ಸತ್ತ ತಂದೆಯನ್ನು ವಿಡಿಯೋ ಕಾಲ್ನಲ್ಲಿ ನೋಡಿ ಕಣ್ಣೀರು ಹಾಕಿದೆ; ಕರೊನಾ ಸೋಂಕಿತನ ಕರುಣಾಜನಕ ಕಥೆ
ಕೊಚ್ಚಿ: ಕರೊನಾ ವೈರಸ್ ಅತ್ಯಂತ ಭಯಾನಕ ಎನ್ನುವುದಕ್ಕೆ ಕಾರಣವಿದೆ. ಕರೊನಾ ಸೋಂಕಿತರಿಗೆ ಮಾಮೂಲಿ ಕಾಯಿಲೆಯಿಂದ ಬಳಲುತ್ತಿರುವರಂತೆ ಜೀವಿಸುವ ಸ್ವಾತಂತ್ರ್ಯವಿಲ್ಲ. ಎಲ್ಲರಿಂದ ದೂರಾಗಿ ಪ್ರತ್ಯೇಕ ಕೋಣೆಗಳಲ್ಲೇ ಅವರು ಚಿಕಿತ್ಸೆ ಪಡೆಯಬೇಕು. ತಮ್ಮ ಆತ್ಮೀಯರಿಂದ ಆರೈಕೆ ಮಾಡಿಸಿಕೊಳ್ಳುವಂತಹ ಭಾಗ್ಯವಂತೂ ಅವರ ಪಾಲಿನದ್ದಲ್ಲ. ಈ ರೀತಿಯ ಮಾನಸಿಕ ಹಿಂಸೆಯನ್ನು ನೀಡುವ ಕರೊನಾ ವೈರಸ್ನಿಂದಾಗಿ ನಡೆದಿರುವ ಕರುಣಾಜನಕ ಕಥೆಯೊಂದು ಇಲ್ಲಿದೆ. ಕೇರಳ ಮೂಲದ ಲಿನೋ ಅಬೆಲ್ ಹೆಸರಿನ ವ್ಯಕ್ತಿ ಕೆಲ ವರ್ಷಗಳಿಂದ ಅರೇಬಿಯನ್ ದೇಶವಾದ ಕತಾರ್ನಲ್ಲಿ...