ಕೈದಿಯನ್ನು ಭೇಟಿ ಮಾಡಲು ಬಂದಾಕೆಯ ಬಂಧನ: ಗಾಂಜಾ, ಮೊಬೈಲ್ ವಶ – ಕಹಳೆ ನ್ಯೂಸ್
ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನಿಗೆ ಗಾಂಜಾ ಹಾಗೂ ಮೊಬೈಲ್ ನ್ನು ನೀಡಲು ಪ್ರಯತ್ನಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಸ್ತಫಾ ಎಂಬ ವಿಚಾರಣಾಧೀನ ಕೈದಿಯನ್ನು ಭೇಟಿಯಾಗಲು ಅನುಮತಿಯನ್ನು ಪಡೆದು ಬಂದಿದ್ದ ವಿದ್ಯಾರ್ಥಿನಿ ಆತನಿಗೆ ನೀಡಲು ಗಾಂಜಾ ಹಾಗೂ ಮೊಬೈಲ್ ನ್ನು ತಂದಿದ್ದಾಳೆ. ಖಚಿತ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಬಂದ ಸಿಸಿಬಿ ಇನ್ಸ್ ಪೆಕ್ಟರ್ ಶಾಂತಾರಾಮ, ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯನ್ನು...