Recent Posts

Monday, January 20, 2025

archiveCricket star

ಸುದ್ದಿ

ಸ್ನಾತಕೋತ್ತರ ವಿಷಯದ ಅಧ್ಯಯನದಲ್ಲಿ ಅವಕಾಶ ವಿಸ್ತಾರ : ನಿರಂಜನ್

ಪುತ್ತೂರು: ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವನ್ನು ಮಾಡಿಕೊಡುತ್ತದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಯೋಜನೆ ಹಾಕಿಕೊಳ್ಳಬೇಕು. ಮಾರುಕಟ್ಟೆ ವ್ಯವಸ್ಥೆಯು ತುಂಬ ಸವಾಲುಗಳಿಂದ ಕೂಡಿದೆ. ಅದನ್ನೆದುರಿಸುವುದಕ್ಕೆ ವಿದ್ಯಾರ್ಥಿಗಳಾಗಿದ್ದಾಗಲೆ ಸಿದ್ಧರಾಗಬೇಕು ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಹಿರಿಯ ವಿದ್ಯಾರ್ಥಿ ನಿರಂಜನ್ ತಿಳಿಸಿದರು. ಅವರು ಕಾಲೇಜಿನಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗವು ಆಯೋಜಿಸಿದ ಹಿರಿಯ ವಿದ್ಯಾರ್ಥಿಗಳ ವೇದಿಕೆ ಪಯಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂದರ್ಶನ ಎನ್ನುವ ಐದು ನಿಮಿಷದ ಪರೀಕ್ಷೆ ನಮ್ಮ ಜೀವನವನ್ನು...