ಪತ್ರಕರ್ತನಾಗಿ ಕ್ಷೇತ್ರಕ್ಕಿಳಿದಾಗ ವರ್ತಮಾನದ ಸವಾಲುಗಳ ಅನುಭವ : ಜಯಶಂಕರ್
ಪುತ್ತೂರು: ಪತ್ರಕರ್ತನಾಗಿ ಕ್ಷೇತ್ರಕ್ಕಿಳಿದಾಗ ವರ್ತಮಾನದ ಸವಾಲುಗಳು ಕಾಡಲಾರಂಭಿಸುತ್ತವೆ. ತರಗತಿಯ ಒಳಗೆ ಕುಳಿತು ನೋಡುವ ಪತ್ರಿಕೋದ್ಯಮಕ್ಕೂ, ಹೊರಗೆ ಕಾಣುವ ಪತ್ರಿಕೋದ್ಯಮಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಗಡುವುಗೆರೆಯ ಮಹತ್ವ ಪತ್ರಕರ್ತರಾದಾಗ ಸರಿಯಾಗಿ ಅರ್ಥವಾಗುತ್ತದೆ. ನಮ್ಮನ್ನು ನಾವು ಎಷ್ಟು ವೇಗವಾಗಿ ರೂಪಿಸಿಕೊಳ್ಳುತ್ತೇವೆ ಎನ್ನುವುದು ಪತ್ರಿಕೋದ್ಯಮದಲ್ಲಿ ಮುಖ್ಯವೆನಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ, ಮಡಿಕೇರಿಯ ಪತ್ರಕರ್ತ ಜಯಶಂಕರ್ ಜೆ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ...