ಡಿಸೆಂಬರ್ 2ರಿಂದ ಹತ್ತು ತಿಂಗಳುಗಳ ಕಾಲ ಸ್ವಚ್ಛತಾ ಅಭಿಯಾನ – ಕಹಳೆ ನ್ಯೂಸ್
ಮಂಗಳೂರು: ಸ್ವಚ್ಛತೆಯೇ ದೇವರು ಎಂಬ ಭಾವದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ. ಕೇಂದ್ರ ಸರಕಾರದ ವಿಶೇಷ ಮನವಿಯ ಮೇರೆಗೆ ಜನವರಿ 2015 ರಿಂದ ಆರಂಭಿಸಿ ಇಂದಿನವರೆಗೆ ನಾಲ್ಕು ಹಂತಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಸಂಪನ್ನಗೊಳಿಸಿದೆ. ಐದನೇ ಹಂತದ ಯೋಜನೆ 2 ಡಿಸೆಂಬರ್ 2018 ರಂದು ಭಾನುವಾರ ಬೆಳಗ್ಗೆ ಆರಂಭಗೊಳ್ಳುತ್ತಿದೆ. ನಾಲ್ಕು ವರ್ಷದ ಹಿಂದೆ ಸ್ವಚ್ಛತಾ ಅಭಿಯಾನವನ್ನು ಆರಂಭಿಸುವಾಗ ಯೋಜಿಸಿದಂತೆ ಮಹಾತ್ಮ ಗಾಂಧೀಜಿ...