ಭಾರತದ ಆತ್ಮ ಇರುವುದು ಹಳ್ಳಿಯಲ್ಲಿ, ಹಳ್ಳಿಯಲ್ಲಿ ಹಣದ ಮೇಲೆ ಜೀವನ ಅವಲಂಬಿತವಾಗಿಲ್ಲ – ಕಹಳೆ ನ್ಯೂಸ್
ಪುತ್ತೂರು: ಹಳ್ಳಿ ಇಲ್ಲದೆ ಭಾರತದ ಕಲ್ಪನೆ ಸಾಧ್ಯವಿಲ್ಲ. ಸ್ವಚ್ಛ ಮನಸ್ಸಿನ, ಸುಂದರ ಮನೆಯ , ಸ್ವಚ್ಛ ಭಾರತ ಹಳ್ಳಿಯಲ್ಲಿದೆ. ಹೀಗಾಗಿ ಭಾರತದ ಆತ್ಮವೇ ಗ್ರಾಮ. ಈ ಗ್ರಾಮದ ಹೊರತಾದ ಭಾರತದ ನೋಡಲು ಸಾಧ್ಯವೇ ಇಲ್ಲ ಎಂದು ಭಾರತ ಪರಿಕ್ರಮ ಯಾತ್ರೆ ನಡೆಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸೀತಾರಾಮ ಕೆದಿಲಾಯ ಹೇಳಿದರು. ಅವರು ಭಾನುವಾರ "ಬಹುವಚನಂ"ನ ಪದ್ಮಿನೀ ಸಭಾಂಗಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳ್ಳಿ ಇಲ್ಲದೆ ಭಾರತ...