Wednesday, November 27, 2024

archiveಕಹಳೆ ನ್ಯೂಸ್

ಪುತ್ತೂರು

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಪಾಕಿಸ್ಥಾನ ಹಾಗೂ ಬಾಂಗ್ಲಾ ವಿರುದ್ಧ ಪ್ರತಿಭಟನೆ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‍ನಲ್ಲಿ ಪಾಕಿಸ್ಥಾನ ಹಾಗೂ ಬಾಂಗ್ಲಾ ವಿರುದ್ಧ ಪ್ರತಿಭಟನೆ ನಡೆಯಿತು. ಬಾಂಗ್ಲಾದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ಭಯೋತ್ಪಾದಕ ದಾಳಿ ಹಾಗೂ ಕಾಶ್ಮೀರದಲ್ಲಿ ನಡೆಯುತ್ತಿರುವ ಪಾಕಿಸ್ಥಾನ ಪ್ರೇರಿತ ದಾಳಿಗಳ ವಿರುದ್ಧ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಪ್ರತಿಭಟಿಸಿದರು. ಎರಡೂ ರಾಷ್ಟ್ರಗಳ ಧ್ವಜವನ್ನು ಉರಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಕಾರ್ತಿಕ್ ಕೆದಿಮಾರು ಮಾತನಾಡಿ...
ಪುತ್ತೂರು

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆ- ಕಹಳೆ ನ್ಯೂಸ್

ಪುತ್ತೂರು: ಆಶ್ವೀಜ ಮಾಸ ಶುಕ್ಲಪಕ್ಷದ ಹುಣ್ಣಿಮೆಯ ದಿನ ಆಚರಿಸುವ ವಾಲ್ಮೀಕಿ ಜಯಂತಿಯು ಎಲ್ಲರ ಮನ ಪರಿವರ್ತನೆಗೆ ಕಾರಣವಾಗಬೇಕು. ಕ್ರೌರ್ಯವೇ ಮಾನವನ ಸ್ವಭಾವ ಎಂದು ಭಾವಿಸುವ ಈ ಕಾಲ ಘಟ್ಟದಲ್ಲಿ ವಾಲ್ಮೀಕಿಯ ಆದರ್ಶಗಳು ಅನುಕರಣಿಯ. ಉತ್ತಮ ಜೀವನ ನಡೆಸಲು ಕ್ರೌರ್ಯವೇ ಸಾಧನ ಅಲ್ಲ ಎಂದು ತನ್ನ ಜೀವನದ ಮೂಲಕ ಸಾಧಿ ತೋರಿಸಿದ ಮಹಾನ್ ಕವಿ ವಾಲ್ಮೀಕಿಯ ಜೀವಾನಾದರ್ಶಗಳನ್ನು ಅಳವಡಿಸಿಕೊಂಡು ಇಂದಿನ ಸಮಾಜದ ಪರಿವರ್ತನೆಗೆ ನಾವು ಕಾರಣೀಭೂತರಾಗಬೇಕಿದೆ ಎಂದು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ(ಸಿಬಿಎಸ್‍ಇ)ದ...
ಸುಳ್ಯ

ಬೆಳ್ಳಾರೆ ಮಸೀದಿ ಆಡಳಿತ ಮಂಡಳಿ ಚುನಾವಣೆ ವಿಚಾರದಲ್ಲಿ ತರಕಾರು : ಇತ್ತಂಡಗಳ ನಡುವೆ ಹೊಡೆದಾಟ – ಕಹಳೆ ನ್ಯೂಸ್

