ಗಡಿನಾಡ ಹುಡುಗಿ ಕಲಾ ಬೆಡಗಿ ; ಅನುಪಮ ಪ್ರತಿಭೆ ಅನುಪಮಾ ಪಿ. ಜಿ. – ಕಹಳೆ ನ್ಯೂಸ್
ಗಡಿನಾಡಿನ ಕಾಟುಕುಕ್ಕೆಯ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಬೆಳೆದ ಕಲಾ ಬೆಡಗಿ ಅನುಪಮಾಳು ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ.ಭಟ್ ಹಾಗು ಜಯಲಕ್ಷ್ಮಿ ಅವರ ಸುಪುತ್ರಿಯಾಗಿರುವ ಈಕೆ ಈಗ ಬೆಂಗಳೂರು ನಿವಾಸಿ. ವಂಶವಾಹಿನಿಯಾಗಿ ಬಂದ ಕಲೆಯ ಪರಿಮಳದ ಜೊತೆಗೆ ತನ್ನ ಸಾಧನೆಯ ಮೆರುಗನ್ನು ಬೆರೆಸಿ "ಕುಂಚದ ಬೆಡಗಿ" ಎಂದು ಗುರುತಿಸಲ್ಪಟ್ಟ ಕಲಾ ಮಾತೆಯ ಮಗಳು. ಬೆಂಗಳೂರಿನ ಬಿ.ಟಿ.ಎಮ್ ಲೇ ಔಟ್ನ ಸಮೀಪದ ಅನುಗ್ರಹ ಲೇಔಟ್ನ ಮನೆಯೊಂದರಲ್ಲಿ ವಾಸಿಸುತ್ತಿರುವ ಇವರ ಮನೆಯೇ ಒಂದು...