Monday, January 20, 2025

archiveಕಹಳೆ ನ್ಯೂಸ್

ಸುದ್ದಿ

ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ- ಕಹಳೆ ನ್ಯೂಸ್

ಬೆಳ್ತಂಗಡಿ: ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದು,  ಆಗಸ್ಟ್ 18ರ, ಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕನ್ನಡ ಮತ್ತು...
ಪುತ್ತೂರು

ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಪರಿವಾರ ಸಂಘಟನೆ ವತಿಯಿಂದ ಮನವಿ-ಕಹಳೆ ನ್ಯೂಸ್

ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 15ರ ಭಾನುವಾರ ಪುತ್ತೂರು ತಾಲೂಕಿನ ಕಬಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ರಥದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಂತಹುದೊಂದು ರಥಯಾತ್ರೆಯು ನಮ್ಮ ದೇಶಾಭಿಮಾನದ ಸಂಕೇತ ಆಗಿತ್ತು .ಜನತೆ ಉತ್ಸಾಹದಿಂದ ಪಾಲ್ಗೊಂಡು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗೆ ಸೇರಿದ ರಾಷ್ಟ್ರದ್ರೋಹಿಗಳು ಸ್ವಾತಂತ್ರ ರಥಕ್ಕೆ ಅಡ್ಡಿ ತಂದುದಲ್ಲದೆ, ಸಾಮಾಜಿಕ ಅಶಾಂತಿಗೂ ಕಾರಣರಾಗಿದ್ದಾರೆ. ಸ್ವಾತಂತ್ರ್ಯ ದಿನದಂದು ನಡೆದ ಈ ಘಟನೆಯು ತೀರಾ ಖಂಡನೀಯವಾಗಿದೆ. ಈ...
ಸುದ್ದಿ

ಶಾಸಕ ಹರೀಶ್ ಪೂಂಜಾರವರ ಹುಟ್ಟುಹಬ್ಬದ ಪ್ರಯುಕ್ತ ಕಣಿಯೂರು ಗ್ರಾಮದ ಶೋಭಾ ನಲಿಕೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನಸಹಾಯ-ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾರವರ ಹುಟ್ಟುಹಬ್ಬದ ಪ್ರಯುಕ್ತ ಕಣಿಯೂರು ಗ್ರಾಮದ ಶೋಭಾ ನಲಿಕೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಗೋಪಾಲ ಗೌಡ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಪಂಚಾಯತ್ ಸದಸ್ಯರಾದ ಅಮಿತ್ ಕುಮಾರ್,ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ, ಅವಿನಾಶ್ ರಾವ್ ಹಾಗೂ ಶರತ್ ಗೌಡ ಉಪಸ್ಥಿತರಿದ್ದರು.  ...
ಸುದ್ದಿ

ಜಲ ಜೀವನ್ ಮಿಷನ್ ಯೋಜನೆ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ೨೦ ಲಕ್ಷ ಅನುದಾನದಲ್ಲಿ ಮೇಗಿನಮನೆ ರಸ್ತೆಯ ಗುದ್ದಲಿ ಪೂಜೆ-ಕಹಳೆ ನ್ಯೂಸ್

ದ.ಕ ಜಿಲ್ಲಾ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು, ತಾಲೂಕು ಪಂಚಾಯತ್ ಮಂಗಳೂರು ಮತ್ತು ಮುತ್ತೂರು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ೧ ಕೋಟಿ ೭೨ ಲಕ್ಷ ಯೋಜನೆಯ ಜಲ ಜೀವನ್ ಮಿಷನ್ ಯೋಜನೆಯ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ೨೦ ಲಕ್ಷ ಅನುದಾನದ ಮೇಗಿನಮನೆ ರಸ್ತೆಯ ಗುದ್ದಲಿ ಪೂಜೆಯನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಅವರು ನೆರವೇರಿಸಿದರು. ಶಾಸಕರಾದ ಭರತ್ ಶೆಟ್ಟಿಯವರು...
ಉಡುಪಿ

ಖಾಸಗಿ ಬಸ್‌ಗಳಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ದರ ರಿಯಾಯಿತಿಯನ್ನು ನೀಡುವಂತೆ ಉಡುಪಿ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಿಂದ ಮನವಿ-ಕಹಳೆ ನ್ಯೂಸ್

ಉಡುಪಿ: ಖಾಸಗಿ ಬಸ್ ಗಳಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅವಕಾಶವನ್ನು ಈ ಹಿಂದೆಯಿAದಲೂ ನೀಡುತ್ತಾ ಬಂದಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ದರವನ್ನು ಸ್ಥಗಿತಗೊಳಿಸಲಾಗಿದೆ. ಈ ವಿಷಯವಾಗಿ ಕರ್ನಾಟಕ ರಾಜ್ಯ ಖಾಸಗಿ ಬಸ್ಸು ಮಾಲೀಕರ ಸಂಘದ ಅಧ್ಯಕ್ಷರಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್ ಅವರನ್ನು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಭೇಟಿಯಾಗಿ ಮನವಿ ಸಲ್ಲಿಸಿದರು. ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಅಧ್ಯಕ್ಷರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಗಸ್ಟ್ ೩೦ರ ವರೆಗೆ ಕಾಲೇಜು...
ಬಂಟ್ವಾಳ

