Monday, April 7, 2025

archiveಕಹಳೆ ನ್ಯೂಸ್

ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಜೈನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಅಯೂಬ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸುವಂತೆ ಅಗ್ರಹಿಸಿ ಮೂಡಬಿದರೆ ಜೈನ ಸಮಾಜಭಾಂದವರ ವತಿಯಿಂದ ಮನವಿ – ಕಹಳೆ ನ್ಯೂಸ್

ಮೂಡುಬಿದಿರೆ: ಜೈನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದು ಮಾತ್ರವಲ್ಲದೆ ಅಪರಾಧಿಕ ಒಳಸಂಚು ಮಾಡಿ ಭಾರತದ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿರುವ ಅಯೂಬ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸಿ , ವಿಚಾರಣೆಗೆ ಒಳಪಡಿಸಿ ಶೀಘ್ರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮೂಡಬಿದರೆ ಜೈನ ಸಮಾಜದವರು ಶ್ರೀ ಯತಿರಾಜ್ ಶೆಟ್ಟಿ ಮೂಲಕ ಮೂಡಬಿದ್ರೆಯ ಠಾಣಾಧಿಕಾರಿ ಶ್ರೀ ಸುದೀಪ್ ಎಂ.ವಿ.ಇವರಲ್ಲಿ ದೂರನ್ನು ದಾಖಲಿಸಿದರು. ಈ ಸಂದರ್ಭದಲ್ಲಿ...
ಸುದ್ದಿ

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯನ್ನು ಬೆಂಬಲಿಸಿ ಪ್ರತಾಪ್ ಸಿಂಹ ಟ್ವೀಟ್..!! – ಕಹಳೆ ನ್ಯೂಸ್

ಬೆಂಗಳೂರು: ಹಿಜಾಬ್ ಹೋರಾಟದ ಮಧ್ಯೆ ಸಂಸದ ಪ್ರತಾಪ್ ಸಿಂಹ ಮಾಡಿರುವ ಟ್ವೀಟ್ ಒಂದು ವೈರಲ್ ಆಗ್ತಿದೆ. ಮಂಡ್ಯ ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಸುತ್ತುವರಿಯಲು ಯತ್ನಿಸಿರುವ ಬಗ್ಗೆ ಪ್ರತಾಪ್ ಸಿಂಹ ಮಾಡಿರುವ ಟ್ವೀಟನ್ನು ಮಾಡಿ ಬಳಿಕ ಡಿಲಿಟ್ ಮಾಡಿದ್ದಾರೆ. Video: ಮಂಡೆ ಬಿಸಿ ಬದಿಗಿಡಿ...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್‍ಗೆ ನುಗ್ಗಿ ಪಕ್ಕದ ಕಂದಕಕ್ಕೆ ಉರುಳಿದ ಕಾರು- ಕಹಳೆ ನ್ಯೂಸ್

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿರುವ ಹೊಟೇಲಿಗೆ ನುಗ್ಗಿ ಬಳಿಕ ಪಕ್ಕದ ಕಂದಕಕ್ಕೆ ಉರುಳಿದ ಘಟನೆ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಉಪ್ಪಿನಂಗಡಿ ಕಡೆ ಸಾಗುತ್ತಿದ್ದ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಿರುವ ಹೊಟೇಲ್‍ಗೆ ನುಗ್ಗಿದ ಪರಿಣಾಮ, ಹೊಟೇಲ್ ಮಾಲಕ ಗಂಭೀರ ಗಾಯಗೊಂಡಿದ್ದು, ಮೂವರು ಹೊಟೇಲ್ ಸಿಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಂಭೀರ ಗಾಯಗೊಂಡಿರುವ ಹೊಟೇಲ್ ಮಾಲಕರಾದ ರಿಯಾಝ್...
ದಕ್ಷಿಣ ಕನ್ನಡಸುದ್ದಿ

ದೇರೆಬೈಲು ಉತ್ತರ 17ನೇ ವಾರ್ಡಿನಲ್ಲಿ 45 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿದ ಶಾಸಕ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು : ಜೆ. ಬಿ. ಲೋಬೊ ರಸ್ತೆಯ ಪಾಲ್ದಾಡಿಯಲ್ಲಿನ ದೇರೆಬೈಲು ಉತ್ತರ 17ನೇ ವಾರ್ಡಿನಲ್ಲಿ 45 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಮನೋಜ್ ಕುಮಾರ್ ಕೋಡಿಕಲ್, ಬೂತ್ ಕಾರ್ಯದರ್ಶಿ ರಾಜ್ ಕುಲಾಲ್, ಪಕ್ಷದ ಪ್ರಮುಖರಾದ ರಾಮದಾಸ್ ನಾಯಕ್, ರಾಘವ್ ಶೆಟ್ಟಿ, ರಮೇಶ್ ಕುಮಾರ್, ರಾಧಿಕಾ ಬಾಳಿಗ, ನಿರ್ಮಲ ಆಚಾರ್ಯ, ಗಣೇಶ್ ಕಾಮತ್,...
ಸಂತಾಪಸುದ್ದಿ

