Recent Posts

Sunday, January 19, 2025

archiveKahae news

ಸುದ್ದಿ

ಹಿಂದೂ ಜಾಗರಣ ವೇದಿಕೆ ಮಂಗಳಪದವು ಘಟಕ, ಶಿವಾಜಿ ಶಾಖೆ ಪುನರ್ ರಚನೆ ಉದ್ಘಾಟನಾ ಕಾರ್ಯಕ್ರಮ – ಕಹಳೆ ನ್ಯೂಸ್

ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವೀರಕಂಭ ಗ್ರಾಮದ ಮಂಗಲಪದವು ಶ್ರೀ ಮಲರಾಯ ದೈವಸ್ಥಾನ ಸಿಮ್ಲಾಜೆ ಗುತ್ತು ಎಂಬಲ್ಲಿ ಶಿವಾಜಿ ಘಟಕದ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖರಾದ ನರಸಿಂಹ ಶೆಟ್ಟಿ ಮಾಣಿ , ತಾಲೂಕು ಅಧ್ಯಕರು ಗಣೇಶ್ ಕುಲಾಲ್ ಕೆದಿಲ, ತಾಲೂಕು ಕಾರ್ಯದರ್ಶಿ ಹರ್ಷೇಂದ್ರ ,ಮಂಡಲ ಮಾಧ್ಯಮ ಸಂಚಾಲಕರಾದ ದೇವಿ ಪ್ರಸಾದ್ ಶೆಟ್ಟಿ, ವೀರಕಂಭ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರು...
ಸುದ್ದಿ

7,8,9ನೇ ತರಗತಿಗೆ ಪರೀಕ್ಷೆ ಇಲ್ಲ – SSLC, ಪಿಯುಸಿ ಪರೀಕ್ಷೆ ಬಗ್ಗೆ ಏ. 14ರ ನಂತರ ನಿರ್ಧಾರ – ಕಹಳೆ ನ್ಯೂಸ್

ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಆದೇಶದಂತೆ ದೇಶಾದ್ಯಂತ ಲಾಕ್‍ಡೌನ್ ಮಾಡಲಾಗಿದೆ. ರಾಜ್ಯದಲ್ಲೂ ಲಾಕ್‍ಡೌನ್ ಜಾರಿಯಲ್ಲಿರುವ ಕಾರಣ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಕೆಲ ಗೊಂದಲಗಳು ಇವೆ. ಹೀಗಾಗಿ ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಫೇಸ್‍ಬುಕ್ ಲೈವ್ ವಿಡಿಯೋ ಮೂಲಕ ಗೊಂದಲಗಳಿಗೆ ಸ್ಪಷ್ಟಣೆ ನೀಡಿದ್ದಾರೆ. https://www.facebook.com/100000520624203/videos/3359678524059469/   ಪರೀಕ್ಷೆಗಳ ಬಗ್ಗೆ ಮಾತನಾಡಿದ ಸಚಿವರು, 7,8,9, ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆ ಕುರಿತು ಇರುವ ಗೊಂದಲಗಳಿಗೆ ಸ್ಪಷ್ಟೀಕರಣ...
ರಾಜಕೀಯ

ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ: ಕಠಿಣ ಕ್ರಮಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ ಸೂಚನೆ – ಕಹಳೆ ನ್ಯೂಸ್

ಬೆಂಗಳೂರು, ಏ.2-ಜನರ ಆರೋಗ್ಯದ ಪರಿಶೀಲನೆಗೆ ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎ.ಅಶ್ವತ್ಥಾರಾಯಣ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ದೂರು ಸ್ವೀಕರಿಸದ ಪೊಲೀಸರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಕೃಷ್ಣ ವೇಣಿ ಅವರನ್ನು ಹೆಗಡೆ ನಗರದ ಅವರ ಮನೆಯಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿದ ನಂತರ ಈ ಸೂಚನೆ ನೀಡಿದ್ದಾರೆ.   ಆಶಾ ಕಾರ್ಯರ್ತೆಯರಿಗಾದ ನೋವು ಆಲಿಸಿದ...
ಸುದ್ದಿ

