ಕನ್ನಡ ರಾಜ್ಯೋತ್ಸವ: ಆಡುಮಾತಿನಿಂದ ಭಾಷೆಯ ಉಳಿವು: ಡಾ. ಎಚ್. ಜಿ. ಶ್ರೀಧರ – ಕಹಳೆ ನ್ಯೂಸ್
ಅಡ್ಯನಡ್ಕ: ಒಂದು ಭಾಷೆಯನ್ನು ಆಡುಮಾತಾಗಿ ಬಳಸಿಕೊಳ್ಳುವ ಮೂಲಕ ಆ ಭಾಷೆಯನ್ನು ಉಳಿಸಬಹುದು. ಜಾಗತೀಕರಣದ ಸಂದರ್ಭದಲ್ಲಿ ಬೇರೊಂದು ಭಾಷೆಯನ್ನು ಅನಿವಾರ್ಯವಾಗಿ ರೂಢಿಸಿಕೊಂಡರೂ ಆಡುಮಾತಾಗಿ ಕನ್ನಡವನ್ನು ಉಪಯೋಗಿಸಿದರೆ ಭಾಷೆಯನ್ನು ರಕ್ಷಿಸಿದಂತಾಗುತ್ತದೆ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ. ಶ್ರೀಧರ ಅಭಿಪ್ರಾಯಪಟ್ಟರು. ಅವರು ನ.1ರಂದು ಅಡ್ಯನಡ್ಕ ಜನತಾ ಪ.ಪೂ.ಕಾಲೇಜು ಮತ್ತು ಜನತಾ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಸಾಹಿತ್ಯ ಸಂಘದ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು....