Friday, November 22, 2024

archiveAmit shah

ಸುದ್ದಿ

ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಶಾ ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಪಕ್ಷ ಬಲವರ್ಧನ ಚರ್ಚೆ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿ ಮಾಸ್ಟರ್ ಮೈಂಡ್ ಮಂಗಳೂರಿಗೆ ಆಗಮಿಸಿದ್ದು ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಅಮಿತ್ ಶಾ ಇವೆಲ್ಲ ಬಗೆಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. ರಾಜ್ಯ ಮಾತ್ರವಲ್ಲದೆ, ದೇಶದೆಲ್ಲಡೆ ಈ ಬೈಠಕ್ ವಿಶೇಷವಾಗಿದ್ದು 2019ರ ಚುನಾವಣೆಗೆ ದಕ್ಷಿಣ ಭಾರತದಲ್ಲಿ ಕಮಲ ಪಕ್ಷವನ್ನು ಬಲವರ್ಧನೆ ಮಾಡುವುದರ ಬಗ್ಗೆ ಚರ್ಚೆಗಳು ನಡೆಯಿತು. ದಕ್ಷಿಣ ಭಾರತದಲ್ಲಿ ಅಂದ್ರೆ ಪ್ರಮುಖವಾಗಿ ಕೇರಳದಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಶಬರಿಮಲೆ ವಿಚಾರವನ್ನು ಗಟ್ಟಿಯಾಗಿ ಹಿಡಿಕೊಂಡರೆ ಪಕ್ಷಚರ್ಧನೆ ಸಾಧ್ಯ ಎಂಬ ಮಾತುಗಳು ಕೇಳಿಬಂದವು. ಹಾಗೇ...
ಸುದ್ದಿ

ಹೊಸ ವಿವಾದಕ್ಕೆ ಕಾರಣವಾದ ಅಮಿತ್ ಶಾ ಹೇಳಿಕೆ – ಕಹಳೆ ನ್ಯೂಸ್

ದೆಹಲಿ: ಶಬರಿಮಲೆ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡುವ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಭಕ್ತರಿಂದ ನಡೆಯುತ್ತಿರುವ ಪ್ರತಿಭಟನೆ ಪರವಾಗಿ ಬಿಜೆಪಿ ಬಂಡೆಕಲ್ಲಿನಂತೆ ನಿಲ್ಲಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. "ದೇಶದ ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಬಗ್ಗೆ ಆರೆಸ್ಸೆಸ್-ಬಿಜೆಪಿಗೆ ಗೌರವ ಇಲ್ಲ ಎನ್ನುವುದನ್ನು ಇದು ಸಾಬೀತುಪಡಿಸಿದೆ" ಎಂದು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ....
ಸುದ್ದಿ

ಬಿಜೆಪಿ ಬಂಡೆಯಂತೆ ಅಯ್ಯಪ್ಪ ಭಕ್ತರೊಂದಿಗೆ ನಿಂತಿದೆ ಎಂದ ಅಮಿತ್ ಶಾ – ಕಹಳೆ ನ್ಯೂಸ್

ನವದೆಹಲಿ: ಬಿಜೆಪಿ ಬಂಡೆಯಂತೆ ಅಯ್ಯಪ್ಪ ಭಕ್ತರೊಂದಿಗೆ ನಿಂತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ. ಕೇರಳದ ಕಣ್ಮೂರು ಜಿಲ್ಲೆಯ ತಾಳಿಕ್ಕಾವು'ನಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಕಚೇರಿ ಉದ್ಘಾಟಿಸಿದ ಬಳಿಕ ಮಾತನಾಡಿರುವ ಅವರು, ಶಬರಿಮಲೆ ಮಹಿಳಾ ಪ್ರವೇಶದ ವಿರುದ್ಧ ಪ್ರತಿಭಟಿಸಿದ್ದ 2000 ಬಿಜೆಪಿ ಹಾಗೂ ಆರ್'ಎಸ್ಎಸ್ ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೇರಳ ರಾಜ್ಯದಲ್ಲಿಂದು ಧಾರ್ಮಿಕ ನಂಬಿಕೆಗಳು ಹಾಗೂ ರಾಜ್ಯ ಸರ್ಕಾರದ ಕ್ರೌರ್ಯಗಳ ನಡುವೆ ಹೋರಾಟ ನಡೆಯುತ್ತಿದೆ....
ಸುದ್ದಿ

70 ರಿಂದ 80 ಮಂದಿಯ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಬೇಡ: ಆರ್‌ಎಸ್‌ಎಸ್ ಬಿಜೆಪಿಗೆ ಸೂಚನೆ – ಕಹಳೆ ನ್ಯೂಸ್

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸದ್ಯ ಶಾಸಕರಾಗಿರುವ 70 ರಿಂದ 80 ಮಂದಿಯ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಬೇಡ ಅಂತ ಆರ್‌ಎಸ್‌ಎಸ್ ಬಿಜೆಪಿಗೆ ಸೂಚಿಸಿದೆ. ಈ ಮಾಹಿತಿಯನ್ನು ಪಕ್ಷದ ನಾಯಕರೇ ಹೊರಗೆಡವಿದ್ದಾರೆ. ಹಲವು ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾದಂತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಎಲ್ಲಾ ಕ್ಷೇತ್ರಗಳ ಶಾಸಕರ ಸಾಧನೆಯ ಬಗ್ಗೆ ವರದಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್ ಸದ್ಯ ಬುದ್ನಿ ಕ್ಷೇತ್ರದ ಶಾಸಕರಾಗಿದ್ದು, ಅವರನ್ನು ಕೂಡ ಬಿಜೆಪಿ...
ಸುದ್ದಿ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾರಿಂದ ಧೋನಿ ಭೇಟಿ! – ಕಹಳೆ ನ್ಯೂಸ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಿಂದಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಮಿತ್ ಷಾ ಹಾಗೂ ಧೋನಿಯವರ ಭೇಟಿಯು ಹಲವು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 2019ರ ಲೋಕಸಭಾ ಚುನಾವಣೆಗೆ ಧೋನಿಯವರನ್ನು ರಾಜಕೀಯಕ್ಕೆ ಸೆಳೆಯಲು ಅಮಿತ್ ಷಾ ತಂತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಅಮಿತ್ ಷಾ ಕೈಗೊಂಡಿರುವ ಸಂಪರ್ಕ್ ಫಾರ್ ಸಮರ್ಥನ್ ಪ್ರಚಾರದಡಿ ದೇಶದ...
ರಾಜಕೀಯ

Big Breaking : ಚಾಣಕ್ಯನ ತಂತ್ರಗಾರಿಕೆಗೆ ನಲುಗಿದ ಕಾಂಗ್ರೆಸ್ ; ಹೈದರಾಬಾದ್ ಹೋಟೆಲ್ ನಿಂದ ಕೈ ಶಾಸಕ ನಾಪತ್ತೆ..! – ಕಹಳೆ ನ್ಯೂಸ್

ರಾಜ್ಯ ರಾಜಕಾರಣದಲ್ಲೇ ಇಂತಹ ಒಂದು ಸನ್ನಿವೇಶ ಎದುರಾದ ಉದಾಹರಣೆ ಇರಲಿಕ್ಕಿಲ್ಲ. ಯಾಕೆಂದರೆ ಬಹುಮತ ಸಾಧಿಸಲು ಸಾಧ್ಯವಾಗದೇ ಇದ್ದರೂ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸದ್ಯ ತನ್ನ ಮುಖ್ಯಮಂತ್ರಿಯನ್ನು ಗದ್ದುಗೆಗೆ ಏರಿಸಿದ್ದು, ಸರಕಾರ ರಚನೆ ಮಾಡಲು ತಯಾರಿ ನಡೆಸಿದೆ. ಆದರೆ ಇತ್ತ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ತಾವೇ ಸರಕಾರ ರಚಿಸುತ್ತೇವೆ ಎಂದು ಪಟ್ಟುಹಿಡಿದು ಕೂತಿದೆ.‌ ರಾಜ್ಯ ರಾಜಭಾರ ಯಾರ ಕೈಗೆ ಸಿಗುತ್ತದೋ‌ ಗೊತ್ತಿಲ್ಲ, ಆದರೆ ಬಿಜೆಪಿ ಹೂಡಿರುವ...
ರಾಜಕೀಯ

ಇಂದು ಮಹದಾಯಿ ಪ್ರದೇಶದಲ್ಲಿ ಶಾ ಪ್ರವಾಸ – ಕಹಳೆ ನ್ಯೂಸ್

ಹುಬ್ಬಳ್ಳಿ : ವಿಧಾನಸಭಾ ಚುನಾವಣೆ ಪ್ರಚಾರಾರ್ಥ ಎರಡು ದಿನಗಳ ಉತ್ತರ ಕರ್ನಾಟಕ ಪ್ರವಾಸಕ್ಕಾಗಿ ಬುಧವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿರುವ ಬಿಜೆಪಿ ಅಧ್ಯಕ್ಷ ಗುರುವಾರದಂದು ‘ಮಹದಾಯಿ ಹೋರಾಟ’ದ ಕೇಂದ್ರ ಸ್ಥಳಗಳಾದ ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಹುಬ್ಬಳ್ಳಿಯ ಸಿದ್ಧಾರೂಢ ಮಠ ಸೇರಿದಂತೆ ಹಲವು ದೇವಾಲಯಗಳಿಗೆ ಹಾಗೂ ರಾಷ್ಟ್ರೀಯ ಸ್ಮಾರಕಗಳಿಗೆ ಭೇಟಿ ನೀಡಲಿದ್ದು, ಪಕ್ಷದ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಗುರುವಾರ ಬೆಳಗ್ಗೆ 9.40ಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಲಿದ್ದಾರೆ, 10.30ಕ್ಕೆ...
ರಾಜಕೀಯ

ಗೋವುಗಳ ಬಗ್ಗೆ ಬಿಜೆಪಿಯವರಿಗೆ ನಿಜವಾದ ಕಾಳಜಿ ಇದ್ದರೆ ಮೊದಲು ಗೋಮಾಂಸ ರಫ್ತನ್ನು ನಿಷೇಧಿಸಲಿ ರಾಮಲಿಂಗಾರೆಡ್ಡಿ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿರುವುದು ಚುನಾವಣಾ ಗಿಮಿಕ್ ಎಂದು ಹರಿಹಾಯ್ದಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ಗೋವುಗಳ ಬಗ್ಗೆ ಬಿಜೆಪಿಯವರಿಗೆ ನಿಜವಾದ ಕಾಳಜಿ ಇದ್ದರೆ ಮೊದಲು ಗೋಮಾಂಸ ರಫ್ತನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತ ಗೋಮಾಂಸ ರಫ್ತಿನಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದೆ. ಗೋಮಾಂಸ ರಫ್ತಿನಿಂದ...
1 2
Page 1 of 2