Tuesday, November 26, 2024

archiveಕಹಳೆ ನ್ಯೂಸ್

ಉಡುಪಿ

ಉಡುಪಿ :ಟ್ರಾನ್ಸಿಟ್ ಮಿಕ್ಸರ್ ಲಾರಿ ಹರಿದು ಎಂಟು ವರ್ಷದ ಬಾಲಕಿ ಸಾವು- ಕಹಳೆ ನ್ಯೂಸ್

ಉಡುಪಿ : ಟ್ರಾನ್ಸಿಟ್ ಮಿಕ್ಸರ್ ಲಾರಿ ಹರಿದು ಎಂಟು ವರ್ಷದ ಬಾಲಕಿ ಮೃತಪಟ್ಟ ಘಟನೆ ಅಂಬಾಗಿಲು ಬಳಿ ನಡೆದಿದೆ. ಮೃತ ಬಾಲಕಿಯನ್ನು ಪ್ರಣಮ್ಯ ಎಂದು ಗುರುತಿಸಲಾಗಿದ್ದು, ಪ್ರಣಮ್ಯ ತನ್ನ ತಾಯಿ ಜೊತೆ ಸ್ಕೂಟರ್ ಹಿಂಬದಿಯಲ್ಲಿ ಕುಳಿತು ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಮಗಳು ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದರು. ಪ್ರಣಮ್ಯಳ ತಾಯಿ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾದರೆ,...
ಸುದ್ದಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಶಂಕರ ಶೆಟ್ಟಿಯವರನ್ನು ಸನ್ಮಾನಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಇಡ್ಯಾ ಪಶ್ಚಿಮ ವಾರ್ಡ್ ನಂ 7 ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀ ಶಂಕರ ಶೆಟ್ಟಿಯವರನ್ನು ಶಾಸಕರಾದ ಡಾ.ವೈ ಭರತ್ ಶೆಟ್ಡಿಯವರು ಸನ್ಮಾನಿಸಿದರು. ಹೊಸಬೆಟ್ಟಿನ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಮಂಡಲ ಭಾಜಪಾ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಮನಪಾ ಸದಸ್ಯರು, ಮುಖಂಡರು, ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು....
ಸುದ್ದಿ

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ನೂತನ ಧ್ವಜ ಮರ ಮೆರವಣಿಗೆ – ಕಹಳೆ ನ್ಯೂಸ್

ಮಂಗಳೂರು : ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ನೂತನ ಧ್ವಜ ಮರವು ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು, ಕಣತಿಯಿಂದ ನ.13 ರ ಬೆಳಿಗ್ಗೆ ಹೊರಟು ಜಯಪುರ, ಶೃಂಗೇರಿ, ಕೆರೆಕಾಡು, ಎಸ್. ಕೆ. ಬಾರ್ಡರ್, ಬಜಗೋಳಿ, ಕಾರ್ಕಳ, ಪಡುಬಿದ್ರೆ, ಮೂಲ್ಕಿ, ಹಳೆಯಂಗಡಿ, ಸುರತ್ಕಲ್, ಪಣಂಬೂರು, ಉರ್ವಾ ಸ್ಟೋರ್, ಲೇಡಿಹಿಲ್, ಮಂಗಳೂರು ರಥಬೀದಿ ಮಾರ್ಗವಾಗಿ ಬಂದು ಶ್ರೀ ಕ್ಷೇತ್ರಕ್ಕೆ ಸಂಜೆ ಪ್ರವೇಶಿಸಿತು. ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರ ದಿವ್ಯ...
ಪುತ್ತೂರು

ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ – ಕಹಳೆ ನ್ಯೂಸ್

ಪುತ್ತೂರು: ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ಸಮಾಜ ಸೇವಾ ಕಾರ್ಯಗಳಲ್ಲಿ ಒಂದಾಗಿರುವ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯಕ್ರಮ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನಡೆಯಿತು. ಕಾರ್ಮಿಕರು ಗುರುತಿನ ಚೀಟಿ ಮಾಡಿಸಲು ತಗಲುವ ಶುಲ್ಕ ವನ್ನು ಕಾರ್ಮಿಕರಿಂದ ಪಡೆಯದೆ ಟ್ರಸ್ಟ್ ನ ಪ್ರವರ್ತಕ ರಾದ ಅಶೋಕ್ ಕುಮಾರ್ ರೈ ಪಾವತಿಸಿ ಉಚಿತವಾಗಿ ಮಾಡಿಕೊಡಲಾಗುತ್ತದೆ. ಗುರುತಿನ ಚೀಟಿಯನ್ನು ವಿತರಿಸಿ ಮಾತನಾಡಿದ...
ಸುದ್ದಿ

