Recent Posts

Sunday, January 19, 2025

archivebantwal

ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಇತಿಹಾಸದಲ್ಲೇ ಮೊದಲಬಾರಿಗೆ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ನಾಳೆ ಬಂಟ್ವಾಳ ತಾಲೂಕಿನ ಜನರ ಸಾರಿಗೆ ಸಮಸ್ಯೆಗೆ ಸ್ಪಂದಿಸಲು ” KSRTC ಅದಾಲತ್ ” – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕಿನ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು, ಸಾರ್ವಜನಿಕರ ಸಮಸ್ಯೆ ಆಲಿಸಲು ಇತಿಹಾಸದಲ್ಲೇ ಮೊದಲ ಬಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರ ಅಧ್ಯಕ್ಷತೆಯಲ್ಲಿ, ಸಂಸ್ಥೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ " ಕೆ.ಎಸ್.ಆರ್.ಟಿ.ಸಿ. ಅದಾಲತ್ " ನಡೆಯಲಿದೆ. ನಾಳೆ 20-11-2020 ಶುಕ್ರವಾರ ಬೆಳಿಗ್ಗೆ 10-30 ಕ್ಕೆ ಸರಿಯಾಗಿ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರನ್ನು ಆಹ್ವಾಸಲಾಗಿದೆ....
ಸುದ್ದಿ

ಬಂಟ್ವಾಳದ ಯುವತಿ ಪ್ರೀತಿಗಾಗಿ ಮಾಡಿದ್ದೇನು? – ಕಹಳೆ ನ್ಯೂಸ್

ಬಂಟ್ವಾಳ: ಯವನ್ನದಲ್ಲಿ ಪ್ರೀತಿಗೆ ಬಿದ್ದರೆ ಯುವಕರು ಏನೆಲ್ಲಾ ಮಾಡುತ್ತಾರೆಂದು ಊಹಿಸಲು ಬಲು ಮಂದಿಗೆ ಕಷ್ಟ. ಇಲ್ಲೊಬ್ಬಳು ಯುವತಿ ಪ್ರೀತಿಗಾಗಿ ಮನೆಯನ್ನೇ ತೊರೆದಿದ್ದಾಳೆ. ಚೀಟಿ ಬರೆದಿಟ್ಟು ಯುವತಿ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿರುವುದು ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ದಡ್ಡು ನಿವಾಸಿ ಉದಯಕುಮಾರ್ ಅವರ ಪುತ್ರಿ ದಿವ್ಯಶ್ರೀ ಎಂಬ ಯುವತಿ ಕಾಣೆಯಾಗಿದ್ದಾಳೆ. ಪಿ.ಯು.ಸಿ. ವಿದ್ಯಾಭ್ಯಾಸ ಮುಗಿಸಿದ ಬಳಿಕ ಶಿಕ್ಷಣ ಮುಂದುವರಿಸದ ದಿವ್ಯ ಕಳೆದ ಎರಡು ತಿಂಗಳಿನಿಂದ ಪುಂಜಾಲಕಟ್ಟೆಯ...
ಸುದ್ದಿ

ಬಂಟ್ವಾಳದ ನೂತನ ತಹಶೀಲ್ದಾರ್ ಆಗಿ ರಶ್ಮಿ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ಬಂಟ್ವಾಳ: ತಹಶೀಲ್ದಾರ್ ಪುರಂದರ ಹೆಗ್ಡೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನೂತನ ತಹಶೀಲ್ದಾರ್ ಆಗಿ ರಶ್ಮಿ ಎಸ್.ಆರ್. ಅವರು ಅಧಿಕಾರ ಸ್ವೀಕರಿಸಿದರು. ಶನಿವಾರ ಬೆಳಗ್ಗೆ ಮಿನಿ ವಿಧಾನ ಸೌಧದಲ್ಲಿ ಕರ್ತವ್ಯಕ್ಕೆ ಹಾಜರಾದ ರಶ್ಮಿ ಅವರಿಗೆ ತಾಲೂಕು ಕಚೇರಿ ಸಿಬ್ಬಂದಿ ವರ್ಗ ಭವ್ಯ ಸ್ವಾಗತ ಕೋರಿದರು. ಉಪತಹಶೀಲ್ದಾರ್‍ಗಳಾದ ವಾಸು ಶೆಟ್ಟಿ, ರಾಜೇಶ್ ನಾಯ್ಕ್, ಪ್ರಭಾರ ಉಪತಹಶೀಲ್ದಾರ್ ಗ್ರೆಟ್ಟಾ ಮಸ್ಕರೇಂಜಸ್, ಸೀತಾರಾಮ ನೂತನ ತಹಶೀಲ್ದಾರರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು....
ಸುದ್ದಿ