ಬೆಳ್ಳಾರೆ :  ಮಸೀದಿಯಲ್ಲಿ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಫಾರ್ಮ್ ಕೊಡುವ ವಿಷಯದಲ್ಲಿ ತಕರಾರು ಉಂಟಾಗಿ, ಎರಡು ತಂಡಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಆಸಿರ್, ಹಾರಿಸ್, ಹಮೀದ್, ಮುನೀರ್, ಹೈದರಾಲಿ ಮತ್ತು ಮಹಮ್ಮದ್ ಅಜರುದ್ದೀನ್, ಜಮಾಲುದ್ದೀನ್ ಕೆ.ಎಸ್., ಅಬ್ದುಲ್ ಜಮಾಲ್ ನಡುವೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಹೊಡೆದಾಟದಲ್ಲಿ ಕೆಲವರಿಗೆ ಗಾಯವಾಗಿದ್ದು, ಗಾಯಾಳುಗಳ ಪೈಕಿ ಒಂದು ತಂಡದ ಅಜರುದ್ದೀನ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇನ್ನೊಂದು ತಂಡದ ಹೈದರಾಲಿ...
ಬಂಟ್ವಾಳ

ಬಂಟ್ವಾಳ : ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಟಿಪ್ಪರ್ ಚಲಾಯಿಸಲು ಯತ್ನಿಸಿದ ಇಬ್ಬರ ಬಂಧನ- ಕಹಳೆ ನ್ಯೂಸ್

ಬಂಟ್ವಾಳ : ಟಿಪ್ಪರ್ ಚಾಲಕನೊಬ್ಬ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಟಿಪ್ಪರ್ ಚಲಾಯಿಸಲು ಯತ್ನಿಸಿದ ಘಟನೆ ಅ.19ರ ರಾತ್ರಿ ಫರಂಗಿಪೇಟೆ ಹೊರ ಠಾಣೆ ಚೆಕ್ ಪೊಸ್ಟ್ ಬಳಿ ನಡೆದಿದೆ. ಹಲ್ಲೆ ನಡೆಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಅಬ್ದುಲ್ ಐಸಾಕ್ ಮತ್ತು ಮೊಯ್ದೀನ್ ಅಝರ್ ಎಂದು ಗುರುತಿಸಲಾಗಿದೆ. ಕಾನ್ಸ್ಟೇಬಲ್ ಶೇಖರ್ ಮತ್ತು ರಾಧಾಕೃಷ್ಣ ಅವರು ಫರಂಗಿಪೇಟೆ ಹೊರ ಠಾಣೆ ಚೆಕ್ ಪೊಸ್ಟ್ ಕರ್ತವ್ಯದಲ್ಲಿದ್ದರು. ಮುಂಜಾನೆ 2.30...
ಪುತ್ತೂರುಸಂತಾಪ

ಇಹಲೋಕ ತ್ಯಜಿಸಿದ 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ನ ಪ್ರಥಮಾಧ್ಯಕ್ಷ ಅಲಿಮಾರ ವಿಶ್ವನಾಥ ರೈ- ಕಹಳೆ ನ್ಯೂಸ್

ಪುತ್ತೂರು : 34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್‍ನ ಪ್ರಥಮ ಅಧ್ಯಕ್ಷ, ಕೋಡಿಂಬಾಡಿಯ ಮಾಜಿ ಮಂಡಲ ಪಂಚಾಯತ್ ಸದಸ್ಯ ಅಲಿಮಾರ ವಿಶ್ವನಾಥ ರೈ ಅ.21ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅಲಿಮಾರ ಕರಿಯಪ್ಪ ರೈ-ಅಬ್ಬಕ್ಕೆ ದಂಪತಿಯ ಮಗ ಅಲಿಮಾರ ವಿಶ್ವನಾಥ ರೈಯವರು ಧಾರ್ಮಿಕ, ರಾಜಕೀಯ, ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಊರಿನ ಅಭಿವೃದ್ಧಿಗೆ ಶ್ರಮಿಸಿದ್ದವರು. ಕೋಡಿಂಬಾಡಿ ಮಂಡಲ ಪಂಚಾಯತ್ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ವಿಶ್ವನಾಥ ರೈ ಯವರು 34ನೇ...
ಪುತ್ತೂರು

