Saturday, November 23, 2024

archiveCenter Government

ಸುದ್ದಿ

ಬಡ ಬ್ರಾಹ್ಮಣರಿಗೂ ಉದ್ಯೋಗದಲ್ಲಿ ಮೀಸಲಾತಿ: ಕೇಂದ್ರ ಸರ್ಕಾರದಿಂದ ಬಂಪರ್ ಉಡುಗೊರೆ – ಕಹಳೆ ನ್ಯೂಸ್

ದೆಹಲಿ: ಲೋಕಸಭಾ ಚುನಾವಣೆಗೂ ಮುನ್ನವೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಬಡವರಿಗೆ ಬಂಪರ್ ಉಡುಗೊರೆಯೊಂದನ್ನು ನೀಡಿದೆ. ಮೇಲ್ವರ್ಗದಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೂ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸೋಮವಾರ ನವದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನಾಳೆ ಅಂದರೆ ಮಂಗಳವಾರ ಸಂಸತ್ ನಲ್ಲಿ ಈ ಐತಿಹಾಸಿಕ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಲಿದೆ. ಈ ಮೂಸೂದೆ ಜಾರಿಗೆ ಬಂದರೆ...
ಸುದ್ದಿ

ತಕ್ಷಣವೇ ಪುನರ್ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು: ರಮಾನಾಥ್ ರೈ – ಕಹಳೆ ನ್ಯೂಸ್

ಮಂಗಳೂರು: ಅಡ್ಡ ಹೊಳೆಯಿಂದ ಬಿ.ಸಿ.ರೋಡ್ ವರೆಗಿನ ಹೆದ್ದಾರಿ ಕಾಮಗಾರಿ ಸ್ಥಗಿತ ಗೊಂಡಿದೆ. ತಕ್ಷಣವೇ ಪುನರ್ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ. ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ರಮಾನಾಥ್ ರೈ ತಕ್ಷಣವೇ ಕೇಂದ್ರ ಸರಕಾರ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಪಾದೆಯಾತ್ರೆ ಮೂಲಕ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು....
ಸುದ್ದಿ

ರೈತರ ಸಮಸ್ಯೆಗೆ ಸ್ಪಂದಿಸುವುದಕ್ಕಿಂತ ಕುರ್ಚಿ ಉಳಿಸಿಕೊಳ್ಳುವುದೇ ಕುಮಾರಸ್ವಾಮಿಗೆ ಪ್ರಮುಖವಾಗಿದೆ: ಡಿ.ವಿ.ಎಸ್ – ಕಹಳೆ ನ್ಯೂಸ್

ಮಂಗಳೂರು: ರೈತರ ಸಮಸ್ಯೆಗೆ ಸ್ಪಂದಿಸುವುದಕ್ಕಿಂತ ಅಲುಗಾಡುತ್ತಿರುವ ಅವರ ಕುರ್ಚಿ ಉಳಿಸಿಕೊಳ್ಳುವುದೇ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪ್ರಮುಖವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಈ ಸರ್ಕಾರಕ್ಕೆ ರೈತರ ಸಮಸ್ಯೆ ಹಾಗೆಯೇ ಉಳಿಯಬೇಕು. ರೈತ ಅಂತ ಹೇಳಿದ ತಕ್ಷಣ ಅವರ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡುವುದು, ಹಾದಿ ತಪ್ಪಿಸುವುದು ಮಾಡುತ್ತಿದ್ದಾರೆ. ಕಾರ್ಖಾನೆ ಮಾಲೀಕರಾಗಿರುವ ಸಚಿವರು ಮುಖ್ಯಮಂತ್ರಿ ಕರೆದ ಸಭೆಗೆ ಬರಲಿಲ್ಲ. ನಿಮಗೆ ನಾಚಿಕೆಯಾಗ್ಬೇಕು, ಅಂತಹ ಸಚಿವರನ್ನು...
ಸುದ್ದಿ

