ಅಪಪ್ರಚಾರಕ್ಕೆ ನಾವು ಕಿವಿಗೊಡುವುದಿಲ್ಲ, ಅಭಿವೃದ್ಧಿ ಕಾರ್ಯ ಪ್ರಾರಂಭಿಸುತ್ತೇವೆ – ರೈ
ಬಂಟ್ವಾಳ : ನಮ್ಮಅಧಿಕಾರದ ನಾಲ್ಕುವರೆ ವರ್ಷ ಅವಧಿಯಲ್ಲಿ ಮಂಜೂರು ಮಾಡಿದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದು, ಉದ್ಘಾಟನೆಯನ್ನು ನಾವೇ ಮಾಡುತ್ತೇವೆ ಎಂದು ರಮಾನಾಥ ರೈ ಹೇಳಿದ್ದಾರೆ. ಅವರು ಬಿ.ಸಿ.ರೋಡಿನ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಪಪ್ರಚಾರಕ್ಕೆ ನಾವು ಅಧ್ಯತೆ ನೀಡುವುದಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 35 ಕೋಟಿ ರೂ ಬಿಡುಗಡೆಗೊಂಡಿದೆ. ಶೀಘ್ರವೇ ಎಲ್ಲಾ ಕಾಮಗಾರಿಗಳು ಪ್ರಾರಂಭವಾಗಲಿದೆ. ಕಾವಳಪಡೂರು ಗ್ರಾಮದ ಅಲಂಪುರಿಯಲ್ಲಿ ಪ್ರಥಮ ಹಂತದ 25 ಲಕ್ಷ ವೆಚ್ಚದಲ್ಲಿ ವ್ರಕ್ಷ ಉದ್ಯಾನವನಕ್ಕೆ ಶಿಲಾನ್ಯಾಸ ನಡೆಯಲಿದೆ....