ಜೀವನದಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಏಕಾಏಕಿ ಹೆಚ್ಚು – ಕಹಳೆ ನ್ಯೂಸ್
ಮಂಗಳೂರು: ಪಶ್ಚಿಮಘಟ್ಟ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಗುರುವಾರ ಏಕಾಏಕಿ ಹೆಚ್ಚಾಗಿದೆ. ಸದ್ಯಕ್ಕೆ ತುಂಬೆಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 8.7 ಮೀಟರ್ ಗಳಷ್ಟಿದೆ. ಇಲ್ಲಿ ನದಿಯ ಅಪಾಯದ ಮಟ್ಟ 9 ಮೀಟರ್‍ಗಳಾಗಿದೆ. ನೇತ್ರಾವತಿ ನೆರೆಯಿಂದಾಗಿ ಬಂಟ್ವಾಳ ನಗರ ಸೇರಿದಂತೆ ಅಜಿಲಮೊಗರು, ಸರಪಾಡಿ, ಕಡೇಶಿವಾಲಯ, ಬರಿಮಾರು, ನಾವೂರು, ನರಿಕೊಂಬು, ತುಂಬೆ ಮೊದಲಾದ ಗ್ರಾಮಗಳ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಬಹುತೇಕ ಕಡೆ ಅಡಿಕೆ...