ಮಹಾನಂದಿ ಗೋಲೋಕದಲ್ಲಿ ದೀಪಾವಳಿ ಸಾಮೂಹಿಕ ‘ಗೋಪೂಜೆ’ – ಕಹಳೆ ನ್ಯೂಸ್
ವಿಶ್ವಜನನಿ ಗೋಮಾತೆಯ ವಿರಾಟ್ ಸ್ವರೂಪದ ದರ್ಶನಮಾಡಿಸುವ 'ಮಹಾನಂದಿ ಗೋಲೋಕ' ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿದ್ದು, ದೀಪಾವಳಿ ಪ್ರಯುಕ್ತ ವಿಶೇಷ ಸಾಮೂಹಿಕ ಗೋಪೂಜಾ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 9.00 ರಿಂದ ಮಹಾನಂದಿ ಗೋಲೋಕದಲ್ಲಿ ಆಯೋಜಿಸಲಾಗಿದೆ. ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ 'ಮಹಾನಂದಿ ಗೋಲೋಕ'ವು ಕಳೆದೆರಡು ದಶಕಗಳಿಂದ ಗೋಸಂರಕ್ಷಣೆ - ಗೋಸಂವರ್ಧನೆ - ಗೋಸಂಬೋಧನೆ ಹಾಗೂ ಗೋಸಂಶೋಧನೆಯ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದು, ನಾಡಿನ ವೈವಿಧ್ಯಮಯ ದೇಶೀ ಗೋತಳಿಗಳಿರುವ ವಿಶಿಷ್ಟ ಗೋಕೇಂದ್ರವಾಗಿ...