ಮಂಗಳೂರು ಮೂಲದ ದಿಯಾ ಸಿಸ್ಟಮ್ಸ್ ಸ್ಥಾಪಕ ಡಾ.ರವಿಚಂದ್ರನ್ ನಿಧನ- ಕಹಳೆ ನ್ಯೂಸ್

ಮಂಗಳೂರು ಮೂಲದ ಸಾಫ್ಟ್‍ವೇರ್ ಕಂಪನಿ ದಿಯಾ ಸಿಸ್ಟಮ್ಸ್ ಪ್ರೈ. ಲಿಮಿಟೆಡ್ ಸ್ಥಾಪಕ ಡಾ.ರವಿಚಂದ್ರನ್ ಅವರು ನಿಧನರಾದರು. ಡಾ.ರವಿಚಂದ್ರನ್ ಕಳೆದ ಎರಡು ವರ್ಷದ ಹಿಂದೆ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಕೆಂಟಕಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ಮೃತಪಟ್ಟರು. ಮೃತರು ಪತ್ನಿ ಇಂದಿರಾ, ಮಗಳು ವಿದ್ಯಾ, ಮಗ ಹರಿಯನ್ನು ಅಗಲಿದ್ದಾರೆ....
ಸುದ್ದಿ

ಮಂಗಳೂರಿನ ಕಂಕನಾಡಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಮೃತದೇಹ ಪತ್ತೆ- ಕಹಳೆ ನ್ಯೂಸ್

ಮಂಗಳೂರು: ಕಂಕನಾಡಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 44 ವರ್ಷದ ವ್ಯಕ್ತಿಯೊಬ್ಬರ ಮೃತದೇಹ ನ.12ರಂದು ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಪ್ರಶಾಂತ್ ಕೊಟ್ಟಾರಿ ಎಂದು ಗುರುತಿಸಲಾಗಿದ್ದು, ಬರ್ಕೆ ಠಾಣೆ ವ್ಯಾಪ್ತಿಯ ಮಣ್ಣಗುಡ್ಡೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗೆ ಕಾರು ಅದೇ ಸ್ಥಳದಲ್ಲಿ ನಿಂತಿರುವುದರಿಂದ ಅನುಮಾನಗೊಂಡು ಸಾರ್ವಜನಿಕರು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು ಬಿದ್ದಿರುವುದು ಕಂಡುಬಂದಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಾವಿಗೆ ಕಾರಣ ಇನ್ನೂ ಖಚಿತವಾಗಿಲ್ಲ...
ಬೆಂಗಳೂರು

ಬೆಂಗಳೂರಿನಲ್ಲಿ ಭೀಕರ ರೈಲು ಅಪಘಾತ: ಅತಿವೇಗದಲ್ಲಿ ಬರುತ್ತಿದ್ದ ರೈಲಿಗೆ ಉರುಳಿ ಬಿದ್ದ ಬಂಡೆ ಕಲ್ಲು- ಕಹಳೆ ನ್ಯೂಸ್

ಬೆಂಗಳೂರು: ಅತಿವೇಗದಲ್ಲಿ ಬರುತ್ತಿದ್ದ ರೈಲಿಗೆ ಗುಡ್ಡದ ಬಂಡೆಗಳು ಬಿದ್ದಿದ್ದರಿಂದ ತೋಪುರು ಸಿವಾರಿ ನಡುವೆ ಭೀಕರ ರೈಲು ಅಪಘಾತ ಸಂಭವಿಸಿದೆ. ತೊಪ್ಪೂರು-ಶಿವಡಿ ನಡುವೆ ಪರ್ವತದಿಂದ ಬಂಡೆಯೊಂದು ಬಿದ್ದ ಪರಿಣಾಮವಾಗಿ ರೈಲಿನ ಐದು ಬೋಗಿಗಳು ಹಳಿತಪ್ಪಿದ್ದು, ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಶುಕ್ರವಾರ ಮುಂಜಾನೆ 3.50 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ರೈಲಿನಲ್ಲಿ ಒಟ್ಟು 2348 ಪ್ರಯಾಣಿಕರಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ....
ಸುದ್ದಿ

ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ಮೂಲರಪಟ್ಣ ಸೇತುವೆ ಇಂದಿನಿಂದ ಸಂಚಾರಕ್ಕೆ ಮುಕ್ತ- ಕಹಳೆ ನ್ಯೂಸ್

ಬಂಟ್ವಾಳ: ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಮುರಿದು ಹೋಗಿದ್ದ ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳನ್ನು ಸಂಪರ್ಕಿಸುವ ಮೂಲರಪಟ್ಣ ಸೇತುವೆಯ ಮರು ನಿರ್ಮಾಣ ಮಾಡಲಾಗಿದ್ದು, ನ.12 ರಂದು ನೂತನ ಸೇತುವೆಯನ್ನು ಊರಿನ ಹಿರಿಯರು ತೆಂಗಿನಕಾಯಿ ಒಡೆಯುವ ಮೂಲಕ ಲೋಕಾರ್ಪಣೆ ಮಾಡಿ ಸಂಚಾರಕ್ಕೆ ಮುಕ್ತಗೊಳಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಸೇತುವೆಯಲ್ಲಿ ಊರಿನ ಪ್ರಮುಖರ ಜತೆ ಸಾಗಿ ಪರಿಶೀಲಿಸಿದರು....
1 49 50 51 52 53 126
Page 51 of 126