ರಾಮಮಂದಿರ ನಿರ್ಮಾಣ ವಿಚಾರ: ನ. 25 ರಂದು ಜನಾಗ್ರಹ ಸಭೆ – ಕಹಳೆ ನ್ಯೂಸ್

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಾಧು ಸಂತರ ನಿರ್ಣಯದಂತೆ ದೇಶದ ಕೆಲ ಭಾಗಗಳಲ್ಲಿ ಬೃಹತ್ ಜನಾಗ್ರಹ ಸಭೆ ನಡೆಸುವುದಾಗಿ ಕೈಗೊಂಡಿದೆ. ಕೇಂದ್ರ ಸರಕಾರಕ್ಕೆ ರಾಮಮಂದಿರ ವಿಚಾರಕ್ಕೆ ಸಂಬಂಧಿಸಿದಂತೆ ಚಳಿಗಾಲ ಅಧಿವೇಶನದಲ್ಲಿ ಶಾಸನ ರಚಿಸಿ ರಾಮಮಂದಿರ ನಿರ್ಮಾಣ ಮಾಡಲು ಒತ್ತಡ ಹೇರಲು ಈ ಕಾರ್ಯಕ್ರಮವನ್ನು ನವೆಂಬರ್ 25 ರಂದು ದೇಶದ ಕೆಲವು ಭಾಗಗಳಲ್ಲಿ ಹಮ್ಮಿಕೊಂಡಿದ್ದು 25 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ, ಹುಬ್ಬಳ್ಳಿಯಲ್ಲಿ, ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ...
ಸುದ್ದಿ

ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ ಭಾರತಕ್ಕೆ – ಕಹಳೆ ನ್ಯೂಸ್

ನವದೆಹಲಿ: 2019ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ ಭಾರತಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ. ಸಿರಿಲ್​ ರಮಫೊಸಾ ಕಳೆದ ಫೆಬ್ರವರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಸಿರಿಲ್​ ರಮಫೊಸಾ ಗಾಂಧಿವಾದಿಗಳಾಗಿದ್ದು, ಇದೇ ಕಾರಣಕ್ಕೆ ಭಾರತ ಸರ್ಕಾರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಈ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಭಾರತ ಸರ್ಕಾರ ನೀಡಿದ ಆಮಂತ್ರಣವನ್ನು...
ಸುದ್ದಿ

ಸುಭಾಷ್ ಚಂದ್ರ ಬೋಸ್ ತ್ರಿವರ್ಣ ಧ್ವಜ ಹಾರಿಸಿದ ಸ್ಮರಣಾರ್ಥ: 75 ರೂ ಮುಖಬೆಲೆಯ ನಾಣ್ಯ ಹೊರತರಲು ಕೇಂದ್ರ ಸರ್ಕಾರ ನಿರ್ಧಾರ – ಕಹಳೆ ನ್ಯೂಸ್

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ನ ಪೋರ್ಟ್ ಬ್ಲೈರ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರು 1943 ರ ಡಿಸೆಂಬರ್ 30 ರಂದು ಮೊದಲ ಬಾರಿಗೆ ತ್ರಿವರ್ಣ ಧ್ವಜಾರೋಹಣ ಮಾಡಿದ್ದರು. ಈ ಘಟನೆಗೆ 75 ವರ್ಷಗಳು ಸಂದಿದ್ದು ಈ ಹಿನ್ನೆಲೆಯಲ್ಲಿ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಹೊರತರಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿ 75 ವರ್ಷವಾದ ಹಿನ್ನೆಲೆಯಲ್ಲಿ ಇದರ ಸ್ಮರಣಾರ್ಥವಾಗಿ...
ಸುದ್ದಿ

ವಾಟ್ಸ್ ಆ್ಯಪ್ ದುರ್ಬಳಕೆ: ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಕೊನೆಗೂ ಸಿಕ್ಕಿದ ಫಲ – ಕಹಳೆ ನ್ಯೂಸ್