ಬಂಟ್ವಾಳ ತಾಲ್ಲೂಕಿನ ಕೊಯಿಲದಲ್ಲಿ ನಿವೃತ್ತ ಅಂಚೆ ಪಾಲಕಿಗೆ ನಾಗರಿಕರಿಂದ ಸನ್ಮಾನ-ಕಹಳೆ ನ್ಯೂಸ್

ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮೀಣ ಅಂಚೆ ಕಚೇರಿಯಲ್ಲಿ ಕಳೆದ 35 ವರ್ಷ ದುಡಿದು ನಿವೃತ್ತಿಗೊಂಡ ಅಂಚೆ ಪಾಲಕಿ ದಯಾವತಿ ವಿ. ಶೆಟ್ಟಿಯವರನ್ನು ಅಂಚೆ ಇಲಾಖೆ ಸಿಬ್ಬಂದಿಗಳು ಮತ್ತು ಸ್ಥಳೀಯ ನಾಗರಿಕರು ಮಾವಂತೂರು ಶ್ರೀ ಮಹಾಗಣಪತಿ ಸಭಾಂಗಣದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಎಂ. ಪದ್ಮರಾಜ ಬಲ್ಲಾಳ್ ಮಾತನಾಡಿ, ಗ್ರಾಮೀಣ ಜನತೆಗೆ ಬ್ಯಾಂಕಿ0ಗ್ ಮಾದರಿಯಲ್ಲಿ ಆರ್ಥಿಕ ವ್ಯವಹಾರ ನಡೆಸಲು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅಂಚೆ ಪಾಲಕರು ಸಹಿತ ಅಂಚೆ...
ಪುತ್ತೂರು

ಕಬಕ ಗ್ರಾಮದಲ್ಲಿ ಸ್ವಾತಂತ್ರ್ಯ ರಥಕ್ಕೆ‌ ತಡೆ ಒಡ್ಡಿ, ದೇಶದ್ರೋಹಿ ಕೃತ್ಯ ಮೆರೆದ SDPI ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ABVP ಪುತ್ತೂರು ನಗರ ಇದರ ವತಿಯಿಂದ ಪುತ್ತೂರು ತಹಶಿಲ್ದಾರರಿಗೆ ಮನವಿ- ಕಹಳೆ ನ್ಯೂಸ್

ಕಬಕ : ಸ್ವಾತಂತ್ರ್ಯ ರಥಕ್ಕೆ‌ ತಡೆ ಒಡ್ಡಿ, ದೇಶದ್ರೋಹಿ ಕೃತ್ಯ ಮೆರೆದ SDPI ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ನಗರ ಇದರ ವತಿಯಿಂದ ಪುತ್ತೂರಿನ ಮಾನ್ಯ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಪ್ರಮುಖರಾದ ಸುಬ್ರಹ್ಮಣ್ಯ ಆರ್ ಎಂ, ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ ಹಾಗೂ ಪ್ರಮುಖರಾದ ಸಾತ್ವಿಕ್ , ರಂಜಿತ್ , ಸುಕಿತ್ , ಆಕಾಶ್ ,...
ಬೆಳ್ತಂಗಡಿ

ಬಂದಾರು ಗ್ರಾಮ ಪಂಚಾಯತ್‍ನ ಮೊಗ್ರು ಬೂತ್-1 ರ ಗ್ರಾಮಸ್ಥರಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪಿಂಚಣಿ ಅದಾಲತ್ ಕಾರ್ಯಕ್ರಮ-ಕಹಳೆ ನ್ಯೂಸ್

ಬಂದಾರು ಗ್ರಾಮ ಪಂಚಾಯತ್‍ನ ಮೊಗ್ರು ಬೂತ್-1 ರ ಗ್ರಾಮಸ್ಥರಿಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಜನಪರ ಕಾರ್ಯಕ್ರಮಗಳಲ್ಲಿ ಒಂದಾದ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಧ್ಯಾ ಸುರಕ್ಷಾ ವಿಧವಾ ವೇತನ ಮನಸ್ವಿ ಯೋಜನೆ ಮುಂತಾದ ಪಿಂಚಣಿ ಯೋಜನೆಗಳ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಅದಾಲತ್ ಕಾರ್ಯಾಗಾರ ಮುಗೇರಡ್ಕದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ. ಕೆ.ಗೌಡ, ಉಪಾಧ್ಯಕ್ಷರಾದ ಗಂಗಾಧರ, ಸದಸ್ಯರಾದ ಶ್ರೀ ಬಾಲಕೃಷ್ಣ ಗೌಡ,...
1 109 110 111 112 113 126
Page 111 of 126