Friday, September 20, 2024

archiveBJP

ಸುದ್ದಿ

ಸಿದ್ದರಾಮಯ್ಯ ತವರಲ್ಲಿ ಮೋದಿ ರಣಕಹಳೆ – ಪ್ರಧಾನ ಮಂತ್ರಿಗಳ ವೇಳಾಪಟ್ಟಿ ಏನು ಗೊತ್ತಾ?

ಬೆಂಗಳೂರು: ಹಮ್ ಸಫರ್ ರೈಲು ಮತ್ತು ಹಲವು ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದಾರೆ. ಭಾನುವಾರ ತಡರಾತ್ರಿ 11 ಗಂಟೆಗೆ ಮೋದಿ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು. ಈ ವೇಳೆ ಸಿಎಂ ಸಿದ್ದರಾಮಯ್ಯ ಶಿಷ್ಠಾಚಾರದ ಅನ್ವಯ ಸ್ವಾಗತ ಕೋರಿದ್ರು. ರಾಜ್ಯಪಾಲ ವಜುಭಾಯಿ ವಾಲಾ ಕೂಡ ಮೋದಿಗೆ ಸ್ವಾಗತ ಕೋರಿದ್ರು. ಬಳಿಕ ಮೋದಿ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ರು. ಮೋದಿ ಆಗಮನಕ್ಕೆ ಕಾಯುತ್ತಿದ್ದ ನೂರಾರು...
ಸುದ್ದಿ

ನಾಳೆ ದಕ್ಷಿಣ ಕನ್ನಡ ಜಿಲ್ಲೆಗೆ ಶಾ ಆಗಮನ | ಎರಡು ದಿನದಲ್ಲಿ ಎಲ್ಲಿಗ್ಗೆಲ್ಲಾ ಹೋಗ್ತಾರೆ ‘ ಶಾ ‘ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ – ಕಹಳೆ ನ್ಯೂಸ್

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರಾವಳಿಯಿಂದಲೇ ಆರಂಭಿಕ ಪ್ರವಾಸ ಹಮ್ಮಿಕೊಂಡಿದ್ದಾರೆ. ಸೋಮವಾರ ಸಂಜೆ 5.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಬಿಜೆಪಿ ಅಧ್ಯಕ್ಷರನ್ನು ಸಾವಿರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ. ಬಳಿಕ ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 20ರ ಪಂಚಮಿಯ ದಿನದಂದು ಬೆಳಗ್ಗೆ ಏಳು ಗಂಟೆಗೆ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವರು....
ಸುದ್ದಿ

‘ಶಾ’ ಬರೀ ಹಿಂದುಗಳ ಮನೆಗೆ ಯಾಕೆ ಹೋಗಬೇಕು, ಕರಾವಳಿಯ ಚರ್ಚ್ ಮತ್ತು ಮಸೀದಿಗೂ ಹೋಗಲಿ – ಗುಂಡೂರಾವ್

ಉಡುಪಿ, ಫೆ 17: ಕರಾವಳಿ ಪ್ರವಾಸದ ವೇಳೆ ಅಮಿತ್ ಶಾ ಬರೀ ಹಿಂದೂಗಳ ಮನೆಗೆ ಯಾಕೆ ಹೋಗಬೇಕು. ಚರ್ಚ್, ಮಸೀದಿಗೂ ಶಾ ಹೋಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಮಸೀದಿಗೂ ಭೇಟಿ ಕೊಡಲಿ. ಚರ್ಚ್, ದರ್ಗಾಕ್ಕೂ ಶಾ ಹೋಗಲಿ. ಬರೀ ಹಿಂದೂಗಳ ಮನೆಗೆ ಯಾಕೆ ಹೋಗಬೇಕು. ಮೃತ ಮುಸಲ್ಮಾನರ ಮನೆಗೂ ಶಾ ಹೋಗಲಿ. ಸತ್ತವರ ವಿಚಾರದಲ್ಲಿ ಜಾತಿ-ಧರ್ಮ ನೋಡಬೇಡಿ...
ಸುದ್ದಿ

ಹರಿದು ಬಂತು ಜನಸಾಗರ, ಸುಳ್ಯದಲ್ಲಿ ಪರಿವರ್ತನಾ ಯಾತ್ರೆ ಭಾರಿ ಜನಸ್ಪಂದನೆ | ಬಿ.ಎಸ್. ವೈ ಸೇರಿದಂತೆ ರಾಜ್ಯನಾಯಕರು ಭಾಗಿ.

ಸುಳ್ಯ : ಪರಿವರ್ತನಾ ಯಾತ್ರೆಗೆ ಸುಳ್ಯದಲ್ಲಿ ಭಾರಿ ಜನಸ್ಪಂದನೆ ವ್ಯಕ್ತವಾಗಿದೆ. ಸಾವಿರಾರು ಜನ ಕೇಸರಿ ಶಾಲು ಧರಿಸಿ. ಬಿ.ಜೆ.ಪಿ. ಧ್ವಜ ಹಿಡಿಕೊಂಡು ಆಗಮಿಸಿದ್ದು ಯಾತ್ರೆಗೆ ಭವ್ಯ ಮೆರುಗನ್ನು ನೀಡಿದೆ. ಕೇಸರಿ ಪಡೆಯ ಭದ್ರಕೋಟೆಯಾದ ಸುಳ್ಯದಲ್ಲಿ ಮತ್ತೊಮ್ಮೆ ಬಿ.ಜೆ.ಪಿ. ಬೃಹತ್ ಶಕ್ತಿ ಪ್ರದರ್ಶನ ಮಾಡುವುದರ ಮೂಲಕ ಬಿ.ಜೆ.ಪಿ. ತನ್ನ ಭಲವನ್ನು ತೋರ್ಪಡಿಸಿದೆ. ಯಾತ್ರೆಯಲ್ಲಿ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಜೆ, ಶ್ರೀರಾಮುಲು, ನಳೀನ್ ಕುಮಾರ್ ಕಟೀಲು,...
ಸುದ್ದಿ

