Sunday, January 19, 2025

archiveCini Kahale

ಸಿನಿಮಾ

ಸ್ಯಾಂಡಲ್‌ವುಡ್‌ ನಟನಿಗೆ ಕಿಸ್ ಮಾಡಲು ಕಾಯುತ್ತಿದ್ದಾರಂತೆ ನಟಿ ರಾಗಿಣಿ!

ಬೆಂಗಳೂರು: ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ರಾಗಿಣಿ ಸ್ಯಾಂಡಲ್‌ವುಡ್‌ ನಟನಿಗೆ ಕಿಸ್ ಮಾಡಬೇಕೆಂದು ಹೇಳಿದ್ದಾರೆ. ಖಾಸಗಿ ಚಾನೆಲ್‍ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ನಟಿ ರಾಗಿಣಿ ಹಾಗೂ ರಕ್ಷಿತಾ ಪ್ರೇಮ್ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದಲ್ಲಿ ನಿರೂಪಕರಾಗಿರುವ ಶಿವರಾಜ್ ಕುಮಾರ್ ಸತ್ಯ ಅಥವಾ ಧೈರ್ಯ(ಟ್ರೂತ್ ಆರ್ ಡೇರ್) ಸೆಗ್ಮಂಟ್‍ನನ್ನು ಶುರು ಮಾಡಿದ್ದರು. ಸತ್ಯ ಅಥವಾ ಧೈರ್ಯದಲ್ಲಿ ಸತ್ಯವನ್ನು ಆಯ್ಕೆ ಮಾಡಿಕೊಂಡ ರಾಗಿಣಿ ಅವರಿಗೆ ಶಿವರಾಜ್ ಕುಮಾರ್ ನೀವು...
ಸಿನಿಮಾ

ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ಶೃತಿ ನಾಯ್ಡು ಸ್ಯಾಂಡಲ್ ವುಡ್‍ಗೆ ಎಂಟ್ರಿ!

ಬೆಂಗಳೂರು: ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ನಿರ್ಮಾಪಕಿ ಶೃತಿ ನಾಯ್ಡು ಇದೀಗ ಸ್ಯಾಂಡಲ್ ವುಡ್ ನಿರ್ಮಾಪಕಿಯಾಗಿದ್ದಾರೆ. ಪತಿ ರಮೇಶ್ ಆ್ಯಕ್ಷನ್ ಕಟ್ ಹೇಳುತ್ತಿರೋ ಚಿತ್ರಕ್ಕೆ ಶೃತಿ ನಾಯ್ಡು ಹಣ ಹೂಡುತ್ತಿದ್ದಾರೆ. ಶೃತಿ ನಾಯ್ಡು ಪತಿ ರಮೇಶ್ ಗಗನ ಇಂದ್ರ ನಿರ್ದೇಶನದಲ್ಲಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಮೂಡಿ ಬರಲಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ಮಧುಬಾಲಾ ಅಭಿನಯಿಸುತ್ತಿದ್ದಾರೆ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಪ್ರೀಮಿಯರ್ ಕಾರ್ ಜೊತೆಗೆ ಫೋಟೋಶೂಟ್...
ಸಿನಿಮಾ

ನಿನ್ನ ರೇಟ್ ಎಷ್ಟು? ಎಂದು ಸಾಮಾಜಿಕ ಜಾಲತಾಣದಲ್ಲಿ ರ‍್ಯಾಪಿಡ್ ರಶ್ಮಿಗೆ ಕಿರುಕುಳ!