ದೆಹಲಿ: ಸುಳ್ಳುಸುದ್ದಿಗಳನ್ನು ಹರಡಿಸಲು ವಾಟ್ಸಪ್ ದುರ್ಬಳಕೆಯಾಗುತ್ತಿರುವ ಬೆನ್ನಲ್ಲಿ, ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳಿಗೆ ಕೊನೆಗೂ ಫಲಸಿಕ್ಕಿದೆ. ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್‌ರನ್ನು ಭೇಟಿಯಾದ ಬಳಿಕ ವಾಟ್ಸಪ್ ಉಪಾಧ್ಯಕ್ಷ ಕ್ರಿಸ್ ಡೇನಿಯಲ್ಸ್, ಭಾರತಕ್ಕಾಗಿಯೇ ಹೊಸ ಮುಖ್ಯಸ್ಥನನ್ನು ನೇಮಿಸುವುದಾಗಿ ಪ್ರಕಟಿಸಿದ್ದಾರೆ. ರವಿಶಂಕರ್ ಪ್ರಸಾದ್ ಹಾಗೂ ಕ್ರಿಸ್ ಡೇನಿಯಲ್ಸ್ ಸುಳ್ಳುಸುದ್ದಿಗಳು ಹಾಗೂ ಅವುಗಳಿಂದಾಗಿ ಸಂಭವಿಸುತ್ತಿರುವ ಗುಂಪು ಹತ್ಯೆಗಳನ್ನು ತಡೆಯುವ ಬಗ್ಗೆ ಚರ್ಚಿಸಿದ್ದಾರೆ. ವಾಟ್ಸಪ್ ಮೂಲಕ ಹರಡುವ ಸುಳ್ಳುಸುದ್ದಿಗಳು ಗುಂಪುಹತ್ಯೆಗೆ ಕಾರಣವಾಗುವ ಬಗ್ಗೆ ಗಂಭೀರವಾಗಿ...
ಸುದ್ದಿ

ಲಕ್ಷ್ಮಣನನ್ನೇ ಮರುಜೀವಗೊಳಿಸಿದ ಆ ಸಂಜೀವಿನಿ, ಇದೀಗ ಎಲ್ಲಿದೆ ಗೊತ್ತಾ?!! ಇದೇ ಹನುಮಂತನು ಸಂಜೀವಿನಿ ಪರ್ವತವನ್ನು ಹೊತ್ತು ತಂದಿರುವುದಕ್ಕೆ ಸಾಕ್ಷಿ!!

ಅಂದು ಲಕ್ಷ್ಮಣನು ಯುದ್ದದಲ್ಲಿ ಅಸುನೀಗಿದಾಗ ಆತನನ್ನು ಮರುಜೀವಗೊಳಿಸಲು ರಾಮನ ಭಂಟನಾದ ಕೇಸರಿತನಯ, ಮಹಾಜ್ಞಾನಿ, ಮಹಾಬುದ್ದಿವಂತನೆಂದು ಕರೆಸಿಕೊಳ್ಳುವ ಹನುಮಂತನು ಹೊತ್ತು ತಂದ ಸಂಜೀವಿನಿ ಪರ್ವತದಲ್ಲಿದ್ದ ಸಸ್ಯದಿಂದಾಗಿ ಪ್ರಾಣ ಉಳಿಯಿತು ಎನ್ನುವ ವಿಚಾರ ತಿಳಿದೇ ಇದೆ!! ಕೇವಲ 5 ಬಗೆಯ ಔಷಧೀಯ ಸಸ್ಯವನ್ನು ತರುವ ಬದಲು ಈಡೀ ಸಂಜೀವಿನಿ ಪರ್ವತವನ್ನೇ ಹೊತ್ತು ತಂದ ಹನುಮಂತನು ಆ ಪರ್ವತವನ್ನೇಲಿರಿಸಿದ ಗೊತ್ತಾ? ಸಂಜೀವಿನಿ ಸಸ್ಯವನ್ನು ತರಲು ಹೊರಟ ಹನುಮಂತನಿಗೆ, ಹಿಮಾಲಯದಲ್ಲಿರುವ ಸಂಜೀವಿನಿ ಪರ್ವತ ತಲುಪಿದಾಗ ಆತನಿಗೆ...
1 2
Page 1 of 2