ಹಿಂದುತ್ವದ ಹರಿಕಾರ, ರಾಜಕೀಯ ಮುಸ್ಸದ್ದಿ | ‘ ಭೀಷ್ಮ ‘ ಎಲ್.ಕೆ. ಅಡ್ವಾಣಿ

ಕಹಳೆ ವಿಶೇಷ ವರದಿ : ನಮ್ಮ ದೇಶದ ಅಗ್ರಪಂಕ್ತಿಯ ರಾಜಕೀಯ ನೇತಾರರಲ್ಲಿ ಲಾಲಕೃಷ್ಣ ಆಡ್ವಾಣಿಯವರದು ಬಹುಮುಖ್ಯ ಹೆಸರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಂಘಟನೆ ಮತ್ತು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ಅವರು, ಆರ್​ಎಸ್​ಎಸ್ ಪ್ರೇರಣೆಯಿಂದಲೇ ರಾಜಕೀಯಕ್ಕೆ ಬಂದರು. ಸಾಮಾನ್ಯ ಕಚೇರಿ ಕಾರ್ಯದರ್ಶಿಯಿಂದ ದೇಶದ ಉಪಪ್ರಧಾನಿವರೆಗಿನ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವಿ ನಾಯಕ.   ಬಾಲ್ಯ ಜೀವನ : ಆಡ್ವಾಣಿಯವರು ಹುಟ್ಟಿದ್ದು, ಬೆಳೆದದ್ದು ಈಗಿನ ಪಾಕಿಸ್ತಾನದ ಕರಾಚಿಯಲ್ಲಿ. ತಂದೆ ಕಿಶನ್​ಚಂದ್, ತಾಯಿ...
ಸುದ್ದಿ

ತಾಜ್ ಮಹಲ್ ವಿವಾದ | ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಪ್ರಧಾನಿ

ನವದೆಹಲಿ : ತಾಜ್ ಮಹಲ್ ಕುರಿತು ತಮ್ಮ ಪಕ್ಷದ ನಾಯಕರು ವಿವಾದಿತ ಹೇಳಿಕೆಗಳನ್ನು ನೀಡಿ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಿದ್ದರೆ, ಇದಕ್ಕೆ ಇತಿಶ್ರೀ ಹಾಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಾಜ್ ಮಹಲ್ ಕುರಿತು ಪ್ರತಿಕ್ರಿಯಿಸಿದ್ದಾರೆ. ಪಾರಂಪರಿಕ ಕಟ್ಟಡಗಳನ್ನು ಮರೆತು ಯಾವ ದೇಶವೂ ಮುಂದುವರೆಯಲು ಸಾಧ್ಯವಿಲ್ಲ, ಒಂದು ವೇಳೆ ಹಾಗೆ ಮರೆತರೆ ಒಂದಾನೊಂದು ದಿನ ತಮ್ಮ ಗುರುತನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು. ಭಾರತೀಯ ಸಂಸ್ಕೃತಿಗೆ ತಾಜ್ ಮಹಲ್...
ಸುದ್ದಿ

‘ಕೈ’ ಜೊತೆಗಿನ 35 ವರ್ಷದ ನಂಟು ಅಂತ್ಯ | ಬಿಜೆಪಿಗೆ ಹರಿಕೃಷ್ಣ ಬಂಟ್ವಾಳ್‌!?

ಬಂಟ್ವಾಳ: ಕೆಪಿಸಿಸಿಯ ಮಾಜಿ ವಕ್ತಾರ, ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಶಿಷ್ಯ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಬಿಜೆಪಿ ಸೇರಲಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ.ನ. 11ರಂದು ಮಂಗಳೂರಿನಲ್ಲಿ ನಡೆಯುವ ಪರಿವರ್ತನಾ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಕಹಳೆ ನ್ಯೂಸ್ ಗೆ ಲಭ್ಯವಾಗಿದೆ. ವಿಧಾನ ಪರಿಷತ್ ಚುನಾವಣೆ ವೇಳೆ ತನಗೆ ಟಿಕೆಟ್...
ಸುದ್ದಿ

ಪ್ರಮೋದ್ ಮಧ್ವರಾಜ್ ಬಿ.ಜೆ.ಪಿ. ಗೆ ……!?

ಬೆಂಗಳೂರು: ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಬಿಜೆಪಿಗೆ ಬಂದರೆ ಸ್ವಾಗತ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ.   ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ 'ಮೋದಿ ಆಡಳಿತವನ್ನು ನೋಡಿ ಅನೇಕ ಮುಖಂಡರು ಬಿಜೆಪಿಯತ್ತ ಆಕರ್ಷಿತರಾಗಿದ್ದಾರೆ. ಪ್ರಮೋದ್‌ ಸೇರಿದಂತೆ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ'ಎಂದರು. ಇದೇ ವೇಳೆ 'ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದರೂ ಪಕ್ಷ ಸ್ವಾಗತಿಸುತ್ತದೆ' ಎಂದು ಹಾಸ್ಯ ಚಟಾಕಿ ಹಾರಿಸಿದರು....
1 6 7 8 9
Page 8 of 9