ಬೆಂಗಳೂರು: ಕೆಲವು ದಿನಗಳ ಹಿಂದೆ ಆರ್ ಜೆ ರ‍್ಯಾಪಿಡ್ ರಶ್ಮಿ ರಾಜರಥ ಸಿನಿಮಾದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಆದರೆ ಈಗ ಅವರಿಗೆ ಅತ್ಯಾಚಾರದ ಬೆದರಿಕೆ ಬರುತ್ತಿದೆ ಹಾಗೂ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದ್ದಾರೆ. ಈ ಹಿಂದೆ ರಾಜರಥ ತಂಡ ಸಿನಿಮಾ ನೋಡದವರು ಕಚಡಾ, ಲೋಫರ್ ನನ್ ಮಕ್ಳು ಎಂದು ಹೇಳಿದ್ದರು. ಇದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಇಂತಹ ಪ್ರಶ್ನೆ ಕೇಳಿದ ರ‍್ಯಾಪಿಡ್ ರಶ್ಮಿಗೂ ನಿಂದಿಸಿದ್ದರು. ನ್ನ...
ಸಿನಿಮಾ

ಕುರುಕ್ಷೇತ್ರ ಸಿನಿಮಾ ನಿರೀಕ್ಷೆಯಲ್ಲಿ ಇರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ !

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ `ಕುರುಕ್ಷೇತ್ರ’ ಚಿತ್ರ ಆರಂಭದಿಂದಲೂ ಕುತೂಹಲ ಮೂಡಿಸಿದೆ. ಬಹು ತಾರಾಗಣದಲ್ಲಿ ನಿರ್ಮಾಣವಾಗಿರುವ ‘ಕುರುಕ್ಷೇತ್ರ’ ದರ್ಶನ್ ಅಭಿನಯದ 50 ನೇ ಚಿತ್ರವಾಗಿದೆ. ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ವಿಶೇಷವಾದ ಸೆಟ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರಕ್ಕೆ ಮುನಿರತ್ನ ಅವರ ಬಂಡವಾಳ ಹಾಕಿದ್ದು, ಅವರ ನಿರ್ಮಾಣದಲ್ಲಿ ಚಿತ್ರ ಮೂಡಿಬರುತ್ತಿದೆ. ಈಗಾಗಲೇ `ಕುರುಕ್ಷೇತ್ರ’ ಚಿತ್ರದ ಆಡಿಯೋ ದುಬಾರಿ ಬೆಲೆಗೆ ಮಾರಾಟವಾಗಿದ್ದು, ಇದೇ ತಿಂಗಳಲ್ಲಿ ಆಡಿಯೋ...
ಸಿನಿಮಾ

‘ನನ್ನ ಮನಸ್ಸೇ, ನನ್ನ ಶತ್ರು’ ಅಂತಾ ಬರೆದಿಟ್ಟು 5ನೇ ಮಹಡಿಯಿಂದ ಜಿಗಿದ ನಿರೂಪಕಿ

ಹೈದರಾಬಾದ್: ನ್ಯೂಸ್ ನಿರೂಪಕಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಹೈದರಾಬಾದ್ ನ ಮೂಸಪೇಟ್‍ನಲ್ಲಿ ನಡೆದಿದೆ. ರಾಧಿಕಾ ರೆಡ್ಡಿ(36) ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ. ರಾಧಿಕಾ ಖಿನ್ನತೆಯಿಂದ ಬಳಲುತ್ತಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ನಂತರ ನೇರವಾಗಿ ಟೆರೇಸ್‍ಗೆ ಹೋಗಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಕ್ಕಟ್ ಪಲ್ಲಿಯ ಸಬ್ ಇನ್ಸ್ ಪೆಕ್ಟರ್ ಮಜಿದ್ ತಿಳಿಸಿದ್ದಾರೆ. RADHIKA-REDDY ರಾಧಿಕಾ 5ನೇ ಮಹಡಿಯಿಂದ ಜಿಗಿದ್ದಾಗ ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದವು....
ಸಿನಿಮಾ

‘ಕೆಲವು ದಿನಗಳ ನಂತರ’ ಮಗು ಜೊತೆ ಬಂದ ಶುಭಾ ಪೂಂಜಾ…!!?

