Thursday, September 19, 2024

archiveDeepavali

ಸುದ್ದಿ

ಬಾಯೊಳಗೆ ಸಿಡಿದ ಪಟಾಕಿ: ಬಾಲಕಿ ಗಂಭೀರ ಗಾಯ – ಕಹಳೆ ನ್ಯೂಸ್

ಮೀರತ್‌: ಹುಡುಗನೊಬ್ಬ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಬಾಯೊಳಗೆ ಪಟಾಕಿ ಇಟ್ಟು ಸಿಡಿಸಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಆರೋಪಿ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಬಾಲಕಿಯ ತಂದೆ ಶಶಿ ಕುಮಾರ್ ಈ ಕುರಿತು ದೂರಿನಲ್ಲಿ ಕೆಲವು ಅಂಶಗಳನ್ನು ಹೇಳಿಕೊಂಡಿದ್ದು, ಗ್ರಾಮದ ಹರ್ಪಾಲ್ ಎಂಬಾತ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಬಳಿ ಬಂದು...
ಸುದ್ದಿ

ರಾತ್ರಿ 8ರಿಂದ 10ರ ಹೊರತು ಇತರೆ ವೇಳೆಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವವರ ವಿರುದ್ಧ ಕಠಿಣ ಕ್ರಮ – ಕಹಳೆ ನ್ಯೂಸ್

ದೀಪಾವಳಿ ಸಮಯದಲ್ಲಿ ಪಟಾಕಿ, ಸುಡುಮದ್ದುಗಳ ಬಳಕೆಗೆ ಸುಪ್ರೀಂ ಕೋರ್ಟ್ ಹೇರಿರುವ ನಿರ್ಬಂಧ ಆದೇಶವನ್ನು ರಾಜ್ಯ ಪೋಲೀಸರು ಕಟ್ಟುನಿಟ್ಟಾಗಿ ಪಾಲನೆಗೆ ತರಲು ಮುಂದಾಗಿದ್ದಾರೆ. ರಾತ್ರಿ 8ರಿಂದ 10ರ ಹೊರತು ಇತರೆ ವೇಳೆಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೋಲೀಸ್ ಇಲಾಖೆ ಎಚ್ಚರಿಸಿದೆ. ಯಾರಾದರೂ ನಿಗದಿತ ಸಮಯದ ಹೊರತಾಗಿ ಪಟಾಕಿಗಳನ್ನು ಹಚ್ಚಿದ್ದು ಕಂಡುಬಂದರೆ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತೆ. ದೂರು ಪಡೆದು...
ಸುದ್ದಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾ ತೈಲ ಬೆಲೆ ಇಳಿಕೆ: ನೆಮ್ಮದಿ ಮೂಡಿಸಿದ ತೈಲ ಬೆಲೆ – ಕಹಳೆ ನ್ಯೂಸ್

ದೆಹಲಿ: ಕಳೆದ ತಿಂಗಳು ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೆ ಏರಿದ್ದರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೀಗ ಕಳೆದ 18 ದಿನದಿಂದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ 18 ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 4 ರೂಪಾಯಿ ಹಾಗೂ ಡಿಸೇಲ್ ದರದಲ್ಲಿ 2.33 ರೂಪಾಯಿ ಕಡಿತವಾಗಿದ್ದು, ಇದೀಗ ದೆಹಲಿಯಲ್ಲಿ ಪೆಟ್ರೋಲ್ ದರ 78.78 ಹಾಗೂ ಡಿಸೇಲ್ ದರದಲ್ಲಿ 73.36 ರೂ.ಗೆ ಕುಸಿದಿದೆ. ಕಚ್ಚಾ ತೈಲ ಬೆಲೆ ಕುರಿತಂತೆ ಕೆಲ ದಿನಗಳ ಹಿಂದೆ...
ಸುದ್ದಿ

ಪಂದ್ಯಕ್ಕೆ ಮೊದಲು ವಿಶೇಷ ರೀತಿಯಲ್ಲಿ ದೀಪಾವಳಿ ಆಚರಿಸಿರುವ ವಿರಾಟ್ ಕೊಹ್ಲಿ – ಕಹಳೆ ನ್ಯೂಸ್

ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ದ ಐದನೇ ಪಂದ್ಯಕ್ಕೆ ಸಜ್ಜಾಗಿರುವ ಜೊತೆಗೆ ಪಂದ್ಯಕ್ಕೂ ಮುನ್ನ ದಿನಾ ದೀಪಾವಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ. ತಿರುವನಂತಪುರದಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನಾ ದಿನ ಮಾನ್ಯವಾರ್ ಜಾಹೀರಾತಿಗೆ ಸಂಬಂಧಿಸಿದಂತೆ ಬಡ ಮಕ್ಕಳೊಂದಿಗೆ ದೀಪಾವಳಿ ಆಚರಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಡ ಮಕ್ಕಳೊಂದಿಗೆ ಶೇರ್ವಾನಿಯಲ್ಲಿ ಕೊಹ್ಲಿ ಮಿಂಚಿದ್ದು, ದೀಪಾವಳಿಯ ದೀಪಗಳಿಗಿಂತ ಈ ಮಕ್ಕಳಲ್ಲಿ ಹೆಚ್ಚು ಹೊಳಪಿದೆ ಎಂದು ಬರೆದುಕೊಂಡಿರುವ...
ಸುದ್ದಿ

ಬಿಲಿಯಾಧಿಪತಿ ವಜ್ರದ ವ್ಯಾಪಾರಿಯಿಂದ ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್- ಕಹಳೆ ನ್ಯೂಸ್

ಸೂರತ್ : ದೀಪಾವಳಿ ಪ್ರಯುಕ್ತ ತಿಂಡಿ ತಿನಸು ಕೊಡೋದು ವಾಡಿಕೆ ಆದರೆ ಸೂರತ್ ಮೂಲದ ಬಿಲಿಯಾಧಿಪತಿ ವಜ್ರದ ವ್ಯಾಪಾರಿ ಸಾವ್ಜಿ ಡೋಲಕಿಯಾ ಅವರು ತನ್ನ ಉದ್ಯೋಗಿಗಳಿಗೆ ದೀಪಾವಳಿಗೆ ಬೋನಸ್ ರೂಪದಲ್ಲಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುಮಾರು 600 ಮಂದಿ ಉದ್ಯೋಗಿಗಳಿಗೆ ಕಂಪೆನಿ ವತಿಯಿಂದ ಡೋಲಕಿಯಾ ಕಾರನ್ನು ಈ ವರ್ಷದ ದೀಪಾವಳಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಕೆಲವು ಮಂದಿ ಉದ್ಯೋಗಿಗಳಿಗೆ ಆಭರಣ ಮತ್ತು ಫ್ಲ್ಯಾಟ್ ಕೂಡ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ತನ್ನ...
ಸುದ್ದಿ

ದೀಪಾವಳಿಗೆ ಚಿನ್ನ ಖರೀದಿಸಬೇಕೆಂದುಕೊಂಡ ಗ್ರಾಹಕರಿಗೆ ಬಿಗ್ ಶಾಕ್ – ಕಹಳೆ ನ್ಯೂಸ್

ಬೆಂಗಳೂರು: ದೀಪಾವಳಿಗೆ ಚಿನ್ನ ಖರೀದಿಸಬೇಕು ಅಂದುಕೊಂಡಿದ್ದ ಗ್ರಾಹಕರಿಗೆ ಬಿಗ್ ಶಾಕ್. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಹೌದು, ದೀಪಾವಳಿ ಹಾಗೂ ಮದುವೆ ಸೀಸನ್ ಸಮಾರಂಭಗಳ ಸೀಸನ್ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಕೂಡ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ಚಿನ್ನದ ದರ ಏರಿಕೆಯಾಗಿದೆ. ಸದ್ಯ ಚಿನ್ನದ ದರ 10 ಗ್ರಾಂ ಗೆ 150 ರೂ. ಏರಿಕೆ ಕಂಡಿದ್ದು, ಮೂರು ತಿಂಗಳ ಹಿಂದೆ 32,350 ರೂ. ಇದ್ದ ಚಿನ್ನದ ಬೆಲೆ ಈಗ 32,500...
ಸುದ್ದಿ

ಪಟಾಕಿ ಸಿಡಿಸುವುದಕ್ಕೆ ಅಸ್ತು ಎಂದ ಸುಪ್ರೀಂ ಕೋರ್ಟ್ – ಕಹಳೆ ನ್ಯೂಸ್

ದೆಹಲಿ: ವೈಭವದ ದಸರಾ ಕಳೆದಾಯ್ತು ಇನ್ನು ಬರೋದು ದೀಪಗಳ ಹಬ್ಬ ದೀಪಾವಳಿ. ದೀಪಾವಳಿ ಸಮಯದಲ್ಲಿ ದೇಶದಾದ್ಯಂತ ಪಟಾಕಿ ತಯಾರಿಕೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ದೀಪಾವಳಿ ಹಬ್ಬದಲ್ಲಿ ದೇಶದಾದ್ಯಂತ ರಾತ್ರಿ 8 ರಿಂದ 10 ಗಂಟೆಯ ಮಧ್ಯೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಅದು ಆದೇಶಿಸಿದೆ. ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ...