Thursday, December 5, 2024

archivekahale news

ದಕ್ಷಿಣ ಕನ್ನಡಸುದ್ದಿ

ಪಚ್ಚನಾಡಿ ವಾರ್ಡ್ ನಲ್ಲಿ ಚರಂಡಿ ಹಾಗೂ ಫುಟ್‌ಪಾತ್ ನಿರ್ಮಾಣಕ್ಕೆ ಶಾಸಕ ಡಾ.ಭರತ್.ವೈ ಶೆಟ್ಟಿಯವರಿಂದ ಗುದ್ದಲಿ ಪೂಜೆ – ಕಹಳೆ ನ್ಯೂಸ್

ಮಂಗಳೂರು: ಪಚ್ಚನಾಡಿ ವಾರ್ಡ್ ಬೊಂದೆಲ್ ಜಂಕ್ಷನ್ ಬಳಿಯ ಮುಖ್ಯ ರಸ್ತೆ ಬದಿಯಲ್ಲಿ ಮಹಾನಗರ ಪಾಲಿಕೆ ಪ್ರೀಮಿಯಂ ಎಫ್.ಏ.ಆರ್ ನಿಧಿಯಡಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಚರಂಡಿ ಹಾಗೂ ಫುಟ್‌ಪಾತ್ ನಿರ್ಮಾಣವಾಗಲಿದ್ದು ಈ ಕಾಮಗಾರಿಗೆ ಡಿ.27ರಂದು ಮಂಗಳೂರು ಉತ್ತರ ಶಾಸಕರಾದ ಡಾ! ಭರತ್ ವೈ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಸಂಗೀತಾ.ಆರ್ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಹಾಗೂ ಸ್ಥಳೀಯ ಭಾಗದ ಪಕ್ಷದ ಪ್ರಮುಖರು...
ಸುದ್ದಿ

ಅಕ್ರಮ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡು ರದ್ದು..! – ಸರ್ಕಾರದ ಬೊಕ್ಕಸ ಸೇರಿದ 249 ಕೋಟಿ – ಕಹಳೆ ನ್ಯೂಸ್

ಸುಳ್ಳು ಮಾಹಿತಿ ನೀಡಿ ಅನರ್ಹರು ಪಡೆದುಕೊಂಡಿದ್ದ 4.13 ಲಕ್ಷ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುಗಳನ್ನು ಆಹಾರ ಇಲಾಖೆ ರದ್ದುಪಡಿಸಿದೆ. ಮೂರು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದವರು, ಸರ್ಕಾರಿ ನೌಕರರು, ಪಿಂಚಣಿ ಪಡೆಯುತ್ತಿರುವ ನಿವೃತ್ತರು ಹೀಗೆ ಅನೇಕ ಅನರ್ಹರು ಪಡೆದುಕೊಂಡಿದ್ದು, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಮೃತಪಟ್ಟ ಫಲಾನುಭವಿಗಳ ಹೆಸರಿನಲ್ಲಿ ಆಹಾರಧಾನ್ಯ ಪಡೆಯಲಾಗುತ್ತಿತ್ತು. ಇಂತಹವರನ್ನು ಪತ್ತೆಹಚ್ಚಿ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಪ್ರತಿ ತಿಂಗಳು 82.71 ಲಕ್ಷ ಕೆಜಿ ಅಕ್ಕಿ...
ದಕ್ಷಿಣ ಕನ್ನಡಸುದ್ದಿ

