ಗುರುಪುರ ಮಠದಗುಡ್ಡೆಯ 48 ಕುಟುಂಬಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಹಕ್ಕುಪತ್ರ ವಿತರಣೆ – ಕಹಳೆ ನ್ಯೂಸ್
ಗುರುಪುರ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆಯಲ್ಲಿ ಕಳೆದ ವರ್ಷ(ಜು. 5) ಸಂಭವಿಸಿದ ಭೂಕುಸಿತ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರದೇಶದ 48 ಕುಟುಂಬಗಳಿಗೆ ಹಾಗೂ ಅಡ್ಡೂರು ಗ್ರಾಮದ ಒಂದು ಕುಟುಂಬಕ್ಕೆ ಮಂಗಳವಾರ ಗುರುಪುರ ಕೈಕಂಬದ ಖಾಸಗಿ ಸಭಾಗೃಹವೊಂದರಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹಕ್ಕುಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಶಾಸಕನಾದ ಬಳಿಕ ಕ್ಷೇತ್ರ...