ಅಕ್ಷಯ ಕಾಲೇಜಿನಲ್ಲಿ ಶಿಕ್ಷಕ ಹಾಗೂ ಹೆತ್ತವರ ಸಂಘದ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಅವರ ಹೆತ್ತವರಿಗೆ ಮಾಹಿತಿ ಕಾರ್ಯಾಗಾರ- ಕಹಳೆ ನ್ಯೂಸ್

ಪುತ್ತೂರು: ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಅ.21ರಂದು ಶಿಕ್ಷಕ ಹಾಗೂ ಹೆತ್ತವರ ಸಂಘದ ವತಿಯಿಂದ ನೂತನವಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಹಾಗೂ ಅವರ ಹೆತ್ತವರಿಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು, ದೀಪ ಪ್ರಜ್ವಲಿಸಿ, ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನಾಡುತ್ತಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚಟುವಟಿಕೆ, ನಿಯಮಾವಳಿಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು....
ಸುದ್ದಿ

100 ಕೋಟಿಗೂ ಅಧಿಕ ಲಸಿಕಾ ಡೋಸ್ ಯಶಸ್ವು – ಮಂಗಳೂರಿನಲ್ಲಿ ಅರೋಗ್ಯ ಕಾರ್ಯಕರ್ತರಿಗೆ ಆಭಿನಂದನಾ ಕಾರ್ಯಕ್ರಮ – ಕಹಳೆ ನ್ಯೂಸ್

ಲಸಿಕಾ ಅಭಿಯಾನದ ಮೂಲಕ 100 ಕೋಟಿಗೂ ಅಧಿಕ ಲಸಿಕಾ ಡೋಸ್ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ ಅರೋಗ್ಯ ಕಾರ್ಯಕರ್ತರನ್ನು ಆಭಿನಂದಿಸುವ ಕಾರ್ಯಕ್ರಮ, ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷರಾದ ವಿಜಯ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ ರವರ ಉಪಸ್ಥಿತಿಯಲ್ಲಿ, ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಆಯುμï ವಿಭಾಗದ ಲಸಿಕಾ ಕೇಂದ್ರದಲ್ಲಿ ಜರುಗಿತು. ಕಾರ್ಯಕರ್ತರಿಗೆ ಹೂಗುಚ್ಚಗಳನ್ನು...
ಅಂಕಣ

ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯನಕ್ಕೆ 50 ದಿನದ ಸಂಭ್ರಮ- ಕಹಳೆ ನ್ಯೂಸ್

ಸನಾತನ ನಿರ್ಮಿತ ಗ್ರಂಥಗಳೆಂದರೆ ಈಶ್ವರೀ ಚೈತನ್ಯ, ಹಾಗೆಯೇ ಆನಂದ ಮತ್ತು ಶಾಂತಿಯ ಅನುಭೂತಿಯನ್ನು ನೀಡುವ ಸಾಹಿತ್ಯವಾಗಿವೆ. ಸನಾತನದ ಗ್ರಂಥಗಳಲ್ಲಿನ ದಿವ್ಯ ಜ್ಞಾನವನ್ನು ಸಮಾಜದ ವರೆಗೆ ತಲುಪಿಸಲು ಸನಾತನದ ವತಿಯಿಂದ ರಾಜ್ಯದಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನವನ್ನು ಹಮ್ಮಿಕೊಂಡಿದೆ. ಸನಾತನದ ಗ್ರಂಥಗಳು ಸಮಾಜದ ಪ್ರತಿಯೊಬ್ಬ ಜಿಜ್ಞಾಸು, ಮುಮುಕ್ಷು ಮುಂತಾದವರ ವರೆಗೆ ತಲುಪಿ ಅವರಿಗೂ ಈ ಜ್ಞಾನಶಕ್ತಿಯ ಲಾಭವಾಗಬೇಕೆಂಬುದು ಈ ಅಭಿಯಾನದ ಉದ್ದೇಶವಾಗಿದೆ. ಜಗದ್ಗುರು ಭಗವಾನ್ ಶ್ರೀಕೃಷ್ಣ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು...
1 65 66 67 68 69 126
Page 67 of 126