ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿಯಿಂದ ಹುತಾತ್ಮ ಯೋಧರ ಕುಟುಂಬಿಕರಿಗೆ ಚೆಕ್ ವಿತರಣೆ – ಕಹಳೆ ನ್ಯೂಸ್
ಮೈಸೂರು- ಹುತಾತ್ಮರಾದ ಯೋಧರ ಕುಟುಂಬಕ್ಕೆ ಇನ್ಫೊಸಿಸ್ ವತಿಯಿಂದ ತಲಾ 10ಲಕ್ಷ ರೂ ನೀಡಲಾಗಿದ್ದು, ನಿನ್ನೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹುತಾತ್ಮ ಯೋಧರ ಕುಟುಂಬಿಕರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಚೆಕ್ ವಿತರಿಸಿ ಆರು ಹುತಾತ್ಮ ಯೋಧರ ಕುಟುಂಬಿಕರಿಗೆ ಧನ ಸಹಾಯ ಮಾಡಿದರು. ಮೈಸೂರು ತಾಲೂಕಿನ ರಮೇಶ್, ಎಚ್.ಟಿ.ಕೋಟೆ ತಾಲೂಕಿನ ಮಹೇಶ್, ಹಾಸನದ ನಾಗೇಶ್, ಯೋಗಾನಂದ್, ಸಂದೀಪ್ ಹಾಗೂ ಸಾಗರ್ ಕುಟುಂಬಿಕರು ಚೆಕ್ ಪಡೆದರು. ಬಳಿಕ ಮಾತನಾಡಿದ ಸುಧಾಮೂರ್ತಿ ಈ ಹಣವನ್ನು ಮುಂಜಿ ಮದುವೆ ಎಂದು...