ಅರಮನೆ ನಗರಿಯ ರಾಜಪಥ ಸಿಂಗಾರಗೊಂಡ ದಸರಾ ಜಂಬೂಸವಾರಿ – ಕಹಳೆ ನ್ಯೂಸ್
ಮೈಸೂರು: ಜನಮನ ಸೆಳೆಯುವ, ಕಣ್ಮನ ತಣಿಸುವ, ಸಾಂಸ್ಕೃತಿಕ ಶ್ರೀಮಂತಿಕೆಯ ದಸರಾ ಜಂಬೂಸವಾರಿಗೆ ಅರಮನೆಗಳ ನಗರಿಯ ರಾಜಪಥ ಸಿಂಗಾರಗೊಂಡಿದೆ. ಬೆಳಕಿನ ವೈಭವ ಅದಕ್ಕೆ ಮತ್ತಷ್ಟು ಮೆರುಗು ತುಂಬಿದ್ದು 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಸಾಗುವ ಕ್ಯಾಪ್ಟನ್ ಅರ್ಜುನ ಸಾರಥ್ಯದ ಗಜಪಡೆಯ ವಯ್ಯಾರ ಕಣ್ತುಂಬಿಕೊಳ್ಳುವ ಕಾತರ ಎಲ್ಲರ ಮನದಲ್ಲಿ ಈಗ ಜೋರಾಗಿದೆ. ನಾಡಹಬ್ಬದ ಪ್ರಧಾನ ಆಕರ್ಷಣೆ ವಿಶ್ವಪ್ರಸಿದ್ಧ ಜಂಬೂಸವಾರಿಯಾಗಿದ್ದು ನಾಳೆ ಈ ಉತ್ಸವ ನಡೆಯಲಿದೆ. ಈ ವೈಭವಕ್ಕಾಗಿ ಮಳೆ ನಡುವೆಯೇ ಸಾಂಸ್ಕೃತಿಕ...