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ; ತಂತ್ರಿಗಳ ನೇತೃತ್ವದಲ್ಲಿ ಅರ್ಚಕರು ಹಾಗೂ ಸೀಮಿತ ನೌಕರರಿಂದ ಜಾತ್ರೆಗೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು: ಐತಿಹಾಸಿಕ ಮಹಾಲಿಂಗೇಶ್ವರನ ವರ್ಷಾವಧಿ ಜಾತ್ರೆಗೆ ಇಂದು ಏಪ್ರಿಲ್ 1ರಂದು ಗೊನೆ ಮುಹೂರ್ತ ನಡೆಯಿತು. ಸುಮಾರು 9.35ರ ಮುಂಜಾನೆ ಮುಹೂರ್ತದಲ್ಲಿ ಮುಖ್ಯ ಅರ್ಚಕರಾದ ವೆಂಕಟೇಶ ಸುಬ್ರಮಣ್ಯ ಭಟ್ ಹಾಗೂ ವಸಂತ ಕುಮಾರ್ ಕೆದಿಲಾಯ ಜೊತೆಗೂಡಿ ಗೊನೆ ಮುಹೂರ್ತ ನೆರೆವೇರಿಸಿದರು. ಈ ವೇಳೆ ಶಾಸಕರಾದ ಸಂಜೀವ ಮಟಂದೂರು, ಜಗನ್ನಿವಾಸ್ ರಾವ್, ಆಡಳಿತ ಅಧಿಕಾರಿ ಲೋಕೇಶ್ ಪಿ, ನವೀನ್ ಭಂಡಾರಿ, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್...
ಸುದ್ದಿ

ಬಂಟ್ವಾಳದ ಮುಡ್ಡಾಲ್ ಗುಡ್ಡೆ ಎಂಬಲ್ಲಿ ಅಪಘಾತ ; ಚಾಲಕ ಅಪಾಯದಿಂದ ಪಾರು – ಕಹಳೆ ನ್ಯೂಸ್

ಬಂಟ್ವಾಳ : ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾತ್ರಿ ಬಂಟ್ವಾಳದಲ್ಲಿ ನಡೆದಿದೆ. ಬಡಗಬೆಳ್ಳೂರು ನಿವಾಸಿ ಅಬ್ದುಲ್ ತನಜೀರ್ ಅತನ ಸ್ನೇಹಿತನ ವಾಹನ ಪಡೆದು ಮನೆಗೆ ಬರುತ್ತಿದ್ದ ಎಂದು ಹೇಳಲಾಗುತ್ತಿದೆ. ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಧರ್ಮಸ್ಥಳ ಮಂಗಳೂರು ನಡುವೆ ಜಕ್ರಿಬೆಟ್ಟು ಸಮೀಪದ ಮುಡ್ಡಾಲ್ ಗುಡ್ಡೆ ಎಂಬಲ್ಲಿ ಅತೀ ವೇಗದಿಂದ ಜೀಪೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಗುಡ್ಡ ಏರಿದ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಚಾಲಕನಿಗೆ ಅಲ್ಪ ಸ್ವಲ್ಪ...
ಸುದ್ದಿ

ಸೊಮಾಲಿಯಾದಲ್ಲಿ ಉಗ್ರರ ದಾಳಿ: ಕಾರು ಬಾಂಬ್​ ಸ್ಫೋಟ, ಗುಂಡಿನ ದಾಳಿಗೆ 52 ಮಂದಿ ಸಾವು – ಕಹಳೆ ನ್ಯೂಸ್

