Sunday, January 19, 2025

archiveBjp karnataka

ರಾಜಕೀಯಸುದ್ದಿ

ಸ್ವ ಪಕ್ಷದವರಿಂದಲೇ ‘ಗೋ ಬ್ಯಾಕ್ ಶೋಭಕ್ಕ’ ಚಳುವಳಿ – ಕಹಳೆ ನ್ಯೂಸ್

ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸದಸ್ಯರಾದ ಶೋಭಾ ಕರಂದ್ಲಾಜೆ ಅವರ ವಿರುದ್ಧ ಸ್ವಪಕ್ಷೀಯ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಸದೆ ವಿರುದ್ಧ ಸ್ವ ಪಕ್ಷದ ಕಾರ್ಯಕರ್ತರಿಂದಲೇ ಆಕ್ರೋಶ ವ್ಯಕ್ತವಾಗಿದ್ದು, 'ಗೋ ಬ್ಯಾಕ್ ಶೋಭಕ್ಕ' ಚಳವಳಿ ಆರಂಭಿಸಲಾಗಿದೆ. 'ಗೋ ಬ್ಯಾಕ್ ಶೋಭಕ್ಕ' ಎಂದು ಪಕ್ಷದ ಕಾರ್ಯಕರ್ತರು ಶೋಭಾ ಕರಂದ್ಲಾಜೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 5 ವರ್ಷದಿಂದ ನಾಪತ್ತೆಯಾಗಿದ್ದ ಶೋಭಾ ಕರಂದ್ಲಾಜೆ ಈಗ ಮೋದಿ ಹೆಸರಲ್ಲಿ ಮತ್ತೆ ಗೆಲ್ಲಲು ಬಂದಿದ್ದಾರೆ ಎಂದು...
ರಾಜಕೀಯಸುದ್ದಿ

ಎಂಎಲ್ಸಿ ಮಾಡಲು ಹೆಚ್‍ಡಿಕೆ 25ಕೋಟಿ ಕೇಳಿದ್ದರು; ಹೊಸ ಬಾಂಬ್ ಸಿಡಿಸಿದ ವಿಜುಗೌಡ ಪಾಟೀಲ – ಕಹಳೆ ನ್ಯೂಸ್

ವಿಜಯಪುರ: ಕಳೆದ 2004ರಲ್ಲಿ ನನ್ನನ್ನು ಎಂ ಎಲ್ ಸಿ ಮಾಡಲು 25 ಕೋಟಿ ರೂ. ನೀಡಬೇಕೆಂದು ಅಂತ ಸಿಎಂ ಕುಮಾರಸ್ವಾಮಿ ಅವರು ಕೇಳಿದ್ದರು ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ವಿಧಾನಸಭಾ ಚುನಾವಣಾ ವೇಳೆ ಕುಮಾರಸ್ವಾಮಿ ಅವರು ನನ್ನ ಪರ ಪ್ರಚಾರಕ್ಕೆ ಬರಲಿಲ್ಲ. ನಾನು 2 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತೆ. ಇದರಿಂದಾಗಿ ನನ್ನನ್ನ ಎಂ...
ರಾಜಕೀಯಸುದ್ದಿ

ಆಪರೇಷನ್ ಕಮಲ – ರೆಡ್ಡಿಯ ಪಾಳಯದಲ್ಲಿ ಯಾರ‍್ಯಾರು? – ಕಹಳೆ ನ್ಯೂಸ್

ರಾಜದ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಕಾರ್ಯಚರಣೆಯ ಅಬ್ಬರ ಸದ್ಯಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ, ಆದರೆ ತೆರೆಮರೆಯಲ್ಲಿ ಶಾಸಕರನ್ನು ಸೆಳೆಯಲು ಪ್ರಯತ್ನಗಳು ನಡೆದಿವೆ. ಎ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಶಾಸಕ ಜೆ.ಎನ್. ಗಣೇಶ್ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿಯ ಪಾಳಯದಲ್ಲಿದ್ದು, ಬಿಜೆಪಿ ಸೇರಲು ಚಿಂತಿಸಿದ್ದಾರೆ ಎಂದು ಹೇಳಲಾಗಿದೆ. ಹಿಂದೆ ಮುಂಬೈ ಹೋಟೆಲ್‍ನಲ್ಲಿ ತಂಗಿದ್ದ ಅತೃಪ್ತ ಶಾಸಕರೊಂದಿಗೆ ಜನಾರ್ದನ ರೆಡ್ಡಿ ಚರ್ಚೆ ನಡೆಸಿದ್ದರು ಎಂದು...
ಸುದ್ದಿ

ರಾಜ್ಯಸಭಾ ಚುನಾವಣೆ : ಬಿಜೆಪಿ ಅಭ್ಯರ್ಥಿಯಾಗಿ ರಾಜೀವ್ ಚಂದ್ರಶೇಖರ್

ಬೆಂಗಳೂರು : ವಿಧಾನ ಸಭೆ ಚುನಾವಣೆಗೂ ಮುನ್ನವೇ ಕರ್ನಾಟಕದಲ್ಲಿ ಮತ್ತೂಂದು ಹೈವೋಲ್ಟೆಜ್‌ ರಾಜ್ಯ ಸಭಾ ಚುನಾವಣಾ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಮಾರ್ಚ್‌ 23 ರಂದು ರಾಜ್ಯದ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಇಂದ ಯಾರು ಸ್ಪರ್ಧಿಸುವರು ಎಂದು ತೀವ್ರ ಕುತೂಹಲ ಕೆರಳಿಸಿದ್ದ ಬಗ್ಗೆ ಕೊನೆಗೂ ತೆರೆಬಿದ್ದಿದ್ದು, ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.ಅಲ್ಲದೆ ಬಿಜೆಪಿ ಪ್ರಾಥಮಿಕ ಸದಸ್ಯತವನ್ನು ಪಡೆದುಕೊಳ್ಳಲು ಬಿಜೆಪಿ ಹೈ ಕಮಾಂಡ್ ಸೂಚಿಸಿದೆ ಎಂದು ತಿಳಿದು ಬಂದಿದೆ...
ಸುದ್ದಿ

ಇಂದಿನಿಂದ `ಕೈ’ ಗೂಂಡಾಗಿರಿ ಖಂಡಿಸಿ ಬಿಜೆಪಿಯಿಂದ `ಬೆಂಗಳೂರು ರಕ್ಷಿಸಿ’ ಯಾತ್ರೆ – ಕಹಳೆ ನ್ಯೂಸ್

ಬೆಂಗಳೂರು: ನಲಪಾಡ್ ಗೂಂಡಾಗಿರಿ ಸೇರಿದಂತೆ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆಯ ಪ್ರಕರಣಗಳನ್ನು ಖಂಡಿಸಿ ಇಂದಿನಿಂದ ಬಿಜೆಪಿ ಬೆಂಗಳೂರು ರಕ್ಷಿಸಿ ಯಾತ್ರೆ ಆರಂಭಿಸಲಿದೆ. ಇಂದು ಬೆಳಗ್ಗೆ ಸುಮಾರು 9.30ಕ್ಕೆ ಬಸವನಗುಡಿ ಬಳಿ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಕ್ಷಾಯಾತ್ರೆಗೆ ಚಾಲನೆ ದೊರೆಯಲಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಲಿದ್ದಾರೆ. ಸಂಜೆ 4 ಗಂಟೆಗೆ...