ಹಾಡು ನಿಲ್ಲಿಸಿದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ – ಕಹಳೆ ನ್ಯೂಸ್

ಮುಂಬೈ : ಭಾರತ ರತ್ನ, ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಅವರು ಇಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಜನವರಿ 8ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಕೊರೊನಾ ಸೋಂಕು ಕೂಡ ದೃಢಪಟ್ಟಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು. ಇಂದೋರ್ ನಲ್ಲಿ 1929ರಲ್ಲಿ ಜನಿಸಿದ ಲತಾ ಮಂಗೇಶ್ಕರ್ ಪ್ರಾಥಮಿಕವಾಗಿ ಹಿಂದಿ ಮತ್ತು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಹಿಂದೂ ಜಾಗರಣ ವೇದಿಕೆ ನಡೆಸಿದ ಬೃಹತ್ ಹೋರಾಟಕ್ಕೆ ಜಯ; ಶ್ರೀ ಕಾರಿಂಜೇಶ್ವರ ಸನ್ನಿದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಎಲ್ಲಾ ಕೋರೆಗಳು ಸ್ಥಗಿತ ; ಅಧಿಕೃತ ಮಾಹಿತಿ ನೀಡಿದ ಇಲಾಖೆ – ಕಹಳೆ ನ್ಯೂಸ್

ಬಂಟ್ವಾಳ : ಕಾರಿಂಜ ಶ್ರೀ ಕಾರಿಂಜೇಶ್ವರ ಸನ್ನಿದಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಎಲ್ಲಾ ಕೋರೆಗಳು ಸ್ಥಗಿತಗೊಂಡಿದೆ ಎಂದು ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಕೆಲ ಸಮಯಗಳಿಂದ ಬಾರೀ ಸುದ್ದಿಯಾಗಿದ್ದ ಕಾರಿಂಜದ ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ. ಈ ಭಾಗದಲ್ಲಿ ಮೂರು ಜನರಿಗೆ ಸೇರಿದ ಕಪ್ಪು ಕಲ್ಲಿನ ಕೋರೆ ಕಾರ್ಯಚರಿಸುತ್ತಿದ್ದು, ಪ್ರಸ್ತುತ ಅದನ್ನು ಕೂಡ ನಿಲ್ಲಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ತಿಂಗಳ ಹಿಂದೆ ವ್ಯಕ್ತಿಯೋರ್ವರು ಪರವಾನಿಗೆ ರಹಿತವಾಗಿ ಅಕ್ರಮ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಏಕೀಕರಣದ ಪ್ರಸ್ತುತತೆ’ ಕಾರ್ಯಕ್ರಮ- ಕಹಳೆ ನ್ಯೂಸ್

ಪುತ್ತೂರು: ಕೇವಲ ಪಠ್ಯಪುಸ್ತಕಗಳ ಕಲಿಕೆಯು ಇತಿಹಾಸವನ್ನು ಕಲಿಸಲು ಸಾಧ್ಯವಿಲ್ಲ. ಚರಿತ್ರೆಯನ್ನು ಅವಲೋಕಿಸಿ ಅಧ್ಯಯನವನ್ನು ಮಾಡುವುದರ ಮೂಲಕ ನಿಜವಾದ ಚರಿತ್ರೆಯನ್ನು ತಿಳಿಯಬಹುದು. ನಮ್ಮ ಊರಿನ ಇತಿಹಾಸ ಅಥವಾ ಕುಟುಂಬದ ಚರಿತ್ರೆಯನ್ನು ಮೊದಲು ತಿಳಿದುಕೊಂಡು ನಂತರದಲ್ಲಿ ದೇಶದ ಚರಿತ್ರೆಯನ್ನು ತಿಳಿಯಲು ಪ್ರಯತ್ನಪಡಬೇಕು ಎಂದು ಮಂಗಳೂರಿನ ಡಾ. ಪಿ ದಯಾನಂದ ಪೈ, ಪಿ ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ನವೀನ್ ಕೊಣಾಜೆ ಹೇಳಿದರು. ಅವರು ಇಲ್ಲಿನ...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ : ದೇರಾಜೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರದ ಪುನರ್ ಪ್ರತಿಷ್ಠೆ, 108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ- ಕಹಳೆ ನ್ಯೂಸ್

ಬೆಳ್ತಂಗಡಿ : ಫೆ.19 ಮತ್ತು 20ರಂದು ಮರೋಡಿ ಗ್ರಾಮದ ದೇರಾಜೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರದ ಪುನರ್ ಪ್ರತಿಷ್ಠೆ, 108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮೋತ್ಸವವು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯಲ್ಲಿ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ಬಿಡುಗಡೆಗೊಳಿಸಿದರು. ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ಮರೋಡಿ ದೇರಾಜೆಬೆಟ್ಟದ ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನವು 250 ವರ್ಷಗಳ ಹಿಂದೆ ಪಾಳುಬಿದ್ದಿತ್ತು , ಸುಮಾರು 38 ವರ್ಷಗಳ...
1 2 3 4 5 126
Page 3 of 126
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