ಸೊಮಾಲಿಯಾ: ಆಫ್ರಿಕಾದ ಸೊಮಾಲಿಯಾ ರಾಜ್ಯದ ರಾಜಧಾನಿ ಮೊಗದಿಶುವಿನಲ್ಲಿ ನಡೆದ ಕಾರು ಬಾಂಬ್​ ಸ್ಫೋಟದಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ. ಇಲ್ಲಿನ ಸಹಾಫಿ ಹೋಟೆಲ್​ ಬಳಿ ಒಂದೇ ನಿಮಿಷದಲ್ಲಿ ಎರಡು ಬಾಂಬ್​ಗಳು ಸ್ಫೋಟಿಸಿವೆ. ಈ ಹೋಟೆಲ್​ ಸೋಮಾಲಿ ಪೊಲೀಸ್​ ಫೋರ್ಸ್​ನ ಸಿಐಡಿ ಮುಖ್ಯಕಚೇರಿ ಸಮೀಪವೇ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಾಲ್ವರು ಉಗ್ರರು ಒಮ್ಮೆಲೇ ಹೋಟೆಲ್​ ನ ಮೇಲ್ಛಾವಣಿಗೆ ಹೋಗಿ ಅಲ್ಲಿಂದ ಕೆಳಗೆ ಕುಳಿತಿರುವ ಜನರಿಗೆ ಜನರ...
ಸುದ್ದಿ

ಖಾಕಿ ಬಿಗಿ ಭದ್ರತೆ, ನಿಷೇಧಾಜ್ಞೆಯ ನಡುವೆ ನ. 5ರಂದು ತೆರೆಯಲಿದೆ ಶಬರಿಮಲೆ – ಕಹಳೆ ನ್ಯೂಸ್

ತಿರುವನಂತಪುರ, 04 : ಚಿತ್ತಿರಆಟ್ಟತ್ತಿರುನಾಳ್ ಪ್ರಯುಕ್ತ ನವೆಂಬರ್ 5ರಂದು ಶಬರಿಮಲೆ ಬಾಗಿಲು ತೆರೆಯಲಿದೆ. ಸೋಮವಾರ ಸಂಜೆ 5 ಗಂಟೆಗೆ ದೇಗುಲ ದ್ವಾರ ತೆರೆಯಲಿದ್ದು, ಮಂಗಳವಾರ ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತದೆ. ಆದರೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಎರಡನೇ ಬಾರಿಗೆ ಶಬರಿಮಲೆ ದೇಗುಲ ಸೋಮವಾರ ತೆರೆಯಲಿದೆ. ಆದರೆ ಈ ಬಾರಿ ದೇಗುಲದ ಬಾಗಿಲು ಕೇವಲ 24 ಗಂಟೆಗಳವರೆಗೆ ತೆರೆಯಲಿದೆ. ಆದರೂ ಗಲಾಟೆ ಗದ್ದಲ...
ಸಿನಿಮಾಸುದ್ದಿ

ಮಾಡುವುದೆಲ್ಲಾ ಮಾಡಿ ಸ್ಯಾಂಡಲ್ ವುಡ್ ಸ್ಟಾರ್ ನಟನ ವಿರುದ್ಧ #MeToo ಎಂದ ಹಾಟ್ ಬೆಡಗಿ ಶ್ರುತಿ ಹರಿಹರನ್ – ಕಹಳೆ ನ್ಯೂಸ್

ಬೆಂಗಳೂರು :  ಸ್ಯಾಂಡಲ್ ವುಡ್ ಶೇಕ್ ಆಗುವಂತಹ ಬಿಗ್ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಸ್ಯಾಂಡಲ್ ವುಡ್ ಖ್ಯಾತ ನಟಿ ಶ್ರುತಿ ಹರಿಹರನ್ ಖ್ಯಾತ ನಟನ ಬಗ್ಗೆ ಮೀ ಟೂ ಆರೋಪ ಮಾಡಿದ್ದಾರೆ.  ತಮಗೆ ಪದೇ ಪದೇ ಡಿನ್ನರ್ ಗೆ ಹೋಗೋಣ ಎಂದು ನಟ ಅರ್ಜುನ್ ಸರ್ಜಾ  ಪೀಡಿಸುತ್ತಿದ್ದರು ಎಂದು ಮ್ಯಾಗಜಿನ್ ಒಂದಕ್ಕೆ ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ. ಶ್ರುತಿ ಬರುವುದಿಲ್ಲ ಎಂದರೂ ಕೂಡ ಪದೇ ಪದೇ ಪೀಡಿಸುತ್ತಿದ್ದರು ಎನ್ನಲಾಗಿದ್ದು, ವಿಸ್ಮಯ ಚಿತ್ರದ ವೇಳೆ...
1 2
Page 1 of 2