೋಟೆಲ್‍ನಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದ ವ್ಯಕ್ತಿ, ಸ್ಥಳೀಯರೊಂದಿಗೆ ಸ್ನೇಹ ಸಂಪಾದಿಸಿ ತನ್ನ ಮಾತಿನ ಮೋಡಿಯಲ್ಲಿಯೇ ಹಲವರಿಂದ ಹಣ ಹಾಗೂ ವಸ್ತುಗಳನ್ನು ಪಡೆದುಕೊಂಡು ವಂಚಿಸಿದ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಈ ವ್ಯಕ್ತಿ ಈಗಾಗಲೇ ಕಡಬದಿಂದ ನಾಪತ್ತೆಯಾಗಿದ್ದಾನೆ. ಈತ ನಾಪತ್ತೆಯಾಗುತ್ತಿದ್ದಂತೆ ಹಣ ನೀಡಿದವರು ದಂಗಾಗಿದಾರೆ ಮೈಸೂರು, ಪಿರಿಯಪಟ್ಟಣ ನಿವಾಸಿಯಾಗಿರುವ ಶರತ್ ಬಾಬು ಎಂಬಾತ ಕಡಬದ ಹೋಟೆಲ್‍ನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಸ್ಥಳೀಯವಾಗಿ ಬಾಡಿಗೆ ಕೊಠಡಿಯಲ್ಲಿ...
ಪುತ್ತೂರು

ಪುತ್ತೂರು ಮಹಾಲೀಂಗೇಶ್ವರ ದೇವಳದ ಪಂಚಾಕ್ಷರಿ ಮಂಟಪದಲ್ಲಿ ಕೇಶವ ನಾಯ್ಕ್ ಎಂಬವರ ಮೃತದೇಹ ಪತ್ತೆ – ಕಹಳೆ ನ್ಯೂಸ್

ಪುತ್ತೂರು: ಮಹಾಲೀಂಗೇಶ್ವರ ದೇವಳದ ಪಂಚಾಕ್ಷರಿ ಮಂಟಪದಲ್ಲಿ ವೃದ್ಧರೊಬ್ಬರು ಅಸುನೀಗಿದ ಘಟನೆ ನಡೆದಿದ್ದು, ಮೃತರನ್ನು ವಿಟ್ಲ ಮೂಲದ ಕೇಶವ ನಾಯ್ಕ್ ಎಂದು ಗುರುತಿಸಲಾಗಿದ್ದು, ಸಂಬಂಧಿಕರು ಪುತ್ತೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಮನವಿ ಮಾಡಿಕೊಳ್ಳಲಾಗಿದೆ.  ...
ಪುತ್ತೂರು

ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ: ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ 97% ಫಲಿತಾಂಶ-ಕಹಳೆ ನ್ಯೂಸ್

ಪುತ್ತೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಿನಲ್ಲಿ ನಡೆಸಿದ ಪರೀಕ್ಷೆಗಳ ಫಲಿತಾಂಶವು ಪ್ರಕಟಗೊಂಡಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು 97% ಫಲಿತಾಂಶದೊಂದಿಗೆ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ 318 ವಿದ್ಯಾರ್ಥಿಗಳಲ್ಲಿ 308 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಾಲೇಜಿನ ವಿಭಾಗವಾರು ಫಲಿತಾಂಶಗಳ ಪೈಕಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ-100%, ಕಂಪ್ಯೂಟರ್ ಸೈನ್ಸ್-98%, ಸಿವಿಲ್ ಇಂಜಿನಿಯರಿಂಗ್...
ಸುದ್ದಿ

ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಕಾರ್ಯ ನಿರ್ವಹಣಾ ತಂಡದ ಸಭೆಯನ್ನು ಉದ್ಘಾಟಿಸಿದ ದಕ್ಷಿಣ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ್- ಕಹಳೆ ನ್ಯೂಸ್

ಮಂಗಳೂರು: ಭುವನೇಂದ್ರ ಸಭಾಭವನದಲ್ಲಿ ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಯವರ ಅದ್ಯಕ್ಷತೆಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಕಾರ್ಯ ನಿರ್ವಹಣಾ ತಂಡದ ಸಭೆಯನ್ನು ಉದ್ಘಾಟಿಸಿದ ಮಂಗಳೂರು ದಕ್ಷಿಣ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ್ ಬಳಿಕ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ದಿನ ಪ್ರಯುಕ್ತ, ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು. ನಂತರ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು...
1 103 104 105 106 107 126
Page 105 of 126