ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗಪತ್ತೆ ಪರೀಕ್ಷೆ ಸೌಲಭ್ಯ – ಕಹಳೆ ನ್ಯೂಸ್
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ವಿವಿಧ 58 ಬಗೆಯ "ರೋಗಪತ್ತೆ ಪರೀಕ್ಷೆ ಸೌಲಭ್ಯ' ಉಚಿತವಾಗಿ ಲಭ್ಯವಾಗುತ್ತಿವೆ. ಈ ಹಿಂದೆ ಕೇವಲ ಬಿಪಿಎಲ್ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸೌಲಭ್ಯವನ್ನು ರಾಷ್ಟ್ರೀಯ ಆರೋಗ್ಯ ಮಿಷನ್‌ನ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೂ ವಿಸ್ತರಿಸಲಾಗಿದೆ. ಇನ್ನು ಕೆಲವು ಪರೀಕ್ಷೆಗಳಿಗೆ ಶೇ.50ರಷ್ಟು ಶುಲ್ಕ ಪಾವತಿಸಬೇಕಿತ್ತು. ಪ್ರಸ್ತುತ ಅದರ ವ್ಯಾಪ್ತಿಯನ್ನು 2018 -19 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯ "ಉಚಿತ ರೋಗಪತ್ತೆ ಪರೀಕ್ಷೆಗಳು"...