Saturday, September 21, 2024

archiveCommonwealth country

ಸುದ್ದಿ

ಕಾಮನ್‍ವೆಲ್ತ್ ದೇಶಗಳ ಜನರನ್ನು ನೇಮಿಸಿಕೊಳ್ಳಲು ಇಂಗ್ಲೆಂಡ್ ಸರಕಾರ ಅನುಮತಿ – ಕಹಳೆ ನ್ಯೂಸ್

ಇಂಗ್ಲೆಂಡ್ ಸೇನೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸುವುದಕ್ಕಾಗಿ ಕಾಮನ್‍ವೆಲ್ತ್ ದೇಶಗಳ ಜನರನ್ನೂ ನೇಮಿಸಿಕೊಳ್ಳಲು ಇಂಗ್ಲೆಂಡ್ ಸರಕಾರ ಅನುಮತಿ ನೀಡಿದೆ. ಇದರಿಂದಾಗಿ ಭಾರತ ಸೇರಿದಂತೆ 53 ದೇಶಗಳ ನಾಗರಿಕರು ಇಂಗ್ಲೆಂಡ್‍ನಲ್ಲಿ ವಾಸಿಸುತ್ತಿಲ್ಲದಿದ್ದರೂ, ಸೇನೆಗೆ ಸೇರಲು ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ 5 ವರ್ಷಗಳವರೆಗೆ ಇಂಗ್ಲೆಂಡ್‍ನಲ್ಲಿ ವಾಸಿಸಿದ್ದರೆ ಮಾತ್ರ ಸೇನೆಗೆ ಅರ್ಜಿ ಸಲ್ಲಿಸುವ ಅವಕಾಶವಿತ್ತು. 18 ವರ್ಷಕ್ಕಿಂತ ಮೇಲ್ಪಟ್ಟವರು ಇನ್ನು ಇಂಗ್ಲೆಂಡ್ ಸೇನೆಯ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 2016ರಲ್ಲಿ ಕೆಲವು ಕೌಶಲದ ಹುದ್ದೆಗಳಿಗೆ ವಿನಾಯಿತಿ...