Recent Posts

Sunday, September 22, 2024

archiveಕಹಳೆ ನ್ಯೂಸ್

ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಆ್ಯಂಡ್ರಾಯಿಡ್ ಡೆವೆಲಪ್‍ಮೆಂಟ್ ಕುರಿತಾಗಿ ಒಂದು ದಿನದ ಕಾರ್ಯಾಗಾರ- ಕಹಳೆ ನ್ಯೂಸ್

ಪುತ್ತೂರು: ಇಂದಿನ ದಿನಗಳಲ್ಲಿ ಆ್ಯಂಡ್ರಾಯ್ಡ್ ನ ಬೆಳವಣಿಗೆ ಹಾಗೂ ಅದಕ್ಕೆ ಬೇಕಾದ ಎಲ್ಲಾ ವಿಚಾರಗಳು ಪಿಎಚ್ಪಿ, ಎಕ್ಸ್‍ಎಂಎಲ್, ಜಾವಾ ಎಲ್ಲವನ್ನೂ ಮಕ್ಕಳು ತಿಳಿದಿರಬೇಕು. ನಿಮ್ಮ ಬೆಳೆವಣಿಗೆಯೊಂದಿಗೆ ಈಗಿನ ಹೊಸ ಆ್ಯಂಡ್ರಾಯ್ಡ್ ಬೆಳವಣಿಗೆಯನ್ನು ಕಲಿಯಬೇಕು ಎಂದು ಮಂಗಳೂರಿನ ಎಐಎಂಐಟಿ ಕಾಲೇಜಿನ ಎಂಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಥಾಮಸ್ ಸಿ.ಜಿ. ಹೇಳಿದರು. ವಿವೇಕಾನಂದ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗ ಮತ್ತು ಐಟಿ ಕ್ಲಬ್ ಹಾಗೂ ಐಕ್ಯೂಎಸಿ ಘಟಕ ಇದರ ಆಶ್ರಯದಲ್ಲಿ ಆಯೋಜಿಸಿಲಾದ...
ಬೆಳ್ತಂಗಡಿ

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದಿಂದ ಗುರುವಾಯನಕೆರೆಯಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆ – ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ ಭಾಗಿ –ಕಹಳೆ ನ್ಯೂಸ್

ಮಂಗಳೂರು: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಕುವೆಟ್ಟು ಮತ್ತು ಕಣಿಯೂರು ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಸಭಾಭವನದಲ್ಲಿ ನಡೆದ ಸಭೆಯನ್ನು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, "ಕೋಟ ಶ್ರೀನಿವಾಸ ಪೂಜಾರಿಯವರು ದಣಿವರಿಯದ ನಾಯಕ. ಮುಜರಾಯಿ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಇವರು ಈಗ ಸಮಾಜ...
ಸುದ್ದಿ

ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾದ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ಆನ್ಲೈನ್ ಟ್ಯೂಶನ್ ತರಗತಿಗಳು ಆರಂಭ – ಕಹಳೆ ನ್ಯೂಸ್

ಪುತ್ತೂರು: ಕೊರೋನಾ ಕಾರಣದಿಂದ ಕುಸಿದಿರುವ ಶೈಕ್ಷಣಿಕ ಮಟ್ಟವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಿ ಪರೀಕ್ಷೆಗಳಿಗೆ ತಯಾರಿಯನ್ನು ಮಾಡುವುದು ವಿದ್ಯಾಮಾತಾ ಅಕಾಡೆಮಿಯ ಉದ್ದೇಶವಾಗಿದ್ದು, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 8,9,10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಆನ್ಲೈನ್ ಟ್ಯೂಶನ್ ಕ್ಲಾಸ್ ಗಳನ್ನು ಆರಂಭಿಸಿದೆ. ಹೈಸ್ಕೂಲ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ವಿದ್ಯಾಮಾತಾ ಅಕಾಡೆಮಿಯು ಹೆಚ್ಚುವರಿ ಬೋಧನಾ ತರಗತಿ(ಟ್ಯೂಶನ್) ನ್ನು ಆರಂಭಿಸಿದ್ದು, ತರಗತಿಗಳು ಸಾಯಂಕಾಲ 6ರಿಂದ ರಾತ್ರಿ 8ರ ವರೆಗೆ ಆನ್ಲೈನ್ ಮುಖಾಂತರ ನಡೆಯಲಿದೆ. ಆನ್ಲೈನ್ ತರಗತಿಗಳಲ್ಲಿ ಗರಿಷ್ಠ...
ಮೂಡಬಿದಿರೆ

ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಜಂಟಿ ಆಶ್ರಯದಲ್ಲಿ “ಸಂಮಿಲನ್ 2021” ಮಂಗಳೂರು ವಿಭಾಗ ಮಟ್ಟದ ಕ್ರೀಡಾಕೂಟ- ಕಹಳೆ ನ್ಯೂಸ್

ಮೂಡುಬಿದಿರೆ: ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಕಲ್ಲಬೆಟ್ಟುವಿನಲ್ಲಿ ನಡೆದ `ಸಂಮಿಲನ್ 2021' ಮಂಗಳೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಅತಿಥೇಯ ಮೂಡುಬಿದಿರೆ ಜೈನ್ ಮಿಲನ್ ಚಾಂಪಿಯನ್ ಪ್ರಶಸ್ತಿ ಹಾಗೂ ನಾರಾವಿ ಜೈನ್ ಮಿಲನ್ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಜೈನ್ ಮಿಲನ್...
ಸುದ್ದಿ

ಸ್ಕೂಟರ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯಿಂದ ಶಾಲಾ ವಿದ್ಯಾರ್ಥಿನಿಗೆ ಕಿರುಕುಳ- ಆರೋಪಿಗಾಗಿ ಹುಡುಕಾಟ- ಕಹಳೆ ನ್ಯೂಸ್

ಮಂಗಳೂರು: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ಸ್ಕೂಟರಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಲಪಾಡಿ ಅಲಂಕಾರುಗುಡ್ಡೆ ಬಳಿ ಇಂದು ಬೆಳಿಗ್ಗೆ ನಡೆದಿದೆ. ಕೋಟೆಕಾರು ಬಳಿಯ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ತಲಪಾಡಿ ಚೆಕ್ ಪೋಸ್ಟ್ ಬಳಿ ಬಸ್ಸು ಹತ್ತಲು ಒಳದಾರಿಯಾಗಿ ನಡೆಕೊಂಡು ಬರುವಾಗ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಗಾಬರಿಗೊಂಡು ಬೊಬ್ಬಿಟ್ಟಿದ್ದಾಳೆ. ಸ್ಥಳೀಯರು ಜಮಾಯಿಸುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ವಿದ್ಯಾರ್ಥಿನಿಗೆ ಧೈರ್ಯ ತುಂಬಿದ ಸ್ಥಳೀಯರು ಉಳ್ಳಾಲ ಪೋಲೀಸ್ ಠಾಣೆಯಲ್ಲಿ ದೂರು...
ಬೆಳ್ತಂಗಡಿ

ಕಣಿಯೂರು: ಶರತ್ ಪದ್ಮುಂಜ ಮಾಲಕತ್ವದ ಖುಷಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ನ ನೂತನ ಮಳಿಗೆ ಶುಭಾರಂಭ- ಕಹಳೆ ನ್ಯೂಸ್

ಕಣಿಯೂರು: ಮಾವಿನಕಟ್ಟೆ-ಪಿಲಿಗೂಡು ಪೇಟೆಯಲ್ಲಿ ಶರತ್ ಪದ್ಮುಂಜ ಎಂಬವರ ಮಾಲಕತ್ವದಲ್ಲಿ "ಖುಷಿ" ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಸಂಸ್ಥೆಯನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಯವರು ಶುಭ ಮುಹೂರ್ತದಲ್ಲಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಗೋಪಾಲ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಗೌಡ ಹಾಗೂ ಗಣ್ಯರು, ಬಂಧು-ಮಿತ್ರರು, ಹಿತೈಷಿಗಳು ಹಾಗೂ...
ಬಂಟ್ವಾಳ

ವೀರಕಂಬ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಚು ಡೆಸ್ಕ್ ಖರೀದಿಸಲು ಸಹಾಯಧನ ಹಸ್ತಾಂತರ- ಕಹಳೆ ನ್ಯೂಸ್

ಬಂಟ್ವಾಳ: ವೀರಕಂಬ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಶತಮಾನೋತ್ಸವದ ಸಂಭ್ರಮದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ಪ್ರಾಥಮಿಕ ತರಗತಿಗೆ ಬೆಂಚು ಡೆಸ್ಕ್ ಖರೀದಿಸಲು ಸಹಾಯಧನದ ಚೆಕ್ಕನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀಯುತ ನಾರಾಯಣ ಪೂಜಾರಿಯವರಿಗೆ ಸಂಘದ ಅಧ್ಯಕ್ಷರಾದ ಶ್ರೀಯುತ ವೀರಪ್ಪ ಮೂಲ್ಯ ಬೆತ್ತಸರವು ನೀಡಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶ್ರೀಯುತ ಪದ್ಮನಾಭ ಮೂಲ್ಯ ಮಜಿ, ಹಾಗೂ ಕಾರ್ಯದರ್ಶಿ ಹರೀಶ್ ಬಂಗೇರ ಉಪಸ್ಥಿತರಿದ್ದರು....
ಸುದ್ದಿ

ಮಂಗಳೂರು: ಬೈಕ್ ಸವಾರನನ್ನು ತಡೆದು ಚಿನ್ನದ ಸರ ಸುಲಿಗೆ – ಮಂಗಳಮುಖಿ ಅರೆಸ್ಟ್ – ಕಹಳೆ ನ್ಯೂಸ್

ಮಂಗಳೂರು : ನಂತೂರು ಪದವು ಬಳಿ ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಚಿನ್ನದ ಸರವನ್ನು ಸುಲಿಗೆಗೈದ ಮಂಗಳಮುಖಿಯನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಪ್ರಸ್ತುತ ಬೆಂಗಳೂರಿನ ನಿವಾಸಿಯಾದ ಮೂಲತಃ ಮೈಸೂರಿನ ಅಗ್ರಹಾರದ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ (27) ಬಂಧಿತ ಆರೋಪಿಯಾಗಿದ್ದಾನೆ. ಎರಡು ತಿಂಗಳ ಹಿಂದೆ ಗಣೇಶ್ ಶೆಟ್ಟಿ ಎಂಬವರು ತನ್ನ ಬೈಕ್‍ನಲ್ಲಿ ನಂತೂರು ಪದವಿನಿಂದ ಬಿಎಸ್‍ಎನ್‍ಎಲ್ ಎಕ್ಸೇಂಜ್ ಬಳಿಯ ರಸ್ತೆಯಲ್ಲಿ ತೆರಳುತ್ತಿದ್ದಾಗ...
1 37 38 39 40 41 126
Page 39 of 126