ನಕಲಿ ನೋಟು ಪತ್ತೆ: ಅಕ್ಸಿಸ್ ಬ್ಯಾಂಕ್ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್
ದೆಹಲಿ: ರಿಸರ್ವ್ ಬ್ಯಾಂಕ್‌ಗೆ ಹಣ ಪಾವತಿಸುವಾಗ ನಕಲಿ ನೋಟುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ಸಿಸ್ ಬ್ಯಾಂಕ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬ್ಯಾಂಕ್ ಆಂತರಿಕ ಲೆಕ್ಕ ಪತ್ರ ಪರಿಶೋಧನೆ ವೇಳೆ ಆರ್‌ಬಿಐಗೆ ಹಣ ಪಾವತಿಸುವಾಗ 100ರೂ. ಮುಖಬೆಲೆಯ 18,600 ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ಸಂಬಂಧ ಬ್ಯಾಂಕ್‌ನ ಇಶ್ಯೂ ಡಿಪಾರ್ಟ್ ಮೆಂಟ್ ಮ್ಯಾನೇಜರ್ ಎಂ.ಎಲ್. ಲಕ್ಷ್ಮೀ ಅವರು ಆಕ್ಸಿಸ್ ಬ್ಯಾಂಕ್ ವಿರುದ್ಧ ದೂರು ನೀಡಿದ್ದಾರೆ....