ಕೇರಳದಲ್ಲಿ ಮತ್ತೆ ಮಹಾ ಮಳೆ ಸುರಿಯುವ ಸಾಧ್ಯತೆ : – ಕಹಳೆ ನ್ಯೂಸ್
ಕೊಚ್ಚಿ: ಭಾರಿ ಮಳೆ, ಪ್ರವಾಹದಿಂದ ಜರ್ಜರಿತಗೊಂಡಿರುವ ಕೇರಳ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಮತ್ತೆ ಮಹಾ ಮಳೆ ಸುರಿಯುವ ಮುನ್ಸೂಚನೆ ನೀಡಿದೆ . ಕೇರಳದ ಪಟ್ಟಣಂತಿಟ್ಟ, ಇಡುಕ್ಕಿ, ವಯನಾಡು ಜಿಲ್ಲೆಗಳಲ್ಲಿ ಸೆ.25ರಂದು ಮತ್ತು ಪಾಲಕ್ಕಾಡ್, ಇಡುಕ್ಕಿ, ತ್ರಿಶೂರ್ ಮತ್ತು ವೈಯನಾಡು ಜಿಲ್ಲೆಗಳಲ್ಲಿ ಸೆ. 26ರಂದು ಭಾರಿ ಪ್ರಮಾಣದ ಮಳೆ ಸುರಿಯುವ ಸಾಧ್ಯತೆಗಳಿವೆ. ಮಳೆ ಪ್ರಮಾಣ 64.4 ಮಿಲಿ ಮೀಟರ್ಗಳಿಂದ 124.4 ಮಿಲಿಮೀಟರ್ ಆಗಿರುವ ಸಾಧ್ಯತೆಗಳಿವೆ ಎಂದೂ ಹವಾಮಾನ ಇಲಾಖೆ ತಿಳಿಸಿರುವುದಾಗಿ ಮುಖ್ಯಮಂತ್ರಿಗಳ ಕಚೇರಿ...