ಬೆಂಗಳೂರು: ಮೊಗ್ಗಿನ ಮನಸ್ಸಿನ ಸುಂದರಿ ಶುಭಾ ಪೂಂಜಾ ‘ಕೆಲವು ದಿನಗಳ ನಂತರ’ ಎಂಬ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಗೂಗಲ್ ಚಿತ್ರದಲ್ಲಿ ಗೃಹಿಣಿ ಪಾತ್ರದಲ್ಲಿ ನಟಿಸುವ ಮೂಲಕ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಇಂದಿನ ಯುವ ಜನತೆಯ ಸಮಸ್ಯೆಯ ಕುರಿತು “ಕೆಲವು ದಿನಗಳ ನಂತರ” ಎಂಬ ತಯಾರಾಗುತ್ತಿದ್ದು, ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಸಿನಿಮಾವಾಗಿದೆ. ಕೆಲವು ದಿನಗಳ ನಂತರ ಸಿನಿಮಾದ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ...
ಸಿನಿಮಾ

ಬಾಲಿವುಡ್ ಚೆಲುವೆ ದೀಪಿಕಾ ಮದ್ವೆ ದಿನಾಂಕ ಕನ್ಫರ್ಮ್ !

ಮುಂಬೈ: ಬಾಲಿವುಡ್‍ನ್ ಪ್ರಣಯ ಪಕ್ಷಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್‍ವೀರ್ ಸಿಂಗ್ ಇಬ್ಬರು ಮದುವೆ ಇದೇ ವರ್ಷ ಆಗಲಿದೆ ಅಂತಾ ಕುಟುಂಬ ಮೂಲಗಳು ತಿಳಿಸಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿಯೇ ದೀಪಿಕಾ ಮದುವೆ ಶಾಪಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿಯೊಂದು ಸಹ ಹರಿದಾಡಿತ್ತು. ಈ ಹಿಂದೆ ದೀಪಿಕಾ ಮತ್ತು ರಣ್‍ವೀರ್ ಇದೇ ವರ್ಷ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ಪ್ರಕಟವಾಗಿತ್ತು. ಆದ್ರೆ ಯಾವಾಗ, ಎಲ್ಲಿ, ಹೇಗೆ ಎಂಬುದರ ಬಗ್ಗೆ ಮಾಹಿತಿಗಳನ್ನು ಕುಟುಂಬಸ್ಥರು ರಿವೀಲ್ ಮಾಡಿರಲಿಲ್ಲ....
ಸಿನಿಮಾ

ಸ್ವಚ್ಛ ಭಾರತ್ ಅಭಿಯಾನಕ್ಕೆ ಸಿನಿಮಾ ಮೂಲಕ ಹಣ ಒದಗಿಸಿದ ಬಾಲ ಕಲಾವಿದೆ – ಕಹಳೆ ನ್ಯೂಸ್

ಬೆಂಗಳೂರು : ಕನ್ನಡ ಸಿನಿಮಾ ಸಂದಾಸ್ ಮಕ್ಕಳ ಸಿನಿಮಾದಲ್ಲಿ ನಟಿಸಿರುವ 14 ವರ್ಷದ ಬಾಲ ಕಲಾವಿದೆ ಪ್ರತ್ಯಕ್ಷ ರಾಮಕೃಷ್ಣ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಜವಾಬ್ದಾರಿಗಳನ್ನು ತೋರಿಸುತ್ತಾಳೆ.ಈ ಚಿತ್ರದ ನಿರ್ದೇಶಕ ಅಜಯ್ ಕುಮಾರ್ ಎ.ಜೆ. ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪ್ರತ್ಯಕ್ಷ ಚಿತ್ರಕ್ಕಾಗಿ ತಯಾರಿ ನಡೆಸಲು ದಾನಾಪುರ ಎಂಬ ಗ್ರಾಮಕ್ಕೆ ಎರಡು ತಿಂಗಳು ಹೋಗಿ ತಯಾರಿ ನಡೆಸುತ್ತಿದ್ದಳು. ಚಿತ್ರದಲ್ಲಿ ಮಲ್ಲಮ್ಮ ಎಂಬ ಹುಡುಗಿ ತನ್ನ ಗ್ರಾಮದಲ್ಲಿ ಶೌಚಾಲಯವಿಲ್ಲವೆಂದು ಸತತ ಮೂರು ದಿನಗಳ ಕಾಲ...
1 5 6 7 8 9
Page 7 of 9