Saturday, April 26, 2025

archivekahale news

ಸುದ್ದಿ

ಸುರತ್ಕಲ್ ನಲ್ಲಿ ರಸ್ತೆ ಮಧ್ಯದಲ್ಲೇ ಕಾಂಗ್ರೇಸ್ ವೇದಿಕೆ ಪರದಾಡಿದ ಸಾರ್ವಜನಿಕರು ; ಕಾರ್ಯಕರ್ತರನ್ನುದ್ದೇಶಿಸಿ ಪಪ್ಪು ಭಾಷಣ – ಕಹಳೆ ನ್ಯೂಸ್

ಮಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಜಿಲ್ಲೆಗಳ ಜನಾಶೀರ್ವಾದ ಯಾತ್ರೆಯ ರೋಡ್ ಶೋ ನಲ್ಲಿ ಭಾಗವಹಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಮುಲ್ಕಿ ಹಾಗೂ ಸುರತ್ಕಲ್ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ರಸ್ತೆ ಮಾರ್ಗವಾಗಿ ಪ್ರಯಾಣಿಸಿದ್ದರು. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತೆ ದೃಷ್ಠಿಯಿಂದ ರಸ್ತೆಯ ಒಂದು ಕಡೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು....
ಸುದ್ದಿ

ಕಾಂಗ್ರೆಸ್ ಸರ್ಕಾರ 8 ಸಾವಿರ ಕೋಟಿ ರೂ. ಮೊತ್ತದ ರೈತರ ಸಾಲ ಮನ್ನಾ ಮಾಡಿದೆ: ರಾಹುಲ್ ಗಾಂಧಿ

ಮಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 8 ಸಾವಿರ ಕೋಟಿ ರೂ. ರಾಜ್ಯದ ರೈತರ ಸಾಲ ಮನ್ನಾ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಮೂರನೇ ಹಂತದ ಜನಾಶೀರ್ವಾದ ಯಾತ್ರೆ ಅಂಗವಾಗಿ ಮಂಗಳೂರಿನ ಕಾಪುವಿನಲ್ಲಿಂದು ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲ ವರ್ಷಗಳಿಂದ ಬಿಜೆಪಿ ಸರ್ಕಾರ 15 ಶ್ರೀಮಂತರ 2.5 ಲಕ್ಷ ಕೋಟಿ ರೂ. ಮನ್ನಾ ಮಾಡಿದೆ ಎಂದು ಆರೋಪಿಸಿದರು.ರೈತರ ಸಾಲ ಮನ್ನಾ ಮಾಡಿ ಎಂದು...
ಸುದ್ದಿ

ಕಾರಿಂಜಕ್ಕೆ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿ ಮಜಾಮಾಡಲು ಪ್ರಯತ್ನಿಸಿದ ಇರ್ಫಾನ್ ಮತ್ತು ನಜೀಮ್ ಗೆ ಬಿತ್ತು ಗೂಸ – ಕಹಳೆ ನ್ಯೂಸ್

ಪುಂಜಾಲಕಟ್ಟೆ : ರಿಕ್ಷಾ ಚಾಲಕರಿಬ್ಬರು ಸೋಮವಾರ, ಶಾಲಾ ವಿದ್ಯಾರ್ಥಿನಿಯರನ್ನು ಕಾರಿಂಜ ಗುಡ್ಡಕ್ಕೆ ಕರೆದೊಯ್ದು ಅನುಮಾನಸ್ಪದವಾಗಿ ವರ್ತಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಥಳಿಸಿ ಪುಂಜಾಲಕಟ್ಟೆಯ ಪೊಲೀಸರಿಗೊಪ್ಪಿಸಿದ್ದಾರೆ. ರಿಕ್ಷಾ ಚಾಲಕರಾದ ಎನ್.ಸಿ.ರೋಡ್‍ನ ಇರ್ಫಾನ್ ಮತ್ತು ಇರ್ವತ್ತೂರ್‍ನರಿನ ನಝೀಮ್ ಆರೋಪಿಗಳು. ಸ್ಥಳೀಯ ಕಾಲೇಜೊಂದರ ಐವರು ವಿದ್ಯಾರ್ಥಿನಿಯರು ಪ್ರತಿದಿನ ಇರ್ಫಾನ್ ಎಂಬವರ ರಿಕ್ಷಾದಲ್ಲಿ ಮಡಂತ್ಯಾರಿಗೆ ಸಂಜೆ ಟ್ಯೂಷನ್‍ಗೆ ತೆರಳುತ್ತಿದ್ದರು. ಎಂದಿನಂತೆ ಸೋಮವಾರವೂ ತೆರಳಿದ್ದರು. ಆದರೆ ಟ್ಯೂಷನ್ ಬಳಿಕ ಅದೇ ರಿಕ್ಷಾದಲ್ಲಿ ಇನ್ನೊಬ್ಬ ಯುವಕ ನಝೀಮ್ ಎಂಬಾತನ ಜೊತೆ ಸೇರಿ...
ಸುದ್ದಿ

