‘ಮತಾಂತರದ ಹೆಚ್ಚುತ್ತಿರುವ ಸಮಸ್ಯೆ : ಅದಕ್ಕೆ ಉಪಾಯವೇನು ?’ ಹಿಂದೂ ಜನಜಾಗೃತಿ ಸಮಿತಿಯಿಂದ ವಿಶೇಷ ಚರ್ಚಾಗೋಷ್ಠಿ ! – ಕಹಳೆ ನ್ಯೂಸ್
ಮತಾಂತರದ ಸಮಸ್ಯೆಯು ಭಾರತದ ಸ್ವಾತಂತ್ರ್ಯಪೂರ್ವದಿಂದಲೇ ಇದೆ. ವಿದೇಶಿ ಆಕ್ರಮಣಕಾರರು ಭಾರತವನ್ನು ಕೇವಲ ಅಧಿಕಾರವನ್ನು ಗಳಿಸಲು ಮಾತ್ರವಲ್ಲ, ಬದಲಾಗಿ ಭಾರತವನ್ನು ‘ಗಝವಾ-ಎ-ಹಿಂದ್’ (ಇಸ್ಲಾಮಿಕ್ ರಾಜ್ಯ) ವನ್ನಾಗಿ ಮಾಡಲು ಆಕ್ರಮಣ ಮಾಡಿದ್ದರು. ಇಂದು ಮತಾಂತರಕ್ಕಾಗಿ ವಿದೇಶದಿಂದ ‘ಹವಾಲಾ’ ಮತ್ತು ‘ಕಪ್ಪು ಹಣ’ಗಳ ಮಾಧ್ಯಮದಿಂದ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತಿದೆ. ಕೇವಲ ಮಿಷನರಿ-ಮತಾಂಧರು ಮಾತ್ರವಲ್ಲ; ನಕ್ಸಲರು, ಮಾವೋವಾದಿಗಳು, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರಿಗೆ ಹವಾಲಾದ ಮೂಲಕ ಹಣವನ್ನು ಎಲ್ಲೆಡೆಗಳಲ್ಲಿ ತಲುಪಿಸಲಾಗುತ್ತಿದೆ. ಇದರಿಂದ, ‘ಹವಾಲಾ’ ಮತ್ತು ‘ಕಪ್ಪು...