ಚೆನ್ನೈತ್ತೋಡಿ ಶಾಲೆ ಶತಮಾನೋತ್ಸವ ಸಂಭ್ರಮ; 10ಲಕ್ಷ ವೆಚ್ಚದ ಭೋಜನ ಶಾಲೆ ಲೋಕಾರ್ಪಣೆ – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಕಾಲಘಟ್ಟದಲ್ಲಿ ಚೆನ್ನೈತ್ತೋಡಿ ಶಾಲೆ ಶತಮಾನೋತ್ಸವ ಆಚರಿಸುತ್ತಿರುವುದು ನಮಗೆ ಮತ್ತು ಊರವರಿಗೆ ಹೆಮ್ಮೆಯ ವಿಷಯವಾಗಿದೆ. ಈ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಶಾಸಕರ ನೆಲೆಯಲ್ಲಿ ಪ್ರಯತ್ನಿಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಶತಮಾನೋತ್ಸವದ ಸವಿನೆನಪಿಗಾಗಿ ಸುಮಾರು 10ಲಕ್ಷ...
ರಾಜಕೀಯ

BIG BREAKING NEWS : ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮೇಲೆ ಹಲ್ಲೆ: ರೈ ಬಂಟರ ರೌಡಿಸಂ – ಕಹಳೆ ನ್ಯೂಸ್

ಬಂಟ್ವಾಳ : ಪೂರ್ವ ನಿಗದಿಯಂತೆ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಶಾಸಕ ರಾಜೇಶ್ ನಾೈಕ್ ಆಗಮಿಸಿದ್ದರು. ಇವರು ಆಗಮನದಿಂದ ಕೋಪಗೊಂಡ ಮಾಜಿ ಶಾಸಕ ರಮಾನಾಥ ರೈ ಬಂಟರು ಪುಂಡಾಟಿಕೆ ಮೆರೆದಿದ್ದಾರೆ. ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಉನ್ನತ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳದಲ್ಲೇ ಇದ್ದರೂ ಕೂಡ ಕೈ ಕಟ್ಟಿಕುಳಿತ್ತಿದ್ದಾರೆ. ಗೂಂಡಾಗಿರಿ ಪ್ರವ್ರತ್ತಿಯಿಂದ ಸರಕಾರಿ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ. ಜಿ.ಪಂ.ಸದಸ್ಯ ಹಾಗೂ ಅವರ ಬೆಂಬಲಿಗರ ಮೇಲೆ ಪೋಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು...
ಸುದ್ದಿ

ಊರವರೇ ಸೇರಿ ಕಟ್ಟಿದ್ರೂ ನೋಡಿ ಬಸ್‍ಸ್ಟ್ಯಾಂಟ್ – ಕಹಳೆ ನ್ಯೂಸ್

ಬಂಟ್ವಾಳ: ಕಳೆದ 5 ವರ್ಷಗಳಿಂದ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ಕಾರಣಕ್ಕಾಗಿ ಊರವರು ಸರಕಾರಕ್ಕೆ ಅದೆಷ್ಟೋ ಬಾರಿ ಮನವಿ ಮಾಡಿದ್ದರು. ಆದರೆ ಸರಕಾರ ಬಸ್ ನಿಲ್ದಾಣ ಮಾಡಲು ಮುಂದಾಗಿಲ್ಲ. ಇದರಿಂದಾಗಿ ಧೃತಿಗೆಡದೆ ಊರಮಂದಿ ಸರ್ಕಾರಕ್ಕೆ ಸವಾಲೆಸೆದು ತಾವೇ ಬಸ್ ಸ್ಟ್ಯಾಂಡ್ ನಿರ್ಮಿಸಿದ್ದಾರೆ. ಕಳೆದ 15 ವರ್ಷಗಳ ಹಿಂದೆ ಪೆರಾಜೆ ಗ್ರಾಮದಲ್ಲಿ ಬಸ್ ನಿಲ್ದಾಣ ವ್ಯವಸ್ಥೆ ಇತ್ತು. ಆದರೆ ರಸ್ತೆ ಅಗಲೀಕರಣದ ವೇಳೆ ಆ ಬಸ್ ನಿಲ್ದಾಣ...
ಸುದ್ದಿ

ಡಿ. ೮ ರಂದು ಮಾಣಿಯಲ್ಲಿ ಕಂಬಳಕೋರಿ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನ ಮಾಣಿ ಗ್ರಾಮದಲ್ಲಿ ಡಿ. ೮ ರಂದು ಮಾಣಿಗುತ್ತುವಿನಲ್ಲಿ ನಡೆಯಲಿರುವ ಕಂಬಳದ ಕೋರಿ ನೇಮಕ್ಕೆ ನಿನ್ನೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ಬಳಿಕ ಗೊನೆ ಕಡಿಯಲಾಯಿತು. ಕಂಬಳಕೋರಿ ಎಂದರೆ ಗ್ರಾಮದ ಪಾವಿತ್ರ‍್ಯತೆ ಹೊಂದಿರುವ ಕಂಬಳ ಗದ್ದೆಯ ಕೋರುವುದು / ಉಳುಮೆ ಮಾಡುವುದು ಆಗಿದೆ. ಮಾಣಿ ಕಂಬಳ ಗದ್ದೆಗೆ ಸೂತಕ, ಮೈಲಿಗೆ ಇದ್ದವರು ಹೋಗುವಂತಿಲ್ಲ. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ- ಕಟ್ಟು ನಿಟ್ಟಿನ ನಿಯಮವಾಗಿದೆ. ಕಂಬಳಕೋರಿಗೆ ನಿಗದಿಗೊಳಿಸಿದ ಏಳು...