ಎಗ್ರಿಕಲ್ಚರಿಸ್ಟ್ – ಪೇಸ್‍ಬುಕ್ ಗುಂಪಿನಿಂದ ರಾಜಕೀಯ ಪಕ್ಷಗಳಿಗೆ ಮನವಿ – ರೈತರ ನಿಜವಾದ ಬೇಡಿಕೆ ಅನುಷ್ಠಾನಗೊಳಿಸಲು ಒತ್ತಾಯ – ಕಹಳೆ ನ್ಯೂಸ್

ಪುತ್ತೂರು: ಅನೇಕ ವರ್ಷಗಳಿಂದ ಸರಕಾರಗಳು ರೈತರಿಗೆ ವಿವಿಧ ಸೌಲಭ್ಯ ನೀಡುತ್ತಾ ಬಂದಿದೆ. ಆದರೆ ನಿಜವಾದ ಬೇಡಿಕೆಯ ಕಡೆಗೆ ಇನ್ನೂ ಸರಕಾರಗಳು ಗಮನಹರಿಸಿಲ್ಲ. ಹೀಗಾಗಿ "ಎಗ್ರಿಕಲ್ಚರಿಸ್ಟ್" ಪೇಸ್ ಬುಕ್ ಗುಂಪು ಯುವ ರೈತರು ಹಾಗೂ ರೈತರ ಜೊತೆ ಸಂವಹನ ನಡೆಸಿ ಸಂಗ್ರಹಿಸಿದ ಅಭಿಪ್ರಾಯವನ್ನು ಸರಕಾರ ಹಾಗೂ ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ್ದು ಇದನ್ನು ಅನುಷ್ಠಾನ ಮಾಡಬೇಕು ಎಂದು ಎಗ್ರಿಕಲ್ಚರಿಸ್ಟ್" ಪೇಸ್ ಬುಕ್ ಗುಂಪು ರಾಜಕೀಯ ಪಕ್ಷಗಳನ್ನು ಒತ್ತಾಯ ಮಾಡಿದೆ. ಪುತ್ತೂರಿನಲ್ಲಿ ಸೋಮವಾರ...
ಸುದ್ದಿ

ಪ್ರತಿಷ್ಠಿತ ಮಾಲ್ ನ ಸ್ಪಾನಲ್ಲೇ ನಡೆಯುತ್ತಿತ್ತು ವೇಶ್ಯಾವಾಟಿಕೆ ದಂಧೆ ; ಆ ಮಾಲ್ ಯಾವುದು ?