ಮಧುಸೂಧನ್ ಪೈಯವರಿಗೆ ಶಾಸಕ ಡಾ.ವೈ ಭರತ್ ಶೆಟ್ಟಿಯವರಿಂದ ಸನ್ಮಾನ- ಕಹಳೆ ನ್ಯೂಸ್

ಮಂಗಳೂರು : ಗುರುಪುರ ಪದವಿ ಪೂರ್ವ ಕಾಲೇಜ್‌ನ ಕಂಪ್ಯೂಟರ್ ಲ್ಯಾಬ್‌ಗೆ 12 ಕಂಪ್ಯೂಟರ್ ಮತ್ತು ಇನ್ವರ್ಟರ್‌ರನ್ನು ಸೆಂಚುರಿ ರಿಯಲ್ ಎಸ್ಟೇಟ್ ಬೆಂಗಳೂರಿನ ಸಿ.ಎಫ್.ಓ. ಚಾರ್ಟರ್ಡ್ ಅಕೌಂಟೆ0ಟ್ ಮಧುಸೂಧನ್ ಪೈ ಕೊಡುಗೆಯಾಗಿ ನೀಡಿದ್ದಾರೆ. ಕಾಲೇಜಿನ ಗೌರವಾಧ್ಯಕ್ಷರಾದ, ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ. ವೈಯವರು ಮಧುಸೂಧನ್ ಪೈಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್ , ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ರೂಪಾ, ಪ್ರೈಮರಿ ಮುಖ್ಯೋಪಾಧ್ಯಾಯಿನಿ ಜಯಶ್ರೀ...
ಸುದ್ದಿ

ವಿಕಲಚೇತನರಿಗೆ ರಿಯಾಯಿತಿ ದರದ ಬಸ್‌ಪಾಸ್‌ಗಾಗಿ ಕೆಎಸ್‌ಆರ್‌ಟಿಸಿಯಿಂದ ಅರ್ಜಿ ಆಹ್ವಾನ – ಕಹಳೆ ನ್ಯೂಸ್

ಕೆಎಸ್‌ಆರ್‌ಟಿಸಿಯಿ0ದ 2021ನೇ ಸಾಲಿಗೆ ವಿಕಲಚೇತನರಿಂದ (Physically Handicaps) ರಿಯಾಯಿತಿ ದರದ ಬಸ್‌ಪಾಸ್‌ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2022ನೇ  ಸಾಲಿಗೆಗಾಗಿ ದಿನಾಂಕ 01-01-2022 ರಿಂದ 31-12-2022 ರವೆರೆಗೆ ಮಾನ್ಯತೆ ಇರುವಂತೆ ವಿಕಲಚೇತನರಿಗೆ ಬಸ್ ಪಾಸ್ ವಿತರಿಸಬೇಕಿದೆ. ಹೀಗಾಗಿ ಬಸ್‌ಪಾಸ್‌ಗಾಗಿ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದೆ. ವಿಕಲಚೇತನರು ರಿಯಾಯಿತಿದರದ ಬಸ್ ಪಾಸ್ ಗಾಗಿ ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು....
ಸಿನಿಮಾ

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ ನಿಶ್ಚಿತಾರ್ಥ – ಜೋಡಿ ಕಂಡು ಅಭಿಮಾನಿಗಳು ಫುಲ್ ಖುಷ್ – ಕಹಳೆ ನ್ಯೂಸ್

ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯಾಗಿರುವ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರ‍್ತಾ ಇದೆ.   ಒಬ್ಬರಿಗೊಬ್ಬರು ಕೈಹಿಡಿದುಕೊಂಡಿರುವ ಫೋಟೋವನ್ನು ನಟಿ ಅದಿತಿ ಜಾಲತಾಣದಲ್ಲಿ ಹಂಚಿಕೊ0ಡಿದ್ದು, 'ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್ ಆಗಿದೆ. ಸೋಮವಾರಪೇಟೆಯ ಕಾಫಿ ಬೆಳೆಗಾರ ಪಿ.ಡಿ.ಚಂದ್ರಕಾ0ತ್ ಹಾಗೂ ಸುಚರಿತ ದಂಪತಿಗಳ ಪುತ್ರ ಯಶಸ್ ಅವರನ್ನ...
ದಕ್ಷಿಣ ಕನ್ನಡಸುದ್ದಿ

ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು – ಕಹಳೆ ನ್ಯೂಸ್

ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರು ನಗರದ ತಲಪಾಡಿಯಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ನಿವಾಸಿ ಮುಸ್ತಫ(18), ಬಂಧಿತ ಆರೋಪಿ. ಕಳೆದ ಶನಿವಾರ ಸ್ಕೂಟರ್ ನಲ್ಲಿ ಬಂದಿದ್ದ ಯುವಕ ತಲಪಾಡಿಯ ದೇವಿಪುರಕ್ಕೆ ಹೋಗುವ ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಸ್ಥಳೀಯರು ಆರೋಪಿಯ ಚಹರೆಯನ್ನು ಪತ್ತೆ ಹಚ್ಚಿದ್ದರು. ಇಂದು...
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಇಂದು ನಡೆದ ಶಿವಪ್ರೆಂಡ್ಸ್ ಕುರಾಯ-ಖಂಡಿಗ 5 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ – ಕಹಳೆ ನ್ಯೂಸ್

ಶಿವಪ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ-ಬಂದಾರು ಆಶ್ರಯದಲ್ಲಿ 5ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಇಂದು ಶಿವಪ್ರೆಂಡ್ಸ್ ಕ್ರೀಡಾಂಗಣ ಖಂಡಿಗದಲ್ಲಿ ನಡೆಯಿತು. ಪಂದ್ಯಾಟವನ್ನು ರಘುಪತಿ ಭಟ್ ಅಣಬೆ ಅವರು ಉದ್ಘಾಟಿಸಿದ್ರು. ಪ್ರಗತಿಪರ ಕೃಷಿಕ ಸುಂದರ ಗೌಡರ ಅಧ್ಯಕ್ಷತೆಯಲ್ಲಿ ನಡೆಯುವ ಪಂದ್ಯಾಟದಲ್ಲಿ, ಸ.ಹಿ.ಪ್ರಾ.ಶಾಲೆ ಮೈರೋಳ್ತಡ್ಕ ಶಿಕ್ಷಕರಾದ ಮಾಧವ ಗೌಡ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶಂಕರ್ ರಾವ್, ಬಂದಾರು ಗ್ರಾ.ಪಂ ಸದಸ್ಯರಾದ ದಿನೇಶ ಗೌಡ ಖಂಡಿಗ ಅತಿಥಿಗಳಾಗಿ ಭಾಗಿಯಾಗಿದ್ದಾರೆ. ಪಂದ್ಯಾಟದ ಸಭಾ...
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಕ್ರಿಸ್‍ಮಸ್ ಆಚರಣೆ- ಕಹಳೆ ನ್ಯೂಸ್

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ವಿಜ್ಞಾನ ಕಾಲೇಜು, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್‍ಮಸ್ ಸಂಭ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮೂಡುಬಿದಿರೆ ಪುರಸಭೆ ಸದಸ್ಯ ಜೊಸ್ಸಿ ಮೆನೇಜಸ್ ಮಾತನಾಡಿ, ಕ್ರಿಸ್ಮಸ್ ದೀಪಾವಳಿಯಂತೆ ಬೆಳಕಿನ ಹಬ್ಬ. ನಮ್ಮ ಬದುಕು ಇನ್ನೊಬ್ಬರ ಜೀವನಕ್ಕೆ ಬೆಳಕಾಗಬೇಕು ಎನ್ನುವುದನ್ನು ಕ್ರಿಸ್‍ಮಸ್ ಸಾರುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ಸೇವೆಯೊಂದಿಗೆ ಬದುಕುವ ಸಂದೇಶವನ್ನು ಕ್ರಿಸ್ಮಸ್ ನೀಡುತ್ತದೆ. ಮಾನವೀಯ ಮೌಲ್ಯಗಳನ್ನು ಅರಿತು ಸರ್ವರಿಗೂ ಒಳಿತು ಮಾಡಬೇಕೆನ್ನುವುದನ್ನು...
1 5 6 7 8 9 1,459
Page 7 of 1459