ಬೆಂಗಳೂರು : ಮಾಲ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಟರ್ 50ರಲ್ಲಿರೋ ಒಮೆಕ್ಸ್ ಮಾಲ್ ನ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.   ಆ ಮಾಲ್ ಯಾವುದು ? ; " ಗುರ್ಗಾಂವ್ ನ ಮಾಲ್ " ನ ' ಓಯ್ ಸ್ಟರ್ ಸ್ಪಾನ'ಲ್ಲಿ ಬಹಳ ದಿನಗಳಿಂದ ಈ ದಂಧೆ ನಡೆಯುತ್ತಿತ್ತು. ಈ ಜಾಲವನ್ನು ಬೇಧಿಸಲು ಪೊಲೀಸರು ಸಹ ಸಖತ್...
ಸುದ್ದಿ

ಭಾರತಕ್ಕೂ ಬರಲಿದೆ ಬಿಕಿನಿ ಏರ್ ಲೈನ್ಸ್ …! – ಕಹಳೆ ನ್ಯೂಸ್

ವಿಯೆಟ್ನಾಂನ ವಿಯರ್ ಜೆಟ್ ಸದ್ಯದಲ್ಲೇ ಭಾರತಕ್ಕೂ ಬರುತ್ತಿದೆ. ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿದೆ. ಈ ವಿವಾದಾತ್ಮಕ ವಿಮಾನಯಾನ ಸಂಸ್ಥೆ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆ ವಿಮಾನ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ ಈ ವಿಮಾನ ಹಾರಾಟ ನಡೆಸಲಿದೆ. ಜುಲೈ ಅಥವಾ ಅಗಸ್ಟ್ ನಲ್ಲಿ ಬಿಕಿನಿ ಏರ್ ಲೈನ್ಸ್ ನ ವಿಮಾನ ದೆಹಲಿಯಿಂದ ಹಾರಾಟ ಆರಂಭಿಸಲಿದೆ. ಗಗನಸಖಿಯರನ್ನು ಸೆಕ್ಸಿ ಅವತಾರದಲ್ಲಿ ತೋರಿಸುವ...
ಸುದ್ದಿ

ಉಡುಪಿ ಕೃಷ್ಣ ಮಠದಿಂದ ದೂರ ಉಳಿಯಲಿರುವ ರಾಹುಲ್ ಗಾಂಧಿ – ಕಹಳೆ ನ್ಯೂಸ್

ಉಡುಪಿ : ದೇಶದ ಗಣ್ಯಾತೀಗಣ್ಯರು ಉಡುಪಿ ಜಿಲ್ಲೆಗೆ ಆಗಮಿಸಿದರೆ ಇಲ್ಲಿನ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವುದು ಸಾಮಾನ್ಯ. ಆದ್ರೆ ಮಾರ್ಚ್ 20 ರ ಮಂಗಳವಾರ ಉಡುಪಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೆ ಕೃಷ್ಣ ಮಠದಿಂದ ದೂರ ಉಳಿಯಲು ನಿರ್ಧರಿಸಿದ್ದು, ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಎರಡು ಸುತ್ತು ಪ್ರವಾಸ ಮುಗಿಸಿರುವ ರಾಹುಲ್ ಗಾಂಧಿ ಆ ಸಂದರ್ಭದಲ್ಲಿ ಹಲವು ಮಠ,ಮಂದಿರ, ಮಸೀದಿ...
ಸುದ್ದಿ

ನಾನೊಬ್ಬ ರಾಮ ಭಕ್ತ- ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ – ಕಹಳೆ ನ್ಯೂಸ್

ಮಾ,19: ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿಯೇ ಸುದ್ದಿಯಾಗುತ್ತಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಇದೀಗ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಮುಸ್ಲಿಮನಾಗಿದ್ದರೂ ನಾನು ರಾಮಭಕ್ತ ಎಂದು ಹೇಳಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ನಮ್ಮ ದೇಶವನ್ನು ನಾವೇ ರಕ್ಷಿಸಿಕೊಳ್ಳಬೇಕು ಎಂದು ಹೇಳಿರುವ ಫಾರೂಕ್ ಅಬ್ದುಲ್ಲಾ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಆದರೂ ಪಾಕ್ ವಶದಲ್ಲಿರುವ ಕಾಶ್ಮೀರವನ್ನು ಭಾರತ ವಾಪಸ್ ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ತಾನು ಮುಸ್ಲಿಮನಾಗಿದ್ದರೂ ರಾಮನನ್ನು ಇಷ್ಟಪಡುತ್ತೇನೆ,...
1 1,452 1,453 1,454 1,455 1,456 1,459
Page